ಕನ್ನಡಪ್ರಭ ಬಳಗದ ಶ್ರಮ ಸಾರ್ಥಕ
ಗದಗ: ರಾಜ್ಯದಲ್ಲಿ ನಡೆಯುತ್ತಿರುವ ಕಲಬೆರಕೆ ಹಾಲಿನ ಕುರಿತು ಕನ್ನಡಪ್ರಭ ಅತ್ಯುತ್ತಮವಾದ ಕಾಳಜಿ ತೋರ್ಪಡಿಸಿ, ಕಲಬೆರಕೆ ಹಾಲಿನಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ರಾಜ್ಯದ ಜನತೆ ಕಣ್ಣು ತೆರೆಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಈ ಅಕ್ರಮ ಹಾಲಿನ ದಂಧೆ ಹಾಗೂ ಇದು ಸಾರ್ವಜನಿಕರ ಜೀವಕ್ಕೆ ಯಾವ ರೀತಿಯಲ್ಲಿ ಕುತ್ತಾಗುತ್ತಿದೆ ಎನ್ನುವ ವಿಷಯವನ್ನು ಮನಮುಟ್ಟುವಂತೆ ಅದರಲ್ಲಿಯೂ ಬೆಳೆಯುವ ಮಕ್ಕಳ ಮೇಲೆ ಈ ಹಾಲಿನಿಂದಾಗುವ ಪರಿಣಾಮದ ಬಗ್ಗೆ ತಿಳಿಸಿದ ಕನ್ನಡಪ್ರಭ ಬಳಗದ ಶ್ರಮ ಸಾರ್ಥಕ.
-ವಿಜಯ ಮುಳಗುಂದ
ಸಾಮಾಜಿಕ ಹೋರಾಟಗಾರ.
ಕಾಳಜಿಗೆ ಶ್ಲಾಘನೆ
ಗದಗ: ರಾಜ್ಯದಲ್ಲಿ ಕಲಬೆರಕೆ ಹಾಲು ಹಾಗೂ ಅದರಿಂದ ಸಾರ್ವಜನಿಕರ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಕನ್ನಡಪ್ರಭ ಬೆಳಕು ಚೆಲ್ಲುವ ಮೂಲಕ ರಾಜ್ಯದಲ್ಲಿ ಜಾಗೃತಿಯ ಜಾಗಟೆಯನ್ನು ಬಾರಿಸಿದೆ. ಕಲಬೆರಕೆ ಹಾಲಿನಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದು, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಕಲಿ ಹಾಲು ಮಾರಾಟವಾಗದಂತೆ ಅಗತ್ಯ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಾರ್ವಜನಿಕರು ಕೂಡಾ ಹಾಲು ಬಳಕೆ ಮಾಡುವ ಪೂರ್ವದಲ್ಲಿ ಹೆಚ್ಚಿನ ಗಮನ ನೀಡಿ ಖರೀದಿಸಬೇಕು. ಕಲಬೆರಕೆ ಹಾಲಿನ ವಿಷಯದಲ್ಲಿ ರಾಜ್ಯದ ಜನತೆ ಕಣ್ಣು ತೆರೆಸುವ ಕಾರ್ಯಕ್ಕೆ ಮುಂದಾಗಿ ಯಶಸ್ವಿಯಾಗಿರುವ ಕನ್ನಡಪ್ರಭದ ಕಾರ್ಯ ಶ್ಲಾಘನೀಯ.
ಟ ಹೇಮಗಿರೀಶ ಹಾವಿನಾಳ
ಜಿಪಂ ಸದಸ್ಯ ಹಮ್ಮಿಗಿ
ಇಂದು ವಸ್ತು ಪ್ರದರ್ಶನ
ಗದಗ: ಗದಗ ಜಿಲ್ಲಾಮಟ್ಟದ 2013-14ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ಕರಕುಶಲ ಉತ್ಸವ-2013 ವಸ್ತುಪ್ರದರ್ಶನವನ್ನು ಡಿ. 13ರ ಬೆಳಗ್ಗೆ 10.30ಕ್ಕೆ ನಗರದ ಹಾತಲಗೇರಿ ರಸ್ತೆಯಲ್ಲಿನ ಕರ್ನಾಟಕ ವಿದ್ಯಾವರ್ದಕ ಸಮಿತಿಯ ಜ. ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ತರಬೇತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ತಾಲೂಕಿನ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸುತ್ತಿದ್ದು, ಗದಗ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ವೃತ್ತಿ ಶಿಕ್ಷಣ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಬೇಕೆಂದು ಗದಗ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಕೆ. ನಿಂಬನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಬ್ಯುಲೆನ್ಸ್ ಸೇವೆ ಅವಶ್ಯ: ಶಾಸಕ ದೊಡ್ಡಮನಿ
ಮುಂಡರಗಿ: ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯದ ದೃಷ್ಟಿಯಿಂದ ತುರ್ತು ಸೇವೆಗಾಗಿ ಅಂಬ್ಯುಲೆನ್ಸ್ ಅವಶ್ಯ. ಗ್ರಾಮೀಣ ಪ್ರದೇಶದ ಸಾರ್ವಜನಿಕರು ಸಹಕರಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಗುರುವಾರ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ಗೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಆರೋಗ್ಯದ ಕುರಿತು ಹೆಚ್ಚು ಕಾಳಜಿವಹಿಸುತ್ತಿದ್ದು, ಆಸ್ಪತ್ರೆಯಲ್ಲಿರುವ ವೈದ್ಯರ ಸಮಸ್ಯೆಯ ಕುರಿತು ಸಂಬಂಧಪಟ್ಟ ಇಲಾಖೆ ಸಚಿವರಿಗೆ ಮನವರಿಕೆ ಮಾಡಿದ್ದು, ಇದೀಗ ಎನ್.ಆರ್.ಎಚ್.ಎಂ. ಅಡಿಯಲ್ಲಿ 3 ವೈದ್ಯರನ್ನು ತೆಗೆದುಕೊಳ್ಳಲಾಗಿದೆ. ನರ್ಸ್ಗಳನ್ನು ಸಹ ತೆಗೆದುಕೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ಒದಗಿಸಲು ತಾವು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿದರು. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಪ್ರಕಾಶ ಹೊಸಮನಿ, ದೇವಪ್ಪ ಕಂಬಳಿ, ಪುರಸಭೆ ಸದಸ್ಯ ಫಕ್ರುದ್ದೀನ್ ಹಾರೋಗೇರಿ, ಮುದಿಯಪ್ಪ ಕುಂಬಾರ, ರಾಮು ಭಜಂತ್ರಿ, ಬಸವರಾಜ ರಾಮೇನಹಳ್ಳಿ, ಪ್ರೇಮವ್ವ ಗಣದಿನ್ನಿ, ಲಿಂಗರಾಜಗೌಡ ಪಾಟೀಲ, ವೀರೇಶ ಸಜ್ಜನರ, ಶೇಖರಾಜ ಹೊಸಮನಿ, ಎಸ್.ಡಿ. ಮಕಾಂದಾರ, ರಾಮು ಕಲಾಲ, ಧ್ರುವಕುಮಾರ ಹೊಸಮನಿ, ಆನಂದಗೌಡ ಪಾಟೀಲ, ಪಾಲಾಕ್ಷಿ ಗಣದಿನ್ನಿ, ಬಿ.ಎಸ್. ಮೇಟಿ, ಎ.ಪಿ.ದಂಡೀನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

