ಗದಗ

ಗದಗ: 17ರಿಂದ ವಿಜ್ಞಾನ ವಸ್ತು ಪ್ರದರ್ಶನ

Published On :

ಗದಗ: ಪ್ರಾಯೋಗಿಕ ವಿಜ್ಞಾನ ಇಂದಿನ ಅವಶ್ಯಕತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡುವ ನಿಟ್ಟಿನಲ್ಲಿ ಡಿ. 17 ಮತ್ತು 18ರಂದು ನಗರದ ಆಂಗ್ಲೋ ಉರ್ದು ಬಾಲಕ ಮತ್ತು ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ವಿಜ್ಞಾನ ವಸ್ತುಪ್ರದರ್ಶವನ್ನು ಏರ್ಪಡಿಸಲಾಗಿದೆ ಎಂದು ಆಂಗ್ಲೋ ಉರ್ದು ಶಾಲಾ ಸಮಿತಿಯ ಚೇರ್‌ಮನ್ ಸರ್ಫರಾಜಅಹ್ಮದ ಉಮಚಗಿ ಹೇಳಿದರು.
ಶುಕ್ರವಾರ ನಗರದ ಆಂಗ್ಲೋ ಉರ್ದು ಶಾಲಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆಂಗ್ಲೋ ಉರ್ದು ಶಿಕ್ಷಣ ಸಂಸ್ಥೆ ಹಾಗೂ ಹುಬ್ಬಳ್ಳಿಯ ಅಗಸ್ಥ್ಯ ಅಂತಾರಾಷ್ಟ್ರೀಯ ಫೌಂಡೇಶನ್ ಸಹಯೋಗದಲ್ಲಿ ಜರುಗುತ್ತಿರುವ ಈ 2 ದಿನಗಳ ವಸ್ತುಪ್ರದರ್ಶನದಲ್ಲಿ ಅವಳಿ ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಮೂಲವಿಜ್ಞಾನದ ಪ್ರಾತ್ಯಕ್ಷಿಕೆಯ ಕುರಿತು ಸಮಗ್ರ ಮಾಹಿತಿ ಪಡೆಯಲಿದ್ದಾರೆ.
ಡಿ. 17ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಸಮಾರಂಭದಲ್ಲಿ ಅತಿಥಿಗಳಾಗಿ ರಾಜ್ಯ ವಿಜ್ಞಾನ ಪರಿಷತ್‌ನ ಅಧ್ಯಕ್ಷ ಪ್ರಾ.ಎಸ್.ವಿ.ಸಂಕನೂರ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ಆಂಗ್ಲೋ ಉರ್ದು ಶಾಲಾ ಸಮಿತಿಯ ಕಾರ್ಯದರ್ಶಿ ಎಂ.ಎಂ. ಶೇಖ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾ. ಕೆ.ಎಚ್. ಬೇಲೂ, ಎ.ಡಿ. ನವಲಗುಂದ, ಎಲ್.ಆರ್. ಇಟಗಿ, ರಾಜೇಸಾಬ ಬಾಗಲಕೋಟಿ, ಜಿಲಾನಿ ಉಮಚಗಿ, ಜಿ.ಐ. ಮುಜಾವರ, ಎಂ.ಎಂ. ಕಮಾನಗಾರ, ಎಂ.ಎ. ರಿಕಾರ್ಟಿ, ಜೆಡ್.ಎ. ಮುಲ್ಲಾ, ಎಂ.ಎಚ್. ರಾಣಿಬೆನ್ನೂರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.