ಗದಗ

ಸುದ್ದಿ ಸಂಕ್ಷೇಪ

Published On :

ಸಾಲಮನ್ನಾ ಹಣ ಬಿಡುಗಡೆ
ಹಾವೇರಿ: ರಾಜ್ಯ ಸರ್ಕಾರ ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ಮೂಲಕ ಆಗಸ್ಟ್ 2012ರಿಂದ ಜುಲೈ 2013ರ ಅವಧಿಯಲ್ಲಿ ಪಡೆದ 53,422 ರೈತರ ಅಲ್ಪಾವಧಿ ಬೆಳೆಸಾಲವನ್ನು ಮನ್ನಾ ಮಾಡಿತ್ತು. ಮೂರು ಜಿಲ್ಲೆಯಿಂದ ರು. 116.20 ಕೋಟಿ ಅಸಲು ಮತ್ತು ರು. 11.76 ಕೋಟಿ ಬಡ್ಡಿ ಸೇರಿ ಒಟ್ಟು ರು. 127.96 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಹಾವೇರಿ ಜಿಲ್ಲೆಯ 20,398 ರೈತರ ರು. 41.52 ಕೋಟಿ ಅಸಲು ಹಾಗೂ ರು. 4.23 ಕೋಟಿ ಬಡ್ಡಿ ಮನ್ನಾ ಆಗಿದೆ. ಧಾರವಾಡ ಜಿಲ್ಲೆಯ ರು. 41.55 ಕೋಟಿ ಅಸಲು, ರು. 4.08 ಕೋಟಿ ಬಡ್ಡಿ, ಗದಗ ಜಿಲ್ಲೆಯ ರು. 33.12 ಕೋಟಿ ಅಸಲು, ರು. 3.44 ಕೋಟಿ ಬಡ್ಡಿ ಮನ್ನಾ ಮಾಡಲಾಗಿದೆ. ಸರ್ಕಾರ 18787 ರೈತರಿಗೆ ರು. 53.40 ಕೋಟಿ ಸಾಲ ಮನ್ನಾದ ಹಣ ಬಿಡುಗಡೆ ಮಾಡಿದೆ. ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಿಗೆ ರು. 3.33 ಕೋಟಿ ಬಡ್ಡಿ ಹಣ ಬಿಡುಗಡೆಯಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ  ತಿಳಿಸಿದ್ದಾರೆ.
ಇಂದು ಪರಿಸರ ಜಾಗೃತಿ
ನರೇಗಲ್ಲ: ಸ್ಥಳೀಯ ಗೃಹರಕ್ಷಕ ದಳದ ಅಡಿಯಲ್ಲಿ ಡಿ. 14ರ ಸಂಜೆ 4 ಗಂಟೆಗೆ ಪಟ್ಟಣದ ಕೆ.ಎಸ್.ಎಸ್. ಮೈದಾನದಲ್ಲಿ ಭೂಮಿ ಒಂದೇ ಭವಿಷ್ಯ ಒಂದೇ ಎನ್ನುವ ವಿಷಯವಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗೃಹರಕ್ಷಕ ದಳದ ಘಟಕಾಧಿಕಾರಿ ಸುರೇಶ ಹಳ್ಳಿಕೇರಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಪಪಂ ಸದಸ್ಯ ಕಲ್ಮೇಶ ತೊಂಡಿಹಾಳ, ರಮೇಶ ಕಳಕೊಣ್ಣವರ, ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ, ಓಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿ, ಉಪನ್ಯಾಸಕ ಶಿವಾನಂದ ಗೊಗೇರಿ ಭಾಗವಹಿಸುವರು ಎಂದು ಗೃಹರಕ್ಷಕ ದಳದ ಘಟಕಾಧಿಕಾರಿ ಸುರೇಶ ಹಳ್ಳಿಕೇರಿ  ತಿಳಿಸಿದ್ದಾರೆ.
ಗಂಗೂಬಾಯಿ ನಿಧನ
ಮುಂಡರಗಿ:  ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ, ಗೊಂಧಳಿ ಸಮಾಜದ ಹಿರಿಯರಾದ ಗಂಗೂಬಾಯಿ ಶಂಕ್ರಪ್ಪ ಬೀಸೆ (59) ಶುಕ್ರವಾರ ನಿಧನರಾದರು. ಮೃತರು ಪತಿ ಹಾಗೂ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಸಂತಾಪ:  ಗಂಗೂಬಾಯಿ ನಿಧನಕ್ಕೆ ಮುಂಡರಗಿ ಪುರಸಭೆ ಸದಸ್ಯ ರಾಘವೇಂದ್ರ ಕುರಿಯವರ, ಮುದಿಯಪ್ಪ ಕುಂಬಾರ, ಬಸವರಾಜ ಗಣಾಚಾರಿ, ಅಬ್ದುಲ್ ಹಣಗಿ, ಪರಶುರಾಮ ಕರಡಿಕೊಳ್ಳ, ಪುರಸಭೆ ಮಾಜಿ ಸದಸ್ಯ ಅಶೋಕ ಹುಬ್ಬಳ್ಳಿ, ಕೆ. ತಿಪ್ಪೇಸ್ವಾಮಿ, ನಾಗರಾಜ ಮುರಡಿ, ಮಂಜುನಾಥ ಕಟ್ಟಿಮನಿ, ಬಸವರಾಜ ಸಬರದ, ಯಲ್ಲಪ್ಪ ಗಣಾಚಾರಿ, ದೇವರಾಜ ದೊಡ್ಡಮನಿ, ಮಲ್ಲು ಬಂಡಿವಡ್ಡರ, ನಿಂಗನಗೌಡ ಪೊಲೀಸ್‌ಪಾಟೀಲ್, ಸಂತೋಷಕುಮಾರ ಮುರುಡಿ ಹಾಗೂ ಗೊಂಧಳಿ ಸಮಾಜದ ಹಿರಿಯರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.