ಪಟೇಲರ ಬದುಕು ಪಠ್ಯದಲ್ಲಿ ಅಳವಡಿಸಿ
ಗದಗ: ರಾಷ್ಟ್ರಪ್ರೇಮಿ ವಲ್ಲಭಭಾಯಿ ಪಟೇಲರ ಜೀವನಾದರ್ಶಗಳ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಪಠ್ಯದಲ್ಲಿ ಅಳವಡಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಪ್ರಾ. ಕೆ.ಎಚ್. ಬೇಲೂರ ಹೇಳಿದರು.
ಅವರು ಭಾನುವಾರ ನಗರದ ಜ. ತೋಂಟದಾರ್ಯ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಗದಗ ಜಿಲ್ಲಾ ಲೋಹಸಂಗ್ರಹಣಾ ಸಮಿತಿ ವತಿಯಿಂದ ಸರ್ದಾರ ವಲ್ಲಭಭಾಯಿ ಪಟೇಲರ ಪುಣ್ಯಸ್ಮರಣೆಯ ನಿಮಿತ್ತ ಏರ್ಪಡಿಸಲಾಗಿದ್ದ ಏಕತಾ ಓಟ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವ್ಯಕ್ತಿಯಾಗಿ ಜನ್ಮತಳೆದು ಅದ್ಭುತ ಶಕ್ತಿಯಾಗಿ ಹೊರಹೊಮ್ಮಿದ ರಾಷ್ಟ್ರಪ್ರೇಮಿ ಪಟೇಲರ ಮೇರು ವ್ಯಕ್ತಿತ್ವ ಭಾರತದಲ್ಲಿ ಸಮಗ್ರತೆ, ಏಕತೆ, ಸ್ಥಾಪಿಸಲು ಪ್ರೇರಣೆಯಾಗಬೇಕು. ಪ್ರಾದೇಶಿಕ ಸಮಸ್ಯೆಗಳೊಂದಿಗೆ ದೇಶವನ್ನು ನಕ್ಸಲ್, ಭಯೋತ್ಪಾದನೆ ಸಮಸ್ಯೆ ಗಂಭೀರವಾಗಿ ಕಾಡುತ್ತಿರುವ ಸಂದರ್ಭದಲ್ಲಿ ಕಾಯಕ ಪರಿವರ್ತನೆಗೆ ಪ್ರಾಮುಖ್ಯತೆ ನೀಡಿದ ನೇರ ನಿಷ್ಠೂರವಾದಿ ಪಟೇಲರಾಗಿದ್ದು, ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ತಿಳಿಯಬೇಕಾದಲ್ಲಿ ಸರ್ಕಾರ ಪಟೇಲರ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪಠ್ಯದಲ್ಲಿ ಅಳವಡಿಸಿ ಇಂದಿನ ಯುವಶಕ್ತಿಯಲ್ಲಿ ಹೊಸಚೈತನ್ಯ ಮೂಡಿಸಬೇಕಾಗಿದೆ ಎಂದರು.
ಮಾಜಿ ಸಚಿವ ಸಿ.ಸಿ. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ, ಜಿಲ್ಲಾ ಕೆಜೆಪಿ ಅಧ್ಯಕ್ಷ ರಾಜು ಕುರಡಗಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ರುದ್ರಣ್ಣ ಗುಳಗುಳಿ, ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ, ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ಶ್ರೀನಿವಾಸ ಕರಿ ಮುಂತಾದವರು ಪಾಲ್ಗೊಂಡಿದ್ದರು. ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಯೋಜಕ ಮೋಹನ ಮಾಳಶೆಟ್ಟಿ ಸ್ವಾಗತಿಸಿದರು. ಸಹಸಂಯೋಜಕ ಶ್ರೀಪತಿ ಉಡುಪಿ ವಂದಿಸಿದರು.
ಏಕತಾ ಓಟಕ್ಕೆ ಚಾಲನೆ: ಸರ್ದಾರ ವಲ್ಲಭಭಾಯಿ ಪಟೇಲರ 182 ಮೀಟರ್ ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆ ಸ್ಥಾಪಿಸುವ ಕಾರ್ಯ ಗುಜರಾತ ರಾಜ್ಯದ ಸಾಧುಬೇಟ ದ್ವೀಪದಲ್ಲಿ ಈಗಾಗಲೇ ಆರಂಭವಾಗಿರುವ ಹಿನ್ನೆಲೆಯಲ್ಲಿ ಲೋಹಸಂಗ್ರಹಣಾ ಅಭಿಯಾನಕ್ಕೆ ಪೂರಕವಾಗಿ ಭಾನುವಾರ ನಗರದಲ್ಲಿ ಬೃಹತ್ ಏಕತಾ ಓಟ, ಏಕತಾ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ ನಗರದ ಮುಳಗುಂದ ರಸ್ತೆಯಲ್ಲಿರುವ ರೇಣುಕಾ ಮಂದಿರದ ಬಳಿ ಡಾ. ಎನ್.ಬಿ.ಪಾಟೀಲ ಏಕತಾ ಓಟಕ್ಕೆ ಚಾಲನೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಮಾಜಿ ಸಚಿವ ಸಿ.ಸಿ. ಪಾಟೀಲ, ಮಾಜಿ ಶಾಸಕ ರಾಮಣ್ಣ ಲಮಾಣಿ, ಲೋಹ ಸಂಗ್ರಹಣಾ ಸಮಿತಿಯ ಜಿಲ್ಲಾ ಸಂಯೋಜಕ ಮೋಹನ ಮಾಳಶೆಟ್ಟಿ, ಸಹ ಸಂಯೋಜಕ ಶ್ರೀಪತಿ ಉಡುಪಿ, ಎಸ್.ಎಂ. ಪಾಟೀಲ, ಎಂ.ಎಂ. ಹಿರೇಮಠ, ಪ್ರವೀಣ ಬನ್ಸಾಲಿ, ಪ್ರದೀಪ ನವಲಗುಂದ, ಛಗನ್‌ರಾಜ ಪುರೋಹಿತ, ಅಶೋಕ ನವಲಗುಂದ, ಶ್ರೀನಿವಾಸ ಹುಬ್ಬಳ್ಳಿ, ರುದ್ರಣ್ಣ ಗುಳಗುಳಿ, ಅರವಿಂದ ಹುಲ್ಲೂರ, ಸದಾನಂದ ಪಿಳ್ಳಿ, ಮೋಹನ ಹೊನ್ನಳ್ಳಿ, ಎಂ.ಎಸ್. ಕರಿಗೌಡ್ರ, ಶ್ರೀಕಾಂತ ಖಟವಟೆ, ಆರ್.ಸಿ. ಮೇರವಾಡೆ, ಲಿಂಗನಗೌಡ ಹರ್ತಿ, ಜಿಪಂ ಸದಸ್ಯ ಎಂ.ಎಸ್. ಪಾಟೀಲ, ಹೇಮಗಿರೀಶ ಹಾವಿನಾಳ, ಬೀರಪ್ಪ ಬಂಡಿ, ಕಮಲವ್ವ ಸಜ್ಜನರ, ವಂದನಾ ವರ್ಣೇಕರ, ಜಿಲ್ಲಾ ಮಹಿಳಾ ಬಿಜೆಪಿ ಮೋರ್ಚಾ ಘಟಕದ ಅಧ್ಯಕ್ಷೆ ಜಯಶ್ರೀ ಉಗಲಾಟದ, ಶಹರ ಅಧ್ಯಕ್ಷೆ ಅಶ್ವಿನಿ ಜಗತಾಪ, ಶಾರದ ಸಜ್ಜನ, ಸುಶೀಲಾ ಶೀರಿ, ಕಮಲಾಕ್ಷಿ ಗೊಂದಿ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

