ಗದಗ

ಇಂದು 2150ನೇ ಶಿವಾನುಭವ

Published On :

ಗದಗ:  ನಗರದ ಜ. ತೋಂಟದಾರ್ಯ ಮಠದಲ್ಲಿ ಡಿ. 16ರ ಸಂಜೆ 7 ಗಂಟೆಗೆ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2150ನೇ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ವಹಿಸುವರು. ಉಪನ್ಯಾಸಕರಾಗಿ ಸಾಹಿತಿ ಪ್ರೊ. ಧರಣೇಂದ್ರ ಕುರಕುರಿ ಆಗಮಿಸುವರು. ಇದೇ ಸಂದರ್ಭದಲ್ಲಿ ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ ಲಂಬಾಣಿ ಭಾಷೆಯಲ್ಲಿ ಭಾವರೂಪಾಂತರಗೊಂಡ ಕೃತಿಯನ್ನು ಗೋಟಗೋಡಿಯ ಕರ್ನಾಟಕ ಜಾನಪದ ವಿವಿಯ ಕುಲಪತಿ ಡಾ. ಡಿ.ಬಿ. ನಾಟಕ ಬಿಡುಗಡೆಗೊಳಿಸುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಇಂದು ಶಿವಾನುಭವ
ನರಗುಂದ:  ತಾಲೂಕಿನ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರುಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆಯ ವತಿಯಿಂದ ಡಿ. 16ರಂದು ಸಂಜೆ 6.30 ಗಂಟೆಗೆ 221ನೇ ಶಿವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಬನಹಟ್ಟಿಯ ರುದ್ರೇಶ್ವರ ಮಠದ ಸೊಲಬಯ್ಯ ಶ್ರೀಗಳು ವಹಿಸುವರು. ಅತಿಥಿಗಳಾಗಿ ಹೆಬ್ಬಾಳದ ವೀರೇಶ್ವರ ದೇವರು, ಬಿ.ಬಿ. ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಲಕ್ಷ್ಮಣ ನಿಂಗೋಜಿ, ಪಿ.ಎಫ್. ಆನಂದ್ರಬಾವಿ, ಚಿದಂಬರ ನಿಂಬರಗಿ, ಆರ್.ಟಿ. ಕುರಹಟ್ಟಿ, ಡಾ. ವೈ.ಎಂ.ಹಡಪದ, ನಾಗಪ್ಪ ಹಡಪದ ಉಪಸ್ಥಿತರಿರುವರು. ನಿವೃತ್ತ ಶಿಕ್ಷಕ ಬಿ.ಬಿ. ಹೂಗಾರ ಹಾಗೂ ಮೇಘನಾ ಆನಂದ್ರಬಾವಿ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಟೆನಿಸ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಮರ್ಥ, ನಾಗರಾಜ, ಕಾಜಗಾರ, ಶಿರೋಳ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಶಸ್ತಿ ಪಡೆದ ಭಾಗ್ಯಶ್ರೀ ಡಂಬಳ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.