ಇಂದು ಕಾರ್ತಿಕೋತ್ಸವ
ಗಜೇಂದ್ರಗಡ: ನಾಡಿನ ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ದೇವರ ಮಹಾ ಕಾರ್ತಿಕೋತ್ಸವವು ಡಿ. 17ರಂದು ಹೊಸ್ತಿಲ ಹುಣ್ಣಿಮೆಯ ಸಂಜೆ 6 ಗಂಟೆಗೆ ಜರುಗಲಿದೆ. ಮಹಾ ಕಾರ್ತಿಕೋತ್ಸವ ನಿಮಿತ್ತ ಅಂದು ಬೆಳಗ್ಗೆ ಕಾಲಕಾಲೇಶ್ವರ ಮಹಾಸ್ವಾಮಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸಂಜೆ ಐತಿಹಾಸಿಕ ಕಲ್ಲಿನ ದೀಪಸ್ತಂಭಗಳಿಗೆ ಸಹಸ್ರಾರು ಭಕ್ತರು ದೀಪ ಬೆಳಗಿಸಿ ಸ್ವಯಂಭುಲಿಂಗ ಕಾಲಕಾಲೇಶ್ವರ ದೇವರ ದರ್ಶನ ಪಡೆಯುವರು. ಬಳಿಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ದೇಗುಲದ ಧರ್ಮದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ರೇಣುಕಾಂಬ ಕಾರ್ತಿಕೋತ್ಸವ
ಮುಂಡರಗಿ: ತಾಲೂಕಿನ ಬಿದರಹಳ್ಳಿ ರೇಣುಕಾಂಬಾದೇವಿಯ ಕಾರ್ತಿಕೋತ್ಸವ ಡಿ. 17 ಮತ್ತು 18ರಂದು ಓಕಳಿ ಕಾರ್ಯಕ್ರಮಗಳು ಜರುಗುವವು. 17ರಂದು ರಾತ್ರಿ 11 ಗಂಟೆಗೆ ಧ್ವಜದ ಲಿಲಾವು ಜರಗುವುದು ಮತ್ತು ಗುಡಗೇರಿಯ ತಾಜ ಮ್ಯೂಜಿಕಲ್ ಬ್ಯಾಂಡ್ ಕಂಪನಿಯವರಿಂದ ಕಾರ್ಯಕ್ರಮ ಮತ್ತು ಡೊಳ್ಳಿನ ಮೇಳದವರಿಂದ ವಿಶೇಷ ಕಾರ್ಯಕ್ರಗಳು ಜರಗುವವು ಎಂದು ಶ್ರೀ ರೇಣುಕಾಂಬ ಟ್ರಸ್ಟ್ ಚೇರಮನ್ ಬಿ.ಆರ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
29ರಂದು ಸನ್ಮಾನ ಕಾರ್ಯಕ್ರಮ
ಹೊಳೆಆಲೂರು: ಸ್ಥಳೀಯ ವಿಶ್ವಕರ್ಮ ಸಮಾಜದಿಂದ ರೋಣ ತಾಲೂಕಿನ ವಿಶ್ವಕರ್ಮ ಸಮಾಜದ ಬಾಂಧವರಿಗೆ 80 ವರ್ಷ ವಯಸ್ಸಿನ ಹಿರಿಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ. 29ರಂದು ಹೊಳೆಆಲೂರಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರೋಣ ತಾಲೂಕಿನ ವಿಶ್ವಕರ್ಮ ಸಮಾಜದ ಹಿರಿಯರವರನ್ನು ಮತ್ತು ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿ ಪಾಸಾದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಅರ್ಹರು ಆಧಾರ್ ಕಾರ್ಡ್ ಇತರೆ ದಾಖಲೆ ಪತ್ರಗಳೊಂದಿಗೆ ಡಿ. 20ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೊಳೆಆಲೂರು ವಿಶ್ವಕರ್ಮ ಸಮಾಜದ ಪಾಂಡುರಂಗ ಪತ್ತಾರ: 9448640331, ಕಾರ್ಯದರ್ಶಿಗಳಾದ ವಿಶ್ವನಾಥ ಬಡಿಗೇರ: 9742470556 ಇವರನ್ನು ಸಂಪರ್ಕಿಸುವಂತೆ ಅಧ್ಯಕ್ಷ ಪಾಂಡುರಂಗ ಪತ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

