ಗಣಿತ ಕಬ್ಬಿಣದ ಕಡಲೆಯಾಗದಿರಲಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 16
ಶಿಕ್ಷಕರು ಗಣಿತ ವಿಷಯದ ಕುರಿತು ಇರುವ ಭಯವನ್ನು ಹೋಗಲಾಡಿಸಬೇಕು. ಅದು ಕಬ್ಬಿಣದ ಕಡಲೆಯಾಗಬಾರದು ಎಂದು ನಗರಸಭೆ ಸದಸ್ಯ ಹಾಗೂ ವಿದ್ಯಾದಾನ ಶಿಕ್ಷಣ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಹೇಳಿದರು.
ಈಚೆಗೆ ವಿದ್ಯಾದಾನ ಸಮಿತಿಯ ವಿಡಿಎಸ್ ಬಾಲಕರ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗದಗ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಹರ ವಲಯ ಗಣಿತ ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ ಮಾತನಾಡಿ, ಶಿಕ್ಷಕರು ಆಧಾರ ಗ್ರಂಥಗಳನ್ನು ಬಳಸಿ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಗುಣಾತ್ಮಕ ಶಿಕ್ಷಣ ನೀಡಲು ಕರೆ ನೀಡಿದರು.
ಗಣಿತ ವಿಷಯದ ಪರೀವಿಕ್ಷಕ ಎಸ್.ಎನ್. ಖಾಜಿ ಮಾತನಾಡಿ, ಶಹರ ವಲಯದ ಗಣಿತ ಶಿಕ್ಷಕರ ವೇದಿಕೆ ಸ್ಥಾಪಿಸುವುದರ ಮೂಲಕ ಎಲ್ಲ ಶಿಕ್ಷಕರು ಇದರ ಲಾಭ ಪಡೆದು ತಮ್ಮ ಗಣಿತ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಗಣಿತ ವಿಷಯ ಶಿಕ್ಷಕರ ವೇದಿಕೆಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎನ್.ಎಸ್. ಬಟ್ಟೂರ, ಉಪಾಧ್ಯಕ್ಷರಾಗಿ ಪದ್ಮಾ ಹುಂಬಿ, ಕಾರ್ಯದರ್ಶಿಯಾಗಿ ಎನ್.ವಿ. ಜೋಶಿ, ಸಹಕಾರ್ಯದರ್ಶಿಯಾಗಿ ಬಿ.ಕೆ. ಬಳಗೇರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಕೊಟಗಿ, ವಿಷಯ ಪರಿವೀಕ್ಷಕ ಫಾರೂಕಿ, ತಿರುಮಲೆ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಎ.ಬಿ. ಕಾಳೆ ಸ್ವಾಗತಿಸಿದರು. ಎಸ್.ಎನ್. ಖಾಜಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

