ಜನಪದ ಕಲೆಗೆ ಅಳಿವಿಲ್ಲ: ದೊಡ್ಡಮನಿ
ಮುಂಡರಗಿ: ರಂಗಭೂಮಿ ಹಾಗೂ ಜನಪದ ಕಲೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅವುಗಳಿಗೆ ಎಂದೂ ಅಳಿವಿಲ್ಲ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಈಚೆಗೆ ಪಟ್ಟಣದಲ್ಲಿ ಸ್ಥಳೀಯ ಹವ್ಯಾಸಿ ಕಲಾವೃಂದದವರು ಗುಡಗೇರಿ ಸಂಗಮೇಶ್ವರ ಕಲಾ ನಾಟ್ಯ ಸಂಘದವರಿಗೆ ಸಹಾಯರ್ಥವಾಗಿ ಅಭಿನಯಿಸಿದ ರಕ್ತರಾತ್ರಿ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುಡಗೇರಿ ಸಂಗಮೇಶ್ವರ ನಾಟ್ಯ ಸಂಘವನ್ನು ಹುಟ್ಟಿಹಾಕಿದ ಗುಡಗೇರಿ ಎನ್. ಬಸವರಾಜ ತಮ್ಮ ನಾಟಕಾಭಿನಯದ ಮುಖಾಂತರ ಇಡೀ ಉತ್ತರ ಕರ್ನಾಟಕದ ಕೀರ್ತಿ ಹೆಚ್ಚಿಸಿದ್ದಾರೆ. ಅವರಿಂದ ಅನೇಕ ಕಲಾವಿದರು ಬೆಳಕಿಗೆ ಬಂದಿದ್ದಾರೆ. ಅಂತವರು ಹುಟ್ಟು ಹಾಕಿದ ಕಂಪನಿಯು ಟಿವಿ, ಕಂಪ್ಯೂಟರ್ಗಳ ಇಂದಿನ ಯುಗದಲ್ಲಿ ಹಾನಿಯಲ್ಲಿ ಮುನ್ನಡೆಯುತ್ತಿರುವುದರಿಂದ ಸ್ಥಳೀಯ ಕಲಾವಿದರು ಪ್ರೋತ್ಸಾಹಿಸುತ್ತಿರುವುದು ಕಲೆಗೆ ಹಾಗೂ ಕಲಾವಿದರಿಗೆ ನೀಡುವ ಮಾನವೀಯತೆಯ ಕಾರ್ಯವಾಗಿದೆ ಎಂದರು.
ವಿ.ಎಲ್. ನಾಡಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ನಾಟಕ ಕಲೆ ಹೆಚ್ಚಿನ ಪಾತ್ರ ವಹಿಸುತ್ತಿದೆ. ಕನ್ನಡಿಗರು ಎಲ್ಲಿದ್ದರೂ ಕನ್ನಡಿಗರೇ. ಶಾಸಕ ರಾಮಕೃಷ್ಣ ದೊಡ್ಡಮನಿ, ವೈ.ಎನ್. ಗೌಡರ್ ಆದಿಯಾಗಿ ಎಲ್ಲ ಸಮಾನ ಮನಸ್ಕರು ಸೇರಿಕೊಂಡು ಹುಟ್ಟು ಹಾಕಿದ ಈ ಹವ್ಯಾಸಿ ಕಲಾತಂಡದಿಂದ ಅನೇಕ ನಾಟಕಗಳು ಪ್ರಸಾರಗೊಂಡು ಸಾಕಷ್ಟು ಮಹತ್ತರ ಕೆಲಸ ಕಾರ್ಯಗಳಿಗೆ ಹಣಕಾಸಿನ ನೆರವನ್ನೂ ನೀಡಿದ್ದಾರೆ ಎಂದರು. ನಾರಾಯಣಪ್ಪ ಇಲ್ಲೂರ, ಅಂದಪ್ಪ ಬೆಲ್ಲದ, ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಇಒ ಡಿ. ಮೋಹನ್, ಧ್ರುವಕುಮಾರ ಹೊಸಮನಿ, ಡಿ.ಡಿ. ಮೋರನಾಳ, ಸೊಲಬಣ್ಣ ಜೋಬಾಳಿ, ಎಸ್.ಡಿ. ಮಕಾಂದಾರ, ಜಿ.ಎಸ್. ಕೊರ್ಲಹಳ್ಳಿ, ಶೇಖರ ಜುಟ್ಲನ್ನವರ, ರಾಮಣ್ಣ ಬಳ್ಳಾರಿ, ಬಸವರಾಜ ರಾಮೇನಹಳ್ಳಿ, ಮುದಿಯಪ್ಪ ಕುಂಬಾರ, ರಾಮು ಭಜಂತ್ರಿ, ರಾಘವೇಂದ್ರ ಕುರಿಯವರ, ಲಿಂಗರಾಜಗೌಡ ಪಾಟೀಲ, ರಾಜುಗೌಡ ಪಾಟೀಲ, ಮಹೇಶ ತಲೆಗೌಡ್ರ ಇದ್ದರು. ನಂತರ ಹವ್ಯಾಸಿ ಕಲಾವೃಂದದ ವೈ.ಎನ್. ಗೌಡರ ನೇತೃತ್ವದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

