ಇಷ್ಟಲಿಂಗ ಬಸವಣ್ಣ ನೀಡಿದ ವೈಜ್ಞಾನಿಕ ದೇವರು
ಕನ್ನಡಪ್ರಭ ವಾರ್ತೆ, ಗದಗ, ಡಿ. 17
ಇಷ್ಟಲಿಂಗವೆಂಬುದು ಬಸವಣ್ಣ ನೀಡಿದ ವಿಶ್ವಮಾನ್ಯವಾದ ವೈಜ್ಞಾನಿಕ ದೇವರು. ಇಷ್ಟಲಿಂಗವೆಂದರೆ ಅದು ಎಲ್ಲರಲ್ಲಿ ಇರುವ ಪ್ರಾಣಲಿಂಗದ ಕುರುಹು ಎಂದು ಶ್ರೀಬಸವ ನವಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ಸಂಜೆ ಶಿವಾನಂದ ನಗರದಲ್ಲಿರುವ ಬಸವ ಮಂಟಪದಲ್ಲಿ ಬಸವತತ್ವದರ್ಶನ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಿದರು. ದೇವಾಲಯದಲ್ಲಿ ಕಂಡು ಬರುವ ಈಶ್ವರ ಲಿಂಗ ಸೃಷ್ಟಿಯ ಮುದ್ರೆಯಾದರೆ, ಕಾಲಾಂತರದಲ್ಲಿ ಸೃಷ್ಟಿಯ ರಹಸ್ಯ ಭೇದಿಸಿ ಬಸವಣ್ಣ ಕಂಡು ಹಿಡಿದ ಇಷ್ಟಲಿಂಗ ಯೋಗ ಮುದ್ರೆಯಾಗಿದೆ. ಇದು ಆದಿಗಿಂತಲೂ ಮೊದಲಿನ ಚೇತನವಾಗಿದೆ. ಬಸವಣ್ಣ ಸೃಷ್ಟಿಯ ರಹಸ್ಯ ಭೇದಿಸಿ ಕಂಡು ಹಿಡಿದಿದ್ದೇ ಇಷ್ಟಲಿಂಗವಾಗಿದೆ. ಬಸವಣ್ಣ ಆಂತರಿಕ ವಿಜ್ಞಾನಿಯಾಗಿದ್ದಾನೆ. ಭೌತಿಕ ವಿಜ್ಞಾನ ಮುಂದೆ ವಿನಾಶಕ್ಕೆ ಕರೆದೊಯ್ದರೆ, ಆಂತರಿಕ ವಿಜ್ಞಾನ ಮಾನವನನ್ನು ವಿಕಾಸಕ್ಕೆ ಕರೆದೊಯ್ಯುತ್ತದೆ. ಇಷ್ಟಲಿಂಗ ಧರಿಸಿದವರು ಇಷ್ಟಲಿಂಗ ಪೂಜಿಸುತ್ತ ಭಾವಿಸುತ್ತ ತಾವೇ ಲಿಂಗಸ್ವರೂಪಿಗಳಾಗಬಹುದು. ಇದಕ್ಕಾಗಿ ಶ್ರದ್ಧೆ ಅಗತ್ಯ. ನಸುಗಿನ ಜಾವದಲ್ಲಿ ಇಷ್ಟಲಿಂಗ ಪೂಜೆ ನಡೆಸುವುದು ಸೂಕ್ತವಾಗಿದ್ದು, ಆಡಂಬರದ ಪೂಜೆ, ಭಕ್ತಿಗೆ ದೇವರೊಲಿಯಲಾರನು. ಆದರೆ, ನಂಬಿ ಮಾಡುವ ಶ್ರದ್ಧೆಯ ಪೂಜೆಗೆ ದೇವರೊಲಿಯದೆ ಬಿಡಲಾರ ಎಂದರು. ಬಸವದಳದ ಅಧ್ಯಕ್ಷ ಎಂ.ಬಿ. ಲಿಂಗದಾಳ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ ನಿರೂಪಿಸಿದರು. ಕಾರ್ಯದರ್ಶಿ ವಿ.ಕೆ. ಕರಿಗೌಡ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

