ಶ್ರೇಷ್ಠ ಧರ್ಮಗಳಲ್ಲಿ ವೀರಶೈವ ಧರ್ಮವೂ ಒಂದಾಗಿದೆ
ನರೇಗಲ್ಲ: ವೀರಶೈವ ಧರ್ಮ ಒಂದು ಜಾತಿಯಲ್ಲ, ಪರಿಪೂರ್ಣ ದರ್ಶನ ಅದೊಂದು ಮಹಾನ ಧರ್ಮ. ವಿಶ್ವದ ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಸಿ.ವಿ. ವಂಕಲಕುಂಟಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವೀರಶೈವದ ಎಲ್ಲ ಒಳಪಂಗಡಗಳ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
18 ಧರ್ಮಗಳಲ್ಲಿ ವೀರಶೈವ ಧರ್ಮದಲ್ಲಿ ವಿಶಿಷ್ಟ ಸಂಪ್ರದಾಯಗಳಿವೆ. ವೀರಶೈವ ಧರ್ಮವು ರೇಣುಕಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತು. ಆ ಧರ್ಮದಲ್ಲಿ ಕೆಲವು ಶೈವ ಸಂಪ್ರದಾಯಗಳಾದ ಹೋಮ, ಹವನ, ತಿಥಿ, ನಕ್ಷತ್ರ, ಮೊದಲಾದ ವೈಧಿಕ ಸಂಪ್ರದಾಯಗಳು ಬಳಕೆಯಲ್ಲಿದ್ದವು. 12ನೇ ಶತಮಾನದ ಶಿವಶರಣರ ಕಾಲದಲ್ಲಿ ಆ ವೀರಶೈವ ಧರ್ಮವು ಸಂಸ್ಕಾರಗೊಂಡು ಲಿಂಗಾಯತ ಧರ್ಮವೆಂದು ಮುಂದುವರೆಯಿತು. ಆದುದರಿಂದ ವೀರಶೈವ ಹಾಗೂ ಲಿಂಗಾಯತ ಸಮಾನ ಅರ್ಥವುಳ್ಳ ಪದಗಳಾಗಿವೆ. 1941ರ ಪೂರ್ವದಲ್ಲಿ ಇದು ಒಂದು ಸ್ವತಂತ್ರ ಧರ್ಮವಾಗಿತ್ತು. ತದನಂತರ ಇದನ್ನು ಹಿಂದೂ ಧರ್ಮದ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ವೀರಶೈವ ಧರ್ಮವು ಸ್ವತಂತ್ರ ಧರ್ಮವಾಗುವ ಎಲ್ಲ ಅರ್ಹತೆಗಳನ್ನು ಪಡೆದಿದೆ. ಇತ್ತೀಚಿಗೆ ಒಳಪಂಗಡಗಳ ಸಂಘಟನೆಗಳಿಂದ ಅಖಂಡ ವೀರಶೈವ ಧರ್ಮದ ವಿಕಾಸಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ ಅಖಂಡ ವೀರಶೈವ ಸಂಘಟನೆ ಅವಶ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಸಿ.ಜಿ. ಹುಡೇದಗಡ್ಡಿ ಮಾತನಾಡಿ, ವೀರಶೈವ ಧರ್ಮ ಉನ್ನತ ಆದರ್ಶಗಳನ್ನು ಹೊಂದಿದ್ದು, ಅದು ಒಂದು ವಿಶ್ವ ಧರ್ಮವಾಗುವ ಅರ್ಹತೆಗಳನ್ನು ಪಡೆದಿದೆ ಎಂದರು. ಅಂದಾನಗೌಡ್ರ ಪಾಟೀಲ, ಅಶೋಕ ಬೇವಿನಕಟ್ಟಿ, ರುದ್ರಮುನಿ ಹಿರೇಮಠ, ಶ್ರೀಶೆಲಪ್ಪ ಜೋಳದ, ವಿಜಯಕುಮಾರ ಅಂಗಡಿ, ವೀರಣ್ಣ ಹಂಜಿ, ಪ್ರಭುಗೌಡ ನಾಡಗೌಡ್ರ, ಪಾಯಪ್ಪಗೌಡ್ರ, ನಿಂಗಪ್ಪ ಕಣವಿ ಮುಂತಾದವರು ಉಪಸ್ಥಿತರಿದ್ದರು. ಈಶ್ವರ ಬೆಟಗೇರಿ ನಿರೂಪಿಸಿದರು. ಎಸ್.ವಿ. ಹಳ್ಳಿಕೇರಿ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

