ದೊಡ್ಡಾಟ ಸಂಸ್ಕೃತಿಯ ಬೇರು
ನರಗೇಲ್ಲ: ದೊಡ್ಡಾಟಗಳು ನಮ್ಮ ಹಳೆಯ ಸಂಸ್ಕೃತಿಯ ಬೇರುಗಳಾಗಿದ್ದು, ಅವುಗಳನ್ನು ಉಳಿಸಿ, ಬೆಳೆಸುವಲ್ಲಿ ಪ್ರತಿಯೊಬ್ಬರೂ ಗಮನ ನೀಡಬೇಕು ಎಂದು ಗ್ರಾಮದ ಹಿರಿಯ ಅಡಿವೆಪ್ಪಗೌಡ ಖಂಡಪ್ಪಗೌಡ್ರ ಹೇಳಿದರು.
ಸ್ಥಳೀಯ ಪಂಡಿತ ಪುಟ್ಟರಾಜ ಗವಾಯಿಗಳ ಸಂಸ್ಕೃತಿ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಸಂಯುಕ್ತಾಶ್ರಯದಲ್ಲಿ ಸಮೀಪದ ಜಿಗಳೂರ ಗ್ರಾಮದಲ್ಲಿ ಮಹಾಭಾರತದ ಕಥೆಯನ್ನಾದರಿಸಿದ ವಿರಾಟ ಪರ್ವ ಎಂಬ ದೊಡ್ಡಾಟವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಮೊಬೈಲ್ ಹಾಡು ಹಾಗೂ ದೂರದರ್ಶನಗಳಲ್ಲಿ ಬರುವ ಕಾಮಿಡಿ ದೃಶ್ಯಗಳಿಗೆ ಸೀಮಿತವಾದ ಯುವ ಜನಾಂಗಕ್ಕೆ ಇಂತಹ ಪೌರಾಣಿಕ ದೃಶ್ಯಗಳ ಮೂಲಕ ನಮ್ಮ ಭವ್ಯವಾದ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕು ಎಂದರು. ವೀರಪ್ಪ ಬಸೇವಡೆಯರ ಅಧ್ಯಕ್ಷತೆ ವಹಿಸಿದ್ದರು. ಕಲ್ಲಮ್ಮ ಖಂಡಪ್ಪಗೌಡ್ರ, ಮಾರುತಿ ಭಜಂತ್ರಿ, ನಿರ್ಮಲಾ ಹೈಗರ, ಹನುಮಂತಪ್ಪ ಉಪ್ಪಾರ, ಗೌಡಪ್ಪ ಧರಣೆಪ್ಪಗೌಡ್ರ, ಬಾಬುಗೌಡ ಪಾಟೀಲ ಉಪಸ್ಥಿತರಿದ್ದರು. ಸಂಸ್ಥೆಯ ಡಿ.ಎಚ್. ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಎಸ್. ಧರಣೆಪ್ಪಗೌಡ್ರ ಸ್ವಾಗತಿಸಿದರು. ಎಸ್.ಐ. ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

