ಗದಗ

ಮಲಪ್ರಭೆಗೆ ಮಹದಾಯಿ ಜೋಡಿಸಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಡಿ. 18
ರಾಜ್ಯದ ಬಾಂಬೆ ಕರ್ನಾಟಕ ಭಾಗದ 4 ಜಿಲ್ಲೆ 9 ತಾಲೂಕುಗಳ ಭಾಗದ ರೈತ ಸಮುದಾಯಕ್ಕೆ ನೀರು ದೊರಕಿಸುವ ಮಲಪ್ರಭಾ ಜಲಾಶಯಕ್ಕೆ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಬುಧವಾರ ಕರ್ನಾಟಕ ರೈತಸೇನೆ ವತಿಯಿಂದ ಪಟ್ಟಣದ ವೀರಬಾಬಾಸಾಹೇಬ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಬಳಿಕ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನಾ ಅಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ಈ ಭಾಗದ ಮಲಪ್ರಭಾ ಜಲಾಶಯಕ್ಕೆ ಹಲವು ದಿನಗಳಿಂದ ವಾಡಿಕೆ ನೀರು ಜಲಾಶಯಕ್ಕೆ ನೀರು ಸಂಗ್ರಹವಾಗದೇ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಈ ಹಿಂದೆ ಸಾಕಷ್ಟು ಬಾರಿ ಆಳುವ ಸರ್ಕಾರಗಳಿಗೆ ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ನಾಲಾಗಳನ್ನು ಮಲಪ್ರಭಾ ಜಲಾಶಯಕ್ಕೆ ಜೋಡಿಸಿದರೆ  ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರೂ ಇಲ್ಲಿಯವರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ತಾಲೂಕು ರೈತ ಸೇನಾದ ಅಧ್ಯಕ್ಷ ಶರಣಪ್ಪಗೌಡ ಪಾಟೀಲ ಮಾತನಾಡಿ, ರಾಜ್ಯದ ಬಾಂಬೆ ಕರ್ನಾಟಕ ಭಾಗದ 4 ಜಿಲ್ಲೆ 9 ತಾಲೂಕಗಳ ವ್ಯಾಪ್ತಿಯ ರೈತರಿಗೆ ಮ ಹದಾಯಿ ನದಿಯಿಂದ 47 ಟಿಎಂಸಿ ನೀರು ದೊರೆಯುತ್ತದೆ. ಅದಕ್ಕೆ ಸರ್ಕಾರ ಮಲಪ್ರಭಾ ಜಲಾಶಯಕ್ಕೆ ಈ ನದಿ ಜೋಡಣೆ ಮಾಡಬೇಕು. ಈ ನದಿ ಜೋಡಣೆಯಾದಲ್ಲಿ ಈ ಭಾಗದ ಎಲ್ಲ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಮೇಲಾಗಿ ನಮಗೆ ಬೇಕಾದ ವಿದ್ಯುತ್ ಕೂಡ ಉತ್ಪಾದಿಸಬಹುದು. ಈ ಕುರಿತು ಸರ್ಕಾರ ಬೇಗ ಕ್ರಮ ಕೈಗೊಂಡು ಯೋಜನೆ ಪ್ರಾರಂಭಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ರೈತರೊಂದಿಗೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ತಹಸೀಲ್ದಾರ್ ನಾಗರಾಜ ಪಾಟೀಲ ಪ್ರತಿಭಟನಾಕಾರ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ ಅಂಬಲಿ, ಹನುಮಂತ ಮಜ್ಜಿಗುಡ್ಡ, ಉಪಾಧ್ಯಕ್ಷ ವಾಸುರಡ್ಡಿ, ರವಿ ಚಿಂತಾಲ, ಸಿ.ಎಸ್. ಪೂಜಾರ, ಸಿ.ಎಸ್. ನವಲಗುಂದ, ಉಮೇಶ ಲದ್ದಿ, ನವೀನಕುಮಾರ ಹೆಬ್ಬಳ್ಳಿ, ಶಿವಾನಂದ ಬನಪ್ಪನವರ, ರಾಜು ಬನಪ್ಪನವರ, ಶಿವಪ್ಪ ಹೂಗಾರ, ಮಂಜುನಾಥ ಕರಮಡಿ, ಸಂತೋಷ ಬಾಬಾರ, ಯಲ್ಲಪ್ಪ ಯಾವಗಲ್, ಪ್ರವೀಣ ಜಕ್ಕರಡ್ಡಿ, ದೇವರಡ್ಡಿ ಮಾಸ್ತಿ, ಶಿವಯ್ಯ ಪೂಜಾರ, ಮಂಜುಳಾ ಮಾದರ, ಎಂ.ಸಿ. ಮೀಸಿ, ಎಸ್.ಬಿ. ಶಿಳೋದ, ಸಂಗೀತಾ ಅಂಗಡಿ, ಸುಧಾ ನಾಯ್ಕರ, ವಿದ್ಯಾ ಮೇಟಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.