ಗದಗ

ಸುದ್ದಿ ಸಂಕ್ಷೇಪ

Published On :

ಪತ್ರಕರ್ತನ ಮೇಲೆ ಹಲ್ಲೆ: ಖಂಡನೆ
ನರಗುಂದ:  ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಪತ್ರಕರ್ತನ ಮೇಲೆ ನಡೆದ ಹಲ್ಲೆಯನ್ನು ವಿವಿಧ ಸಂಘಟನೆ ಪದಾಧಿಕಾರಿಗಳು ಖಂಡಿಸಿದ್ದಾರೆ. ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ನೇಮಕ ಮಾಡಿಲ್ಲವೆಂದು ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ವೆಂಕನಗೌಡ ಬನಪ್ಪನವರ, ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕ ಸಂಗನಗೌಡ ಪಾಟೀಲ ಅವರು ಹಿರೇಕೊಪ್ಪ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಪತ್ರಕರ್ತ ಸಂಗನಗೌಡ ಖಾನಪ್ಪಗೌಡ್ರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಾವು ಎಸ್‌ಡಿಎಂಸಿ ರಚನೆ ಮಾಡುತ್ತೇವೆ ಅಥವಾ ಬಿಡುತ್ತೇವೆ, ಅದನ್ನು ಕೇಳಲಿಕ್ಕೆ ನೀ ಯಾರು ಎಂದು ದಬಾಯಿಸಿದ್ದಾರೆ. ಈ ಘಟನೆಯನ್ನು ತಾಲೂಕು ಪತ್ರಕರ್ತರಾದ ಉಮೇಶ ಬೋಳಶಟ್ಟಿ, ಸಿ.ಬಿ. ಸುಬೇದಾರ, ಬಸವರಾಜ ಹಲಕುರ್ಕಿ, ಎಸ್.ಎಸ್. ಮಣ್ಣೂರಮಠ, ಪ್ರಭು ಗುಡಾರದ, ಎಸ್.ಎಸ್. ತೆಗ್ಗಿನಮನಿ ಖಂಡಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳನ್ನು ಬೇಗ ಬಂಧಿಸಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಪಿಂಚಣಿ ಅದಾಲತ್
ಗದಗ:  ಬೆಟಗೇರಿ ಹೋಬಳಿ ವ್ಯಾಪ್ತಿಯ ಪಿಂಚಣಿ ಅದಾಲತ್ ಕಾರ್ಯಕ್ರಮ ಡಿ. 20ರಂದು ಮಧ್ಯಾಹ್ನ 3 ಗಂಟೆಗೆ ಗದಗ ರೇಲ್ವೆ ನಿಲ್ದಾಣದ ಬಳಿ ಇರುವ ಈದ್ಗಾ ಮೈದಾನದಲ್ಲಿ ನಡೆಯಲಿದೆ. ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ ಉದ್ಘಾಟಿಸುವರು. ಬೆಟಗೇರಿ ಹೋಬಳಿಯ ಅರ್ಹ ನಿವಾಸಿಗಳು ನಿಗದಿತ ಅರ್ಜಿ ನಮೂನೆ, ಅವಶ್ಯವಿರುವ ದಾಖಲೆಗಳೊಂದಿಗೆ ಹಾಜರಾಗಿ ಮನವಿ ಸಲ್ಲಿಸಬಹುದು ಎಂದು ಗದಗ ತಹಸೀಲ್ದಾರ್ ಜಯಶ್ರೀ ಶಿಂತ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ:  ಮಹೇಂದ್ರಕಲ್ ಸರ್ಕಲ್, ಕಾಮತ್ ಹಿಂಭಾಗ, ಜವಳ ಉಳಿದ ಭಾಗಗಳು, ಸೋಮೇಶ್ವರ ಗುಡಿ ಲೈನ್, ಸೂಲ್ಲಾಪಟ್ಟಿ ಲೈನ್, ಗವಾಯಿಗಳ ಆಶ್ರಮ ಮುಂಭಾಗ ಮತ್ತು ಹಿಂಭಾಗ, ಕುಷ್ಟಗಿ ಮಿಲ್ ರೋಡ್, ಖಾಗದಗಾರ ಲೈನ್, ಅಬ್ಬಿಗೇರಿ ಲೈನ್, ಕಟ್ಟಿಮನಿ ಟೀಚರ್ ಲೈನ್, ಕೊರ್ಲಹಳ್ಳಿ ಲೈನ್, ಬೂದಿಹಳ್ಳಿ ಟೀಚರ್ ಲೈನ್, ಎಸ್.ಎಸ್. ಪಾಟೀಲ ಲೈನ್, ಅನ್ನಪೂರ್ಣಾ ಅಪಾರ್ಟಮೆಂಟ್ ರೋಡ್, ರಂಗಬಾಳ ಲೈನ್, ಸಂಗಟಿ ಲೈನ್, ದೇವಗಿರಿ ಮಾಸ್ತರ್ ಲೈನ್, ಕೆಂಚನಗೌಡ್ರ ಲೈನ್, ಹೂಗಾರ ಮಾಸ್ತರ್ ಲೈನ್, ಸಿ.ಎಸ್.ಪಾಟೀಲ್ ಲೈನ್, ನಾಗರಕಟ್ಟಿ ಲೈನ್, ತಮ್ಮರಲ್ಲಿ ಲೈನ್, ಹುಬ್ಬಳ್ಳಿ ಲೈನ್, ತುಪ್ಪದ ಲೈನ್, ಹೊಸಮನಿ ಮಾಸ್ತರ್ ಲೈನ್, ಚರ್ಚ್ ರೋಡ್, ಸಂಕ್ಕಣ್ಣವರ ಲೈನ್, ಮುಲ್ಲಾ ಚಾಳ, ಖಾತರಕಿ ಚಾಳ್ ಈ ಭಾಗಗಳಲ್ಲಿ ಡಿ. 19 ರಂದು ನೀರು ಪೂರೈಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.