ಗದಗ

ಆಸರೆ ಮನೆ ವಿತರಿಸಲು ಆಗ್ರಹ

Published On :

ನರಗುಂದ: 2007ರಲ್ಲಿ ಬೆಣ್ಣಿಹಳ್ಳಕ್ಕೆ ಅತಿ ಹೆಚ್ಚು ಪ್ರವಾಹ ಬಂದು ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಪ್ರವಾಹದ ನೀರು ಹೊಕ್ಕು ಇಡೀ ಗ್ರಾಮವೇ ನೀರಿನಲ್ಲಿ ಮುಳುಗಿ ಹೋಗಿತ್ತು. ಅದಕ್ಕಾಗಿ ಇಲ್ಲಿನ ಜನತೆಗೆ ಪರ್ಯಾಯ ಮನೆಗಳನ್ನು ಸರ್ಕಾರ ವಿವಿಧ ಸಂಘ ಸಂಸ್ಥ್ಥೆಗಳಿಂದ ಗ್ರಾಮಸ್ಥರಿಗೆ ನಿರ್ಮಿಸಿ, 4-5 ವರ್ಷ ಕಳೆದರೂ ಇಲ್ಲಿಯವರೆಗೂ ಈ ಗ್ರಾಮದ ನಿವಾಸಿಗಳಿಗೆ ಮನೆ ನೀಡಿಲ್ಲವೆಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆರೋಪಿಸಿದರು.  ಅವರು ಬುಧವಾರ ಪಟ್ಟಣದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ 265 ಗ್ರಾಮಗಳನ್ನು ಈ ಪ್ರವಾಹಗಳಿಂದ ಮುಕ್ತಗೊಳಿಸಬೇಕೆಂದು ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರ ಮಟ್ಟದಲ್ಲಿ ಚಿಂತಿಸಿ, ಜಮೀನು ಖರೀದಿಸಿ ವಿವಿಧ ಸಂಘ, ಸಂಸ್ಥೆಗಳಿಂದ, ದಾನಿಗಳಿಂದ ಆಸರೆ ಮನೆಗಳನ್ನು ನಿರ್ಮಿಸಿದ್ದರು. ಆದರೆ, ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿರುವ ಮನೆಗಳನ್ನು ನಿರ್ಮಿಸಿ 5 ವರ್ಷ ಗತಿಸಿದರೂ ಇಲ್ಲಿಯವರೆಗೆ ಈ ಗ್ರಾಮಸ್ಥರಿಗೆ ಜಿಲ್ಲಾಡಳಿತ ಮನೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ವೈ.ಎಫ್. ಸಬ್ಬನೇಶಿ, ಫಕೀರಪ್ಪ ಮಾದರ, ಎಸ್.ಎಚ್. ಹೂಗಾರ, ಕರಿಯಪ್ಪ ಮಾದರ, ಹನುಮಂತ ಪೂಜಾರ, ರುದ್ರಗೌಡ, ಬಸಪ್ಪ ಮಾದರ, ಫಕೀರಪ್ಪ ಹೂಗಾರ, ಆರೂಡಪ್ಪ ಬೂದಿಹಾಳ, ಹುಚ್ಚಪ್ಪ ಶಾಂತಗೇರಿ, ವಿರೂಪಾಕ್ಷ ಹೂಗಾರ, ಆರ್.ಎಚ್. ಹವಾಲ್ದಾರ್, ಈರನಗೌಡ ಪಾಟೀಲ, ಬಸಪ್ಪ ಕಳಕನ್ನವರ, ಬಿ.ಬಿ. ಬೂದಿಹಾಳ, ವೈ.ಜಿ. ಚಲವಣ್ಣವರ, ಈಶಿಪ್ಪ ಹೂಗಾರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.