ಗದಗ

ಸುದ್ದಿ ಸಂಕ್ಷೇಪ

Published On :

ಸ್ತ್ರೀ ಶಕ್ತಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಗದಗ: ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2013ನೇ ಸಾಲಿನ ಸ್ತ್ರೀ ಶಕ್ತಿ ಪುರಸ್ಕಾರದ 6 ಪ್ರಶಸ್ತಿಗಳಾದ ದೇವಿ ಅಹಲ್ಯಾಬಾಯಿ ಹೋಲ್ಕರ್, ಕನ್ನಗಿ, ಮಾತಾ ಜೀಜಾಬಾಯಿ, ರಾಣಿ ಗೈಡಿನ್ಲ್ಯೂ ಜಿಲಿಯಾಂಗ್, ರಾಣಿ ಲಕ್ಷ್ಮೀಬಾಯಿ, ರಾಣಿ ರುದ್ರಮ್ಮದೇವಿ ಪ್ರಶಸ್ತಿಗಾಗಿ ಅರ್ಹ ಪ್ರಸ್ತಾವನೆಗಳನ್ನು ಕಳಿಸಬೇಕಾಗಿದೆ. ಈ ಪ್ರಶಸ್ತಿಗೆ ಅರ್ಹರಾಗಿರುವ ಸಂಘ-ಸಂಸ್ಥೆಗಳವರು ಹಾಗೂ ವೈಯಕ್ತಿಕವಾಗಿ ಸಾಧನೆಗೈದ ಸಾಧಕರು, ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರೂ. ನಂ. 6, ಜಿಲ್ಲಾಡಳಿತ ಭವನ, ಹುಬ್ಬಳ್ಳಿ ರಸ್ತೆ ಗದಗ ಇವರಿಂದ ಮಾರ್ಗಸೂಚಿ ಮತ್ತು ಅರ್ಜಿ ನಮೂನೆಗಳನ್ನು ಪಡೆದುಕೊಂಡು ಡಿ. 31ರೊಳಗೆ ಅರ್ಜಿ ಸಲ್ಲಿಸಲು ಪ್ರಕಟಣೆ ತಿಳಿಸಿದೆ.
ಸಹಕಾರ ಚುನಾವಣೆಗೆ ತರಬೇತಿ
ಗದಗ: ಚುನಾವಣೆ ಜರುಗಿಸಬೇಕಾಗಿರುವ ಹಾಲು ಉತ್ಪಾದಕರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಹಾಗೂ ಕೆಎಂಎಫ್ ವಿಸ್ತರಣಾಧಿಕಾರಿಗಳಿಗೆ ಡಿ. 20ರಂದು ಹಾಗೂ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಮತ್ತು ಕೆಸಿಸಿ ಬ್ಯಾಂಕ್ ನಿರೀಕ್ಷಕರಿಗೆ ಡಿ. 24ರಂದು ಬೆಳಗ್ಗೆ 11 ಗಂಟೆಗೆ ಗದಗ ಕೆಸಿಸಿ ಬ್ಯಾಂಕಿನಲ್ಲಿ ಚುನಾವಣಾ ಪೂರ್ವಭಾವಿ ತರಬೇತಿ ನಡೆಸಲಾಗುವುದು ಎಂದು ಸಹಕಾರ ಇಲಾಖೆ ಪ್ರಕಟಣೆ ತಿಳಿಸಿದೆ.
ಬ್ಲೂ ಆಗಿ ನೇಮಕ
ಗದಗ:   ನಗರದ ಎಚ್.ಸಿ.ಇ.ಎಸ್. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಅವಿನಾಶ ಹೆಗ್ಗಣ್ಣವರ ಈಚೆಗೆ ಜರುಗಿದ ವಿಶ್ವವಿದ್ಯಾಲಯಗಳ ಖೋಖೋದಲ್ಲಿ ಬ್ಲೂ ಆಗಿ ನೇಮಕಗೊಂಡು, ಡಿ. 20ರಂದು ಕೇರಳದ ಕ್ಯಾಲಿಕಟ್‌ದಲ್ಲಿ ನಡೆಯುವ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಧಾರವಾಡ ತಂಡದ ಪರವಾಗಿ ಭಾಗವಹಿಸಲಿದ್ದಾನೆ. ಸಾಧನೆ ಮಾಡಿದ ವಿದ್ಯಾರ್ಥಿಗೆ ಅಂತೂರ-ಬೆಂತೂರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ಗ್ರಾಮದ ಗುರುಹಿರಿಯರು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.