ನೈಸರ್ಗಿಕ ಸಂಪನ್ಮೂಲ ರಕ್ಷಿಸಿ
ಗದಗ: ನೈಸಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು, (ಕಪ್ಪತ್ತಗುಡ್ಡ ಸಂರಕ್ಷಣೆ) ಹಾಗೂ ಶಿರಹಟ್ಟಿ ತಾಲೂಕಿನ ಕೂಲಿ ಕಾರ್ಮಿಕರ ಮತ್ತು ಸ್ವ ಸಹಾಯ ಸಂಘಟನೆಗಳ ಸಮಸ್ಯೆಗೆ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಡಳಿತ ಭವನದ ಎದುರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಕಾರ್ಯದರ್ಶಿ ಐ.ಜಿ. ಪುಲ್ಲಿ ಮಾತನಾಡಿ, ಕಪ್ಪತ್ತಗುಡ್ಡ ಸಾವಿರಾರು ಸಸ್ಯ-ಸಂಪತ್ತುಗಳನ್ನು ಹೊಂದಿರುವ ಜತೆಗೆ ಔಷಧೀಯ ಗಿಡಮೂಲಿಕೆಗಳ ತಾಣವಾಗಿದೆ. ಇಂತಹ ಕಪ್ಪತ್ತಗುಡ್ಡಕ್ಕೆ ಆತಂಕ ಎದುರಾಗಿದೆ. ನಿಸರ್ಗ ಸಿರಿ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕಿದೆ. ನೈಸರ್ಗಿಕ ಸಂಪನ್ಮೂಲಗಳು ಕೊರತೆಯಾಗದಂತೆ ನೋಡಿಕೊಳ್ಳುವುದು ಕೂಡ ಅತ್ಯವಶ್ಯವಾಗಿದೆ ಎಂದು ಹೇಳಿದರು.
ಯುರೋಪಿನ ಔದ್ಯೋಗಿಕರಣಕ್ಕಾಗಿ ಹಿಂದೆ ನಮ್ಮ ದೇಶದ ಸಂಪತ್ತು ಲೂಟಿ ಮಾಡಿದರೆ, ಈಗ ನಮ್ಮವರೇ ದೇಶದ ಅಮೂಲ್ಯವಾದ ನೀರು, ಅರಣ್ಯ, ಭೂಮಿ, ಖನಿಜ ಹಾಗೂ ಬೀಜಗಳನ್ನು ವಿದೇಶಿ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳನ್ನು ಅವ್ಯಾಹತವಾಗಿ ಲೂಟಿ ಮಾಡಲಾಗುತ್ತಿದೆ. ಅವುಗಳ ಸಂರಕ್ಷಣೆಗಾಗಿ ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಗ್ರಾಪಂಗೆ ವಿಶೇಷ ಅಧಿಕಾರಿ ನೀಡುವುದು ಅವಶ್ಯಕತೆಯಿದೆ. ಜತೆಗೆ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ, ಗ್ರಾಮಸಭೆ, ಸಶಕ್ತೀಕರಣ ಹಾಗೂ ಪ್ರತಿಯೊಂದು ಗ್ರಾಪಂನಲ್ಲಿ ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಬಡ ಕೂಲಿ ಕಾರ್ಮಿಕರಿಗೆ ಸುಲಭವಾಗಿ ಕೂಲಿ ಸಿಗುವಂತಾಗಬೇಕು. ಪ್ರತಿ ಗ್ರಾಮದ ನಾಗರಿಕರಿಗೆ ಈ ಯೋಜನೆಯ ಮಾಹಿತಿ ಸಿಗುವಂತಾಗಬೇಕು. ಇಂತಹ ಹತ್ತು ಹಲವು ಸಮಸ್ಯೆಗಳ ಕುರಿತು ಈ ಜನಜಾಗೃತಿಯ ಜತೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಪುಲ್ಲಿ ಹೇಳಿದರು. ಡಾ. ಬಸವರಾಜ ಧಾರವಾಡ, ಚನ್ನವೀರಪ್ಪ ಕಂಚಿಗೇರಿ, ಮಂಜಪ್ಪ ಬಡ್ನಿ, ಫಕ್ಕೀರಪ್ಪ ಮುದ್ದಿ, ಹೊನ್ನಪ್ಪ ಅಡವಿಸೋಮಾಪುರ, ಶಾಂತವ್ವ ಶಿರಹಟ್ಟಿ, ನೀಲವ್ವ ಮತ್ತೂರ, ವೀರಣ್ಣ ಉಪ್ಪಾರ, ಶಿವಲಿಂಗಪ್ಪ ಹಾರೋಗೇರಿ, ರಾಮಚಂದ್ರಪ್ಪ ಚಿಟ್ಟಿ, ಕೊಟ್ಟೂರಗೌಡ್ರ ಪಾಟೀಲ, ಯಲ್ಲವ್ವ ಮಡಿವಾಳರ, ಯಲ್ಲಪ್ಪ ಆಡೂರ, ಶಂಕ್ರಪ್ಪ ಮರಾಠೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

