ಸುದ್ದಿ ಸಂಕ್ಷೇಪ
ಇಂದು ಶರಣ ಸಂಗಮ
ಗದಗ: ಡಿ. 22ರ ಬೆಳಗ್ಗೆ 11 ಗಂಟೆಗೆ ಸ್ಥಳೀಯ ಶಿವಾನಂದ ನಗರದ ಬಸವ ಮಂಟಪದಲ್ಲಿ ನಡೆಯಲಿರುವ ಬಸವದಳದ 1052ನೇ ಶರಣ ಸಂಗಮದಲ್ಲಿ ಬಸವಾದಿ ಶರಣರ ನಿಜದ ನಿಲುವು ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಎಂ.ಬಿ. ಲಿಂಗದಾಳ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗದ ಬಸವ ನವಲಿಂಗ ಶ್ರೀಗಳು ಉಪನ್ಯಾಸ ನೀಡುವರು. ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಕ ಪ್ರಕಾಶ ಅಸುಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉದ್ಘಾಟನೆ
ಲಕ್ಷ್ಮೇಶ್ವರ: ದುರ್ಗಾ ಪರಮೇಶ್ವರಿ ಮಹಿಳಾ ವಿವಿಧೋದ್ದೇಶಗಳ ಕ್ಷೇಮಾಭಿವೃದ್ಧಿ ಟ್ರಸ್ಟ್ನ ಉದ್ಘಾಟನಾ ಸಮಾರಂಭವು ಡಿ. 22ರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ ಉದ್ಘಾಟಿಸುವರು. ಜ್ಯೋತಿ ಸೋಮನಾಥ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪುರಸಭೆಯ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಸದಸ್ಯ ವಿ.ಜಿ. ಪಡಗೇರಿ, ರಾಜು ಕುಂಬಿ, ಗುರು ಮಡ್ಲೇರಿ, ಬಸವರಾಜ ಓದಾನವರ, ಮಹೇಶ ಹೊಗೆಸೊಪ್ಪಿನ, ಗಣಪತಿ ಬೇವಿನಮರದ, ಗಂಗಾಧರ ಮ್ಯಾಗೇರಿ, ಫರ್ಜಾನ ಸಿದ್ದಿ, ದಿಗಂಬರ ಪೂಜಾರ, ಜಿ.ಕೆ. ಕಾರಡಗಿ, ನಾರಾಯಣಸಾ ಪವಾರ ಮುಂತಾದವರು ಆಗಮಿಸುವರು. ಇದೇ ಸಂದರ್ಭದಲ್ಲಿ ಬಿ.ಎಸ್. ಬಾಳೇಶ್ವರಮಠ ಹಾಗೂ ನಂದಾದೇವಿ ಅಮಾಸಿ ಇವರಿಂದ ಮಹಿಳೆಯರಿಗಾಗಿ ಕಾನೂನು ಎಂಬ ವಿಷಯದ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬಿಡುಗಡೆ
ಗದಗ: ಅನಂತ ಲೇಖನಿ ಪಾಕ್ಷಿಕ ಪತ್ರಿಕೆಯ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭವು ಡಿ. 22ರ ಬೆಳಗ್ಗೆ 10.30 ಗಂಟೆಗೆ ನಗರದ ವೀರಶೈವ ಲೈಬ್ರರಿ ಹಾಲ್ದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಸೊರಟೂರು ಫಕೀರೇಶ್ವರ ಶ್ರೀಗಳು ವಹಿಸುವರು. ಬಸವಯ್ಯಶಾಸ್ತ್ರಿ ಹಿರೇಮಠ ಅಧ್ಯಕ್ಷತೆ ವಹಿಸುವರು. ಸಿಇಒ ವೀರಣ್ಣ ತುರಮರಿ ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಅತಿಥಿಗಳಾಗಿ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ಸಿ.ಆರ್.ಬಳ್ಳಾರಿ, ಕೆಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಸ್.ಬಿ. ಸಂಕಣ್ಣವರ, ಮೃತ್ಯುಂಜಯ ಸಂಕೇಶ್ವರ, ಮಂಜುನಾಥ ಅಬ್ಬಿಗೇರಿ, ಅಜೀತ ಹೊಂಬಾಳಿ, ಸುನೀಲ ತೆಂಬದಮನಿ, ರವಿ ಗುಂಜೀಕರ, ಬಿ.ಎನ್.ದಾಯಮ್ಮನವರ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಭಾಗ್ಯಶ್ರೀ ನೇಮಕ
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಉಳ್ಳಟ್ಟಿ ಗ್ರಾಮದ ಭಾಗ್ಯಶ್ರೀ ಲಮಾಣಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಶಿವರಾಮೇಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

