ಗದಗ

20 ನಿಮಿಷ 20 ಸುದ್ದಿ

Published On :

ಅರಿವೆಂಬುದು ಅಮೃತ: ಬಸವ ನವಲಿಂಗ ಶ್ರೀ
ಗದಗ: ಅರಿವು ಎಂಬುದು ಅಮೃತ, ಇಷ್ಟಲಿಂಗವೆಂಬುದೇ ಪರುಶಮಣಿ ಎಂದು ಬಸವ ನವಲಿಂಗ ಶ್ರೀಗಳು ಹೇಳಿದರು.  ಅವರು ಈಚೆಗೆ  ಬಸವಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವತತ್ವದರ್ಶನ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಿದರು. ಪುರಾಣ ಕಾಲದ ಅಮೃತದ ಹಂಗು ತೊರೆದು ಸೃಷ್ಟಿಯ ರಹಸ್ಯ ಭೇದಿಸಿ ಬಸವಣ್ಣ ಕಂಡು ಹಿಡಿದಿದ್ದು ಸ್ವಯಂಪ್ರಕಾಶ ಮಾನವಾದ ಹಾಗೂ ಎಲ್ಲರಲ್ಲೂ ಇರುವ ಸ್ವಯಂ ಅರಿವು. ಇದೇ ನಿಜವಾದ ಅಮೃತವಾಗಿದೆ. ಹಾಗೆಯೇ ನಿರಾಕಾರ ದೇವರ ಸ್ವರೂಪದೊಂದಿಗೆ ನಮ್ಮಾತ್ಮದ ಚಿತ್ಕಳೆಯೇ ಆಗಿರುವ ಇಷ್ಟಲಿಂಗವೇ ಪರುಶಮಣಿಯಾಗಿದೆ ಎಂದರು.

  ಖಾತ್ರಿ: ಜನರಲ್ಲಿ ಜಾಗೃತಿ
ಗದಗ:  ತಾಲೂಕಿನ ಅಡವಿಸೋಮಾಪುರ ಗ್ರಾಮಕ್ಕೆ ಈಚೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಆಗಮಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತ ಮಾಹಿತಿ ಒಳಗೊಂಡ ವಾಹನವು ಧ್ವನಿ ವರ್ಧಕದ ಮೂಲಕ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿತು. ಈ ಸಂದರ್ಭದಲ್ಲಿ ಗ್ರಾಮದ ಪಿಡಿಒ ಅಶ್ವಿನಿ ಕುರಡಗಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಾಹಿತಿಯನ್ನು ನೀಡಿ, ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗಿಗಳಿಗೆ 100 ದಿನಗಳ ಕಾಲ ಉದ್ಯೋಗ ನೀಡುವ ಮೂಲಕ ಬಡವರ್ಗದ ಏಳ್ಗೆಗಾಗಿ ಸರ್ಕಾರ ಶ್ರಮಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಪಂ ಕಾರ್ಯಾಲಯಕ್ಕೆ ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಂಡು ಯೋಜನೆ ಯಶಸ್ವಿಗೊಳಿಸುವಂತೆ ಕೋರಿದರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ, ಸದಸ್ಯೆ ಶೀತವ್ವ ರಾಠೋಡ, ತುಕಾರಾಮ ಹುಲಗಣ್ಣವರ, ಮಹಾಂತೇಶ ದೊಡವಾಡ, ಹನುಮಂತ ಹೊಂಬಳ, ಸೇರಿದಂತೆ ಗ್ರಾಮಸ್ಥರು, ಗ್ರಾಪಂ ಸಿಬ್ಬಂದಿ ವರ್ಗದವರು ಮುಂತಾದವರು ಉಪಸ್ಥಿತರಿದ್ದರು.

 ಪತ್ರಕರ್ತನ ಮೇಲೆ ಹಲ್ಲೆ: ಆರೋಪಿಗಳನ್ನು ಬಂಧಿಸಿ
ನರಗುಂದ: ತಾಲೂಕಿನ ಹಿರೇಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ರಚನೆ ಮಾಡಲಾರದ ಬಗ್ಗೆ ಸುದಿ ಪ್ರಕಟಿಸಿದ್ದಕ್ಕೆ ಕೆಲ ಪುಡಾರಿಗಳು ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದು, ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗುರುವಾರ ನರಗುಂದ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘವು ಹಾಗೂ ಪತ್ರಿಕಾ ವಿತರಕರ ನೇತೃತ್ವದಲ್ಲಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.  ಸಿ.ಬಿ. ಸುಬೇದಾರ, ಉಮೇಶ ಬೋಳಶಟ್ಟಿ, ಬಸವರಾಜ ಹಲಕುರ್ಕಿ, ಪ್ರಭು ಗುಡಾರದ ಎಸ್.ಜಿ. ತೆಗ್ಗಿನಮನಿ, ಸಂಗೌನಗೌಡ ಖಾನಪ್ಪಗೌಡ್ರ, ಪರಪ್ಪ ಸವದಿ, ಅಶೋಕ ಶೆಳಕೆ, ರಮೇಶ ಮೋಟೆ, ಶಿವರಾಜ ನಾಗಠಾಣ, ಬಸವರಾಜ ಸತ್ತಿಗೇರಿ, ರಾಜೇಸಾಬ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

ಮೋದಿ ಪ್ರಧಾನಿಯನ್ನಾಗಿಸಿ
ಗದಗ: ಬಿಜೆಪಿ ಕಾರ್ಯಕರ್ತೆಯರು ಹಾಗೂ ಮಹಿಳಾ ಮೋರ್ಚಾದ ಕಾರ್ಯಕರ್ತೆಯರೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸಲು ಶ್ರಮಿಸುವಂತೆ ಬಿಜೆಪಿಯ ಶಹರ ಮಹಿಳಾ ಮೋರ್ಚಾದ ಅಧ್ಯಕ್ಷೆ ಅಶ್ವಿನಿ ಜಗತಾಪ ಹೇಳಿದರು.  ಈಚೆಗೆ ಅವರು ನಗರದ ಮರಾಠಾ ಸಮುದಾಯ ಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಗದಗ ಶಹರ ಪದಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸದಸ್ಯರ ಸಭೆಯಲ್ಲಿ ನಗರದ ಎಲ್ಲ ವಾರ್ಡ್ಗಳ ಮಹಿಳಾ ಕಾರ್ಯಕರ್ತೆಯರಿಗೆ ಹಕ್ಕು ಪದಗ್ರಹಣ ನೆರವೇರಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾ ಪಾಟೀಲ, ಗದಗ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷ ಜಯಶ್ರೀ ಉಗಲಾಟದ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಶಾರದಾ ಸಜ್ಜನರ, ಸುಶೀಲಾ ಸಿರಿ, ಮಕಲಾಕ್ಷಿ ಗೊಂದಿ, ನಿರ್ಮಲಾ ಜಿಗಳೂರ, ಲಲಿತಾ ಕಾರಟಗಿಮಠ, ರತ್ನಾ ದಾಸರ ಮುಂತಾದವರು ಉಪಸ್ಥಿತರಿದ್ದರು. ಮಾಲಾ ಕಿರೇಸೂರ ಸ್ವಾಗತಿಸಿದರು. ಪ್ರೇಮಾ ಕಡೇಮನಿ ನಿರೂಪಿಸಿದರು. ಶಿಲ್ಪಾ ಬಾಳಿಹಳ್ಳಿಮಠ ವಂದಿಸಿದರು.

ಜನ್ಮದಿನ: ಬುಕ್ ವಿತರಣೆ
ಶಿರಹಟ್ಟಿ: ಮಾಜಿ ಸಚಿವ ಆರ್. ವರ್ತೂರ್ ಪ್ರಕಾಶ 48 ವಸಂತಗಳನ್ನು ಪೂರೈಸಿ, 49ನೇ ವಸಂತಕ್ಕೆ ಕಾಲಿಟ್ಟ ನಿಮಿತ್ತ ವರ್ತೂರ ಪ್ರಕಾಶ ಯುವ ಸೇನೆಯ ಜಿಲ್ಲಾ ಅಧ್ಯಕ್ಷ ಫಕೀರೇಶ ಮ್ಯಾಟಣ್ಣವರ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ನೋಟಬುಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾ ಅಧ್ಯಕ್ಷ ಫಕೀರೇಶ ಮ್ಯಾಟಣ್ಣವರ ಮಾತನಾಡಿ, ಸಮಾಜದ ಒಳಿತಿಗಾಗಿ ಸಾರ್ಥಕ ಸೇವೆ ಮಾಡುತ್ತಿರುವ ಕೋಲಾರ ಮತಕ್ಷೇತ್ರದ ಹಾಲಿ ಶಾಸಕ ಆರ್. ವರ್ತೂರ ಪ್ರಕಾಶ ಪರಿಶಿಷ್ಟ ಜಾತಿ, ವರ್ಗದವರ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ, ಮಹಿಳೆಯರ, ಮಕ್ಕಳ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು. ಸೇನೆಯ ತಾಲೂಕು ಘಟಕದ ಅಧ್ಯಕ್ಷ ಸೋಮನಗೌಡ ಮರಿಗೌಡ್ರ, ಕರ್ನಾಟಕ ಪ್ರದೇಶ ಕುರುಬರ ಸಂಘದ ಸದಸ್ಯ ಸೋಮಣ್ಣ ಬೆಟಗೇರಿ, ಪಪಂ ಸದಸ್ಯ ಸಂತೋಷ ಕುರಿ, ಆಸರೆ ಸಂಸ್ಥೆ ಕಾರ್ಯದರ್ಶಿ ಶಶಿಧರ ಸಿರಸಂಗಿ, ಹೆಗ್ಗಪ್ಪ ಪೂಜಾರ, ಬಾಬಣ್ಣ ಲಮಾಣಿ, ನಾಗರಾಜ ಮಡಿವಾಳರ, ನಿಲೇಶ ಕಾಳಗಿ ಮುಂತಾದವರು ಹಾಜರಿದ್ದರು.

 ಸೌಲಭ್ಯ ಸದ್ಬಳಕೆಯಾಗಲಿ  
ರೋಣ: ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಅನೇಕ ಸೌಲಭ್ಯ ಜಾರಿಗೆ ತಂದಿದ್ದು, ಅವುಗಳ ಸದ್ಬಳಕೆಯಾದಲ್ಲಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ ಎಂದು ಹಾವೇರಿ ಲೋಕಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.  ಅವರು ಶನಿವಾರ ತಾಲೂಕಿನ ಹೊನ್ನಿಗನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2012-13ನೇ ಸಾಲಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಉಚಿತ ಸೈಕಲ್ ವಿತರಣಾ ಸಮಾರಂಭದಲ್ಲಿ ಸೈಕಲ್ ವಿತರಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎ.ಬಿ. ಮೇಟಿ ವಹಿಸಿ ಮಾತನಾಡಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೂವಪ್ಪ ಕಮಗುಳಿ, ಸಂಗಣ್ಣ ಚವಡಿ, ಸಂಗು ನವಲಗುಂದ, ಶಾಂತಗೌಡ ಗೌಡರ, ಹನುಮಂತಪ್ಪ ದೊಡ್ಡಮನಿ ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಸಾಹಿತ್ಯ ಸಂಜೆ ಕಾರ್ಯಕ್ರಮ

ಗದಗ: ಕನ್ನಡ ಸಾಹಿತ್ಯ ರಾಜಾಶ್ರಯದಿಂದ ಮುಕ್ತಿ ಪಡೆದು, ಆಂಗ್ಲ ಶಿಕ್ಷಣ ಪದ್ಧತಿಯು ಮತ್ತು ಕ್ರೈಸ್ತ ಮಿಷನರಿಗಳ ಧರ್ಮ ಪ್ರಚಾರದಿಂದ ಕನ್ನಡ ಸಾಹಿತ್ಯದ ಹೊಸತನಕ್ಕೆ ಪ್ರೇರಣೆ ನೀಡಿದೆ ಎಂದು ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಡಾ. ರಶ್ಮಿ ಸುರೇಶ ಹೇಳಿದರು.  ಅವರು ಈಚೆಗೆ ತಾಪಂನ ಆವರಣದಲ್ಲಿರುವ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ  ಮಾತನಾಡಿದರು.  ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಪ್ರಾ. ಕೆ.ಎಚ್. ಬೇಲೂರ, ಅ.ದ. ಕಟ್ಟಿಮನಿ,  ಎ.ಎಸ್.ಮಕಾನದಾರ, ಎಚ್.ಟಿ. ಸಂಜೀವಸ್ವಾಮಿ, ಬಸವರಾಜ ವಾರಿ, ಶಂಕರ ಗಾಣಿಗೇರ, ಪ್ರಕಾಶ ಗಿಡ್ಡಣ್ಣನವರ, ವಾಸುದೇವ ಹೂಲಿ, ರಮೇಶ ಸಜಗಾರ, ಮಲ್ಲಿಕಾರ್ಜುನ ಪೂಜಾರ, ಜಯಶ್ರೀ ಅಂಗಡಿ, ಶೋಭಾ ಶಲವಡಿ ಮುಂತಾದವರು ಪಾಲ್ಗೊಂಡಿದ್ದರು. ಭಾಗ್ಯಶ್ರೀ ಘಳಗಿ ಪ್ರಾರ್ಥಿಸಿದರು. ಡಾ. ಸಂಗಮೇಶ ತಮ್ಮನಗೌಡ್ರ ಸ್ವಾಗತಿಸಿದರು. ಮಲ್ಲೇಶ ಡಿ.ಎಚ್. ನಿರೂಪಿಸಿದರು. ಬಿ.ಎಸ್. ಹಿಂಡಿ ವಂದಿಸಿದರು.

ಹಲ್ಲೆ: ಪತ್ರಕರ್ತರ ಪ್ರತಿಭಟನೆ
ಗದಗ:  ಜಿಲ್ಲೆಯ ನರಗುಂದ ತಾಲೂಕಿನ ಪತ್ರಕರ್ತ ಎಸ್.ಎಸ್. ಖಾನಪ್ಪಗೌಡ್ರ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರು ಸೇರಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಜಗದೀಶ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಟಿ.ಎನ್. ಭಾಂಡಗೆ, ಡಾ. ಅನಂತ ಕಾರ್ಕಳ, ಅಜೀತ ಹೊಂಬಾಳಿ, ಮುತ್ತು ನಾಯ್ಕರ, ಮೃತ್ಯುಂಜಯ ಕಲ್ಮಠ, ಶಿವಕುಮಾರ ಕುಷ್ಟಗಿ, ಗಂಗಾಧರ ತಡಹಾಳ, ಮೌನೇಶ ಬಡಿಗೇರ, ವೆಂಕಟೇಶ ಇಮ್ರಾಪುರ, ಶಶಿಕಾಂತ ಕುಲಕರ್ಣಿ, ಬನ್ನೇಶ ಕುಲಕರ್ಣಿ, ವಿಶ್ವನಾಥ ಹಿರೇಮಠ, ಪ್ರಭು ಮತ್ತಿಕಟ್ಟಿ, ಪ್ರಭುಗೌಡ ಪಾಟೀಲ, ಮಂಜುನಾಥ ಯಡಹಳ್ಳಿ, ವಸಂತ ಮಹೇಂದ್ರಕರ, ರಾಮು ವಗ್ಗಿ, ಶಂಕರ ಗುರಿಕಾರ, ವಿನಾಯಕ ಚೌಡಾಪುರ, ಬಸವರಾಜ ಕುಂದಗೋಳ, ಶರತ್ ಮಹೇಂದ್ರಕರ ಮುಂತಾದವರು ಪಾಲ್ಗೊಂಡಿದ್ದರು.

ಶಾಸಕ ಯಾವಗಲ್ಗೆ ಮನವಿ
ಗದಗ: ಜಿಲ್ಲೆಯ ನರಗುಂದ ಪುರಸಭೆಯ ದಲಿತ ಪೌರಕಾರ್ಮಿಕರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಈಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ನರಗುಂದ ಶಾಸಕ ಬಿ.ಆರ್. ಯಾವಗಲ್ ಅವರಿಗೆ ಮನವಿ ಸಲ್ಲಿಸಲಾಯಿತು. ನರಗುಂದ ಪುರಸಭೆಯಲ್ಲಿ ಸುಮಾರು 50-60 ವರ್ಷಗಳಿಂದಲೂ ಅತ್ಯಂತ ಹೀನಾಯವಾದ ಭಂಗಿ ಕೆಲಸದಲ್ಲಿ ತಮ್ಮ ಬದುಕನ್ನು ಕಳೆಯುತ್ತಿರುವ ದಲಿತ ಪೌರಕಾರ್ಮಿಕ ಕುಟುಂಬದವರಿಗೆ ಮೂಲ ಸೌಕರ್ಯಗಳಲ್ಲೊಂದಾದ ವಸತಿಗೃಹಗಳನ್ನು ಮಂಜೂರು ಮಾಡದೇ ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿಯೇ ಇದುವರೆಗೂ ಜೀವಿಸುತ್ತಿದ್ದು, ಈ ಕುರಿತು ಶಾಸಕರು ಚರ್ಚಿಸಿ ಪುರಸಭೆಯ ಪೌರಕಾರ್ಮಿಕರಿಗೆ ಸೂಕ್ತ ನಿವೇಶನ ನೀಡುವಲ್ಲಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದೆ.   ಸತೀಶ ಹೂಲಿ, ಯುವರಾಜ ಬಳ್ಳಾರಿ, ಮಾರುತಿ ಗುಡಿಮನಿ, ಗಣೇಶ ಹುಬ್ಬಳ್ಳಿ, ದಸಂಸ ನಾಯಕ ಎಸ್.ಎನ್. ಬಳ್ಳಾರಿ, ಪರಶುರಾಮ ಪೂಜಾರ, ವೈ.ಡಿ. ಮುಳ್ಯಾಳ, ನಾಗರಾಜ ಗುತ್ತಿ, ಮಂಜುನಾಥ ತೌಜೂಲ್, ರವಿ ಹಾದಿಮನಿ, ಮಂಜುನಾಥ ಪೂಜಾರ, ನಾರಾಯಣಕುಮಾರ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.

ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿ  
ಗದಗ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ 20 ತಿಂಗಳಲ್ಲಿ ಬಡವರ, ದೀನದಲಿತರ ಪರ, ಅಂಗವಿಕಲ, ವಿಧವೆಯರ, ಅಲ್ಪಸಂಖ್ಯಾತರ ಪರ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಲಿ ಎಂದು ಜೆಡಿಎಸ್ ಯುವಸಂಘಟನಾ ಕಾರ್ಯದರ್ಶಿ ವಿಷ್ಣುಸಾ ಅರವಟಗಿ ಹೇಳಿದರು. ಈಚೆಗೆ ಅವರು ಬೆಟಗೇರಿಯ ಮಂಜುಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಜನ್ಮದಿನಾಚರಣೆ ಆಚರಿಸಿ, ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು, ಬ್ರೆಡ್ ವಿತರಿಸಿ ಮಾತನಾಡಿದರು. ಅಬ್ದುಲ್ ನರಸಾಪುರ, ಕಿರಣ ಹಿಡ್ಕಿಮಠ, ಚನ್ನಪ್ಪ ಹಳ್ಳೂರ, ಮುತ್ತು ಚಗಜಿನ್ನಿ, ರಫೀಕ ನರಗುಂದ, ಅಸ್ಲಂ ನರಗುಂದ, ಆಶೀಫ ನರಸಾಪುರ, ಖಾದರಬಾಷಾ ನರಗುಂದ, ಸಂತೋಷ ರೊಟ್ಟಿ, ರಾಜು ರೊಟ್ಟಿ, ಭೀಮಪ್ಪ ಹದ್ದಣ್ಣವರ, ಪ್ರಕಾಶ ಬಸವಾ, ಮಂಜು ಶಿಕ್ಷಣ ಸಂಸ್ಥೆಯ ಶಂಕರಸಿಂಗ್ ರಜಪೂತ ಹಾಗೂ ಸಿಬ್ಬಂದಿ ಇದ್ದರು.

ಗೋಮಾತೆ ಸಂರಕ್ಷಿಸಿ: ಲಿಂಗಾನಂದ ಶ್ರೀ
ನರಗುಂದ: ಗೋ ಮಾತೆಯನ್ನು ಸಂರಕ್ಷಿಸುವ ಕಾರ್ಯ ಮಾಡಬೇಕಾಗಿದೆ ಎಂದು ಬೈಲಹೊಂಗಲ ತಾಲೂಕು ತಿಗಡೊಳ್ಳಿಯ ಲಿಂಗಾನಂದ ಶ್ರೀಗಳು ಹೇಳಿದರು. ಅವರು ಈಚೆಗೆ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ, ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 221ನೇ ಮಾಸಿಕ ಶಿವಾನುಭವ ಹಾಗೂ ಶಿಕ್ಷಕ ಪಿ.ಎಸ್. ಆನಂದರಭಾವಿಯವರ ತಂದೆ-ತಾಯಿ ಸ್ಮರಣೆಗಾಗಿ ಗೋದಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ದಿ. ಮಲ್ಲಮ್ಮ ಆನಂದರಭಾವಿ, ಫಕೀರಪ್ಪ ಆನಂದರಭಾವಿ ಸಾ. ಮುಳಗುಂದ ಇವರ ಸ್ಮರಣಾರ್ಥ ಕೋಟುಮಚಗಿಯ ಶಿಕ್ಷಕ ಪಿ.ಎಫ್. ಆನಂದರಭಾವಿ ಶ್ರೀಮಠಕ್ಕೆ ಗೋದಾನ ಮಾಡಿದರು. ಬನಹಟ್ಟಿ ರುದ್ರಸ್ವಾಮಿ ಮಠದ ಸೋಲಬಯ್ಯ ಶ್ರೀಗಳು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಬನಹಟ್ಟಿ ಚಂದ್ರಶೇಖರಯ್ಯ ಹಿರೇಮಠ ಶ್ರೀಗಳು ಮಾತನಾಡಿದರು.

ಮಹಿಳೆಯರು ಕರಾಟೆ ಕಲಿಯಿರಿ: ಗರಗ
ಗದಗ:  ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಮನಿಸಿದಲ್ಲಿ ಕರಾಟೆ ಕಲೆ ಎಷ್ಟು ಅವಶ್ಯಕವಾಗಿದೆ ಎಂಬುದು ಅರಿವಾಗಲಿದೆ. ಹೆಣ್ಣುಮಕ್ಕಳು ಕರಾಟೆ ಕಲಿಯುವುದರಿಂದ ಅವರಲ್ಲಿ ಧೈರ್ಯ, ಆತ್ಮವಿಶ್ವಾಸ, ಹೋರಾಟದ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ನಗರಸಭೆ ಸದಸ್ಯ ಅನಿಲ ಗರಗ ಹೇಳಿದರು. ಈಚೆಗೆ ಅವರು ನಗರದ ಸಮರ್ಥ ವಿವಿದೋದ್ಧೇಶಗಳ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಸಮರ್ಥ ಕರಾಟೆ ಕ್ಲಬ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರೂಸ್ಲಿ ಹುಟ್ಟುಹಬ್ಬ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಅಣಗೌಡ್ರ, ಎಚ್. ಭಜಂತ್ರಿ, ಸಮರ್ಥ ಕರಾಟೆ ಶಿಕ್ಷಕ ಸಂಜಯ ಬೇವಿನಕಟ್ಟಿ, ನೀರಜ್ ಭಜಂತ್ರಿ, ವಿಶ್ವನಾಥ, ಚಿನ್ಮಯಿ, ಚರಮೂರ್ತಿ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗೈಬು ಕಲೇಬಾವಿ, ಸುನೀಲ್ ಬದಿ ಮುಂತಾದವರು ಉಪಸ್ಥಿತರಿದ್ದರು. ಓಂಕಾರ ಬೇವಿನಕಟ್ಟಿ ಸ್ವಾಗತಿಸಿದರು. ನೀರಜ ಭಜಂತ್ರಿ ನಿರೂಪಿಸಿದರು.

ಭಜನೆ: ಸಂಸ್ಕೃತಿ ಉಳಿವು
ಗದಗ: ಭಜನಾ ಸ್ಪರ್ಧೆ ಏರ್ಪಡಿಸುವುದರಿಂದ ಧರ್ಮ ಮತ್ತು ಸಂಸ್ಕೃತಿ ಉಳಿಯುತ್ತದೆ ಎಂದು ಮುಂಡರಗಿಯ ಜ. ಅನ್ನದಾನ ಸಂಸ್ಥಾನ ಮಠದ ನಾಡೋಜ ಡಾ. ಅನ್ನದಾನ ಶ್ರೀಗಳು ಹೇಳಿದರು.
ಈಚೆಗೆ ಅವರು ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಂಕ್ರಯ್ಯ ಹಿರೇಮಠ ಅತಿಥಿಗಳಾಗಿ ಆಗಮಿಸಿದ್ದ ಕೊಟ್ರಯ್ಯಶಾಸ್ತ್ರಿ ಲಕ್ಕುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಲವು ಕಲಾವಿದರನ್ನು ಸನ್ಮಾನಿಸಲಾಯಿತು. ನಿಂಗಜ್ಜ, ರವಿ, ಚಂದ್ರಪ್ಪ ಕರಮುಡಿ, ಸಿದ್ದಪ್ಪ ಮಂಗಳೂರ, ಅಜ್ಜಪ್ಪ ಗಡ್ಡದ, ಶಿವಣ್ಣ ಭಜಂತ್ರಿ, ಕೊಟ್ರೇಶ ನಾಗಾವಿಮಠ, ನೀಲಪ್ಪ, ಎಸ್.ವಿ. ಚನ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು. ಯು.ಎ. ಹಂಚಿನಾಳ ನಿರೂಪಿಸಿದರು. ಈಶಪ್ಪ ವಂದಿಸಿದರು.

ಆಂಗ್ಲ ಶಾಲೆಗಳಿಂದ ಕನ್ನಡ ಭಾಷೆಗೆ ಧಕ್ಕೆ: ಹುಯಿಲಗೋಳ
 ಗದಗ:  ಪ್ರತಿ ಪಟ್ಟಣಗಳಿಂದ ಹಿಡಿದು ಹಳ್ಳಿಗಳಲ್ಲೂ ನಾಯಿಕೊಡೆಗಳಂತೆ ಹಬ್ಬುತ್ತಿರುವ ಆಂಗ್ಲಮಾಧ್ಯಮ ಶಾಲೆಗಳ ಹಾವಳಿಯಿಂದ ಕನ್ನಡ ನಾಡು, ಭಾಷೆ ಬೆಳವಣಿಗೆಗೆ ತೊಂದರೆಯಾಗುತ್ತಿದ್ದು, ಕಾರಣ ಎಲ್ಲ ಆಂಗ್ಲಶಾಲೆಗಳನ್ನು ಬಂದ್ಮಾಡಿ ಕನ್ನಡ ಶಾಲೆಗಳನ್ನು ಸುಸಜ್ಜಿತವಾಗಿ ಬೆಳೆಸುವುದರ ಮೂಲಕ ಸಂಪೂರ್ಣ ಕನ್ನಡ ಅನುಷ್ಠಾನಕ್ಕೆ ಸರ್ಕಾರ ತನ್ನ ಇಚ್ಛಾಶಕ್ತಿ ತೋರಬೇಕು ಎಂದು ಅಜೀತ ಹುಯಿಲಗೋಳ ಹೇಳಿದರು. ಈಚೆಗೆ ಅವರು ನಗರದ ನೇಸರ ಉಪಾಹಾರ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಕಲಾವೇದಿಕೆಯ ವತಿಯಿಂದ ಜರುಗಿದ ಕನ್ನಡ ಅನುಷ್ಠಾನದಲ್ಲಿ ವೈಫಲ್ಯಗಳು ಕುರಿತ ಕಾರ್ಯಕ್ರಮದಲ್ಲಿ  ಮಾತನಾಡಿದರು. ಕನ್ನಡದ ಬಗ್ಗೆ ಉದಾಸೀನತೆ ತೋರದೆ ಕನ್ನಡ ಸ್ವಾಭಿಮಾನ ಬೆಳೆಸಿಕೊಂಡು ಕನ್ನಡಕ್ಕಾಗಿ ಹೋರಾಡುವಂತೆ ಕರೆ ನೀಡಿದರು. ಡಾ. ಎಚ್.ಬಿ. ಪೂಜಾರ, ರಾಮಚಂದ್ರ ಹಂಸನೂರ, ರಶ್ಮಿ ಸುರೇಶ, ಅ.ದ. ಕಟ್ಟಿಮನಿ, ಮಲ್ಲೇಶ ಡಿ.ಎಚ್, ವಿನಾಯಕ ಕಮತದ, ಮುರಲಿಧರ ಸಂಕನೂರ, ಎಂ.ಪಿ. ರಮೇಶ, ವಿಶ್ವನಾಥ ನಾಲ್ವಾಡದ ಮುಂತಾದವರು ಪಾಲ್ಗೊಂಡಿದ್ದರು.

ಬದುಕಿನ ಸಾರ್ಥಕತೆಯೇ ವ್ಯಕ್ತಿತ್ವ ವಿಕಸನದ ಗುರಿ

ಗದಗ: ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ತನ್ನ ವ್ಯಕ್ತಿತ್ವವನ್ನು ಉತ್ತಮಪಡಿಸಿಕೊಂಡಾಗ ಮಾತ್ರ ಸಾಧ್ಯ. ಬದುಕಿನ ಸಾರ್ಥಕತೆಯೇ ವ್ಯಕ್ತಿತ್ವ ವಿಕಸನದ ಗುರಿ ಎಂದು ಗದಗ ಶಹರ ವಲಯದ ದೈಹಿಕ ಶಿಕ್ಷಣ  ಶಿಕ್ಷಣಾಧಿಕಾರಿ ಎ.ಎಂ. ಕುಂಟೋಜಿ ಹೇಳಿದರು.  ಅವರು ಈಚೆಗೆ ನಗರದ ಸರ್ಕಾರಿ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆ ನಂ. 10 ಸೆಂಟ್ರಲ್ ಸ್ಕೂಲ್ ಹಾಗೂ ಸರ್ವಧರ್ಮ ಹಿತೈಷಿ ಸೇವಾ ಸಂಘ ಗದಗ ಸಂಯುಕ್ತಾಶ್ರಯದಲ್ಲಿ ನಡೆದ ವ್ಯಕ್ತಿತ್ವ ವಿಕಸನ-ಒಂದು ಪ್ರಯತ್ನ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ವಿದ್ಯುತ್ವಾಣಿ ಕಿರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಸಿ.ಬಿ. ಗೂಳರೆಡ್ಡಿ, ಪ್ರಧಾನ ಗುರು ಎಸ್.ಎನ್. ಬಳ್ಳಾರಿ, ಎಸ್.ಎಸ್. ಉಣ್ಣಿಮಠ, ಎಚ್.ಬಿ. ಚಲವಾದಿ, ಜಿ.ಆರ್. ಪಾಸ್ತೆ, ಎಸ್.ವಿ. ಕುರಹಟ್ಟಿ, ಎಸ್.ಆರ್. ಹಲಕುರ್ಕಿ ಮುಂತಾದವರು ಉಪಸ್ಥಿತರಿದ್ದರು. ಎಸ್.ಎ. ಚಂದಪ್ಪನವರ ಸ್ವಾಗತಿಸಿದರು. ಎಸ್.ಸಿ. ಹಾನಗಲ್ಲ ನಿರೂಪಿಸಿದರು. ಜಿ.ಎಸ್. ಜತ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.