ಗದಗ

ಪರಿಶ್ರಮದಿಂದ ಕಲಾ ಕ್ಷೇತ್ರದಲ್ಲಿ ಸಾಧನೆ ಸಾಧ್ಯ: ಹರ್ಷದಾ

Published On :

ಗದಗ:  ಮಾನವನು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇಯಾದ ಪ್ರಭಾವ ಹೊಂದಲು ಮೊದಲಿನಿಂದಲೂ ಪ್ರಯತ್ನಿಸುತ್ತಾ ಬಂದಿದ್ದಾನೆ. ಆದ್ದರಿಂದ ಕಲಾವಿದನ ಮುಂದೆ ಸಾವಿರಾರು ಬಣ್ಣಗಳ ಮಾಧ್ಯಮಗಳಿವೆ. ಆದರೆ, ಯಾವುದೇ ಮಾಧ್ಯಮದಲ್ಲಿ ಹಾಗೂ ವಿಷಯದಲ್ಲಿ ಸಾಧನೆ ಮಾಡುತ್ತಿದ್ದರೆ ಪ್ರಬುದ್ಧ ಕಲಾವಿದರಾಗಿ ಬೆಳೆಯಲು ಸಾಧ್ಯ ಎಂದು ಗೋವಾದ ಕಲಾವಿದೆ ಹರ್ಷದಾ ಕೇರಕರ್ ಹೇಳಿದರು. ಈಚೆಗೆ ಅವರು ಸ್ಥಳೀಯ ರಾಜೀವಗಾಂಧಿ ನಗರದಲ್ಲಿರುವ ವಿಜಯಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾಪ್ರಾತ್ಯಕ್ಷಿಕೆಯಲ್ಲಿ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಯಾವುದೇ ಕಲಾಕೃತಿ ಪ್ರಬುದ್ಧತೆ ಸೂಚಿಸುವುದು. ರಚಿಸುವ ರೇಖೆ, ನೆರಳು, ಬೆಳಕಿನ ಸಮತೋಲನಗಳ ಕಾಪಾಡಿಕೊಳ್ಳಲು ವಿದ್ಯಾರ್ಥಿ ಸದಾಕಾಲ ಸಂಚಾರಿಯಾಗಿರಬೇಕು ಹಾಗೂ ಅಧ್ಯಯನ ಮನೋಭಾವ ಬೆಳೆಸಿಕೊಳ್ಳಬೇಕು. ಕಲಾ ಕ್ಷೇತ್ರದಲ್ಲಿ ಸಾಧನೆಯೆಂಬುದು ಕಠಿಣವಾಗಿದ್ದು, ಸತತ ಅಧ್ಯಯನ, ಹೊಸತನದ ಹುಡುಕಾಟ, ಕಲಿಯುವ ಆಸಕ್ತಿಯೇ ಯಶಸ್ಸಿನ ಮೆಟ್ಟಿಲು ಎಂದರು. ಸಂಸ್ಥೆಯ ನಿರ್ದೇಶಕ ಅಶೋಕ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಈ. ಬಡಿಗೇರ, ಆರ್.ವಿ. ಹೆಗಡೆ, ಬಿ.ಎಂ. ಬಿಳೆಯಲಿ, ಪ್ರಾ. ಪಿ.ವಿ. ಹಿರೇಮಠ, ಸಿ.ವಿ. ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಬಸವರಾಜ ನೆಲಜೇರಿ ನಿರೂಪಿಸಿದರು. ಎಸ್.ವಿ. ಗುಂಜಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.