ಉದ್ಯೋಗ ಖಾತ್ರಿ: ಗ್ರಾಮೀಣ ಜನರಲ್ಲಿ ಜಾಗೃತಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 22
ಸಮೀಪದ ಸೂಡಿ, ಮುಶಿಗೇರಿ, ದಿಂಡೂರು, ಕಲ್ಲಿಗನೂರ ಗ್ರಾಮಗಳಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಸಾಕ್ಷ್ಯ ಚಿತ್ರಗಳನ್ನೊಳಗೊಂಡ ವಾಹನ ಧ್ವನಿವರ್ಧಕ ಮೂಲಕ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಿತು. ಜತೆಗೆ ಯೋಜನೆ ಲಾಭ ಪಡೆಯಲು ಜನತೆಗೆ ಸಂದೇಶ ನೀಡಿತು.
ಜಿಪಂ ವತಿಯಿಂದ ಗ್ರಾಮೀಣ ಪ್ರದೇಶದ ಎಲ್ಲ ದುಡಿಯುವ ಕುಟಂಬ ವರ್ಗದವರಿಗೆ ಕನಿಷ್ಠ 100 ದಿನಗಳ ಉದ್ಯೋಗವನ್ನು ಕಲ್ಪಿಸಲು ಹಾಗೂ ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಾಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ 2005ರಿಂದ ಅನುಷ್ಠಾನಗೊಳಿಸಿದೆ. ದುರ್ಬಲ ವರ್ಗದವರ ಸಾಮಾಜಿಕ ಭದ್ರತೆಗಾಗಿ ರೂಪಿಸಿರುವ ಈ ಮಹತ್ತರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಂಚಾಯತ್ ರಾಜ್ ಸಂಸ್ಥೆ ಆಡಳಿತ ಯಂತ್ರವನ್ನು ಸಮರ್ಪಕವಾಗಿ ಹಾಗೂ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಜನ ಇದರ ಪ್ರಯೋಜನ ಪಡೆಯುವುದು ಜಾಗೃತಿ ವಾಹನ ಮೂಲ ಉದ್ದೇಶವಾಗಿದೆ ಎಂದು ಎಸ್.ಸಿ. ಕುರ್ತಕೋಟಿ ತಿಳಿಸಿದರು. ಕೂಲಿಕಾರರ ಕುಂದುಕೊರತೆ ಅನುಷ್ಠಾನಾಧಿಕಾರಿಗಳ ಸಮಸ್ಯೆಗಳನ್ನು ಯೋಜನೆಯಲ್ಲಿ ತೊಡಗಿರುವ ಪಾಲುದಾರರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಪರಿಹರಿಸಲು ಅಧಿನಿಯಮದ ಅನ್ವಯ ಯೋಜನೆಯನ್ನು ಮತ್ತು ಅಧಿನಿಯಮವನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ಪೂರಕವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನಾ ನಿರ್ದೇಶನಾಲಯ ಕರಮುಕ್ತ ಸಹಾಯವಾಣಿ (18004258666) ಸ್ಥಾಪಿಸಿರುವ ಬಗೆಗೆ ಜನತೆಗೆ ಮಾಹಿತಿ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

