ಗದಗ

ಶಿವರುದ್ರಪ್ಪ ನಿಧನಕ್ಕೆ ತೋಂಟದ ಶ್ರೀ ಶೋಕ

Published On :

ಗದಗ:  ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಜ. ತೋಂಟದ ಸಿದ್ಧಲಿಂಗ ಶ್ರೀ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶೋಕ ಸಂದೇಶ ನೀಡಿರುವ ಪೂಜ್ಯರು, ರಾಷ್ಟ್ರಕವಿ ವಿಶ್ವಮಾನವೀಯ ಮೌಲ್ಯಗಳ ಪ್ರತಿಪಾದಕ ಕುವೆಂಪು  ಅವರ ನೆಚ್ಚಿನ ಶಿಷ್ಯರಾಗಿದ್ದ ಜಿ.ಎಸ್. ಶಿವರುದ್ರಪ್ಪ ಮಾನವೀಯ ಅನುಕಂಪದ ಕವಿಯಾಗಿದ್ದರು. ದೇವರ ಹೆಸರಿನ ಶೋಷಣೆ ಹಾಗೂ ದ್ವಂದ್ವಗಳನ್ನು ಖಂಡಿಸಿ, ಅವರು ಬರೆದಿದ್ದ ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣಿನ ಗುಡಿಯೊಳಗೆ ಗೀತೆ ಹಾಗೂ ಭಾವತುಂಬಿ ಬರೆದ ಎದೆ ತುಂಬಿ ಹಾಡುವೆನು..ಗೀತೆಗಳು ಇಂದಿಗೂ ಎಂದಿಗೂ ಸ್ಮರಣೀಯವಾಗಿವೆ.
ಬೆಂಗಳೂರು ವಿವಿಯನ್ನು ಕಟ್ಟಿ ಬೆಳೆಸಿದ್ದ ಅವರು ಎಲ್ಲರ ನೆಚ್ಚಿನ ಕನ್ನಡ ಪ್ರಾಧ್ಯಾಪಕರು, ಕವಿ ಸಾಹಿತಿಗಳಾಗಿದ್ದರು. ಕನ್ನಡ ನಾಡಿನ ಧೀಮಂತ ಸಾಹಿತ್ಯ ಸಾಧಕರಾಗಿದ್ದ ಜಿ.ಎಸ್. ಶಿವರುದ್ರಪ್ಪ ಅವರು ಇನ್ನಿಲ್ಲ ಎಂಬುದು ಕನ್ನಡಿಗರಿಗೆಲ್ಲ ನೋವಿನ ಸಂಗತಿ. ಜಿ.ಎಸ್. ಶಿವರುದ್ರಪ್ಪ ಅವರಿಗೆ ರಾಷ್ಟ್ರಕವಿ ಪುರಸ್ಕಾರ ದೊರೆತಾಗ ಶ್ರೀಮಠಕ್ಕೆ ಕರೆಯಿಸಿ ಅವರಿಗೆ ಸನ್ಮಾನ ಮಾಡಿ ಪುರಸ್ಕರಿಸಲಾಗಿತ್ತು. ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳೆಯಲು ಜಿ.ಎಸ್.ಎಸ್. ನೀಡಿದ ಕೊಡುಗೆ ಅಮೋಘವಾಗಿದೆ.
ಅವರನ್ನೆಂದಿಗೂ ಸ್ವಾಭಿಮಾನಿ ಕನ್ನಡಿಗರು ಮರೆಯುವಂತಿಲ್ಲ. ತಮ್ಮೊಂದಿಗೆ ಹಾಗೂ ಶ್ರೀಮಠದೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿದ್ದ ಜಿ.ಎಸ್. ಶಿವರುದ್ರಪ್ಪ ಅಗಲಿಕೆ ನೋವು ತಂದಿದೆ ಎಂದು ಜ. ತೋಂಟದ ಸಿದ್ಧಲಿಂಗ ಶ್ರೀ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.