ಗದಗ

ಸುದ್ದಿ ಸಂಕ್ಷೇಪ

Published On :

ರಾಷ್ಟ್ರಕವಿ ನಿಧನಕ್ಕೆ ಸಚಿವರ ಸಂತಾಪ
ಗದಗ: ನಾಡಿನ ಅತ್ಯಂತ ಶ್ರೇಷ್ಠ ಸಾಹಿತ್ಯಕಾರರಲ್ಲಿ ಒಬ್ಬರಾಗಿದ್ದ ಹಾಗೂ ರಾಷ್ಟ್ರಕವಿ ಗೌರವ ಪಡೆದಿದ್ದ ಜಿ.ಎಸ್. ಶಿವರುದ್ರಪ್ಪ ಅವರ ಅಗಲುವಿಕೆ ರಾಜ್ಯದ ಸಾಂಸ್ಕೃತಿಕ ವಿಶೇಷವಾಗಿ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸಂತಾಪ ಸೂಚಿಸಿದ್ದಾರೆ.
ಶ್ರದ್ಧಾಂಜಲಿ ಸಭೆ
ಶಿರಹಟ್ಟಿ: ಡಾ. ಜಿ.ಎಸ್. ಶಿವರುದ್ರಪ್ಪ ಅವರ ಆಕಸ್ಮಿಕ ಅಗಲುವಿಕೆ ನಾಡಿನ ಸಾರಸ್ವತ, ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ಆಘಾತವನ್ನುಂಟು ಮಾಡಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ.ಬಳಿಗೇರ ಹೇಳಿದರು. ಪಟ್ಟಣದಲ್ಲಿ ಕಸಾಪ ವತಿಯಿಂದ ಅಗಲಿದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಸಿ ಮಾತನಾಡಿದರು. ಸತ್ವಯುತ ವೈಚಾರಿಕ ಬರಹದ ಮೂಲಕ ಸಮಾಜದ ಅಂಕುಡೊಂಕುಗಳನ್ನು ಸಾಹಿತ್ಯದ ಮೂಲಕ ಸುಧಾರಣೆ ಮಾಡಲು ಸಾಧ್ಯ ಎಂಬ ನಿಲುವನ್ನು ಹೊಂದಿದ್ದ ಅವರ ಸಮಗ್ರ ಸಾಹಿತ್ಯ ಎಂದೆಂದಿಗೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅ.ಓಂ.ಪಾಟೀಲ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಫ್.ಎಸ್. ಅಕ್ಕಿ, ವಿಶ್ವ ಚೇತನ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎನ್.ಆರ್. ಕುಲಕರ್ಣಿ, ಕಸಾಪ ಗೌರವ ಕಾರ್ಯದರ್ಶಿ ಗಿರೀಶ ಕೋಡಬಾಳ, ಪ್ರಕಾಶ ಜೀರಂಕಳ್ಳಿ, ಎಚ್.ಎಂ. ದೇವಗಿರಿ, ಎಂ.ಸಿ. ಮರಡೂರಮಠ, ಎಂ.ಬಿ. ಹಾವೇರಿ ಮತ್ತಿತರರು ಇದ್ದರು.
ಸಾಹಿತಿ ಜಿ.ಎಸ್.ಎಸ್. ನಿಧನ: ಸಂತಾಪ
ಲಕ್ಷ್ಮೇಶ್ವರ: ನಾಡಿನ ಹೆಸರಾಂತ ಸಾಹಿತಿ, ಪಂಪ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ನಿಧನವು ಕನ್ನಡ ನಾಡಿಗೆ ಹಾಗೂ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಸಿ.ವಿ. ಕೆರಿಮನಿ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಜಿ.ಎಸ್. ಶಿವರುದ್ರಪ್ಪನವರ ನಿಧನಕ್ಕೆ ಶಿರಹಟ್ಟಿ ತಾಲೂಕು ಕಸಾಪದ ಅಧ್ಯಕ್ಷ ಕೆ. ಬಳಿಗೇರ, ಕಾರ್ಯದರ್ಶಿ ಅಶೋಕ ಸೊರಟೂರ, ಗಿರೀಶ ಕೋಡಬಾಳ, ಸದಸ್ಯ ನಾಗರಾಜ ಹಣಗಿ, ಜಿ.ಎಸ್. ರಾಮಶೆಟ್ಟರ, ಈಶ್ವರ ಮೆಡ್ಲೇರಿ, ಎಸ್.ಬಿ. ಅಣ್ಣಿಗೇರಿ, ಪ್ರಮೀಳಾ ಸಾಂಗ್ಲೀಕರ, ಜಿಲ್ಲಾ ಕಾರ್ಯದರ್ಶಿ ಎಸ್.ವಿ. ತಮ್ಮನಗೌಡರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ಎಸ್.ಎನ್. ಪಾಟೀಲ, ರಾಮಣ್ಣ ಲಮಾಣಿ, ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ಪಟ್ಟಣದ ಮಹಾಕವಿ ಪಂಪ ಸಾಹಿತ್ಯ ವೇದಿಕೆಯ ಖಜಾಂಚಿ ಮಲ್ಲಿಕಾರ್ಜುನ ಕಳಸಾಪುರ, ಪಟ್ಟಣದ ರೋಟರಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಹಾಗೂ ಸರ್ವ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.