ಗದಗ

ಶಬರಿಮಲೆ ಯಾತ್ರಿಗಳಿಗೆ ಸಹಾಯಧನ ನೀಡಿ

Published On :

ಶಿರಹಟ್ಟಿ: ರಾಜ್ಯದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನ ಅಯ್ಯಪ್ಪಸ್ವಾಮಿ ಭಕ್ತರು ಜನವರಿಯಲ್ಲಿ ಶಬರಿಮಲೈಗೆ ಯಾತ್ರೆ ಕೈಗೊಳ್ಳುತ್ತಾರೆ. ಯಾತ್ರೆಗೆ ತೆರಳುವರು ಬಹುತೇಕರು ಬಡವರಿದ್ದು, ಸರ್ಕಾರ ಇವರಿಗೆ ಸಹಾಯಧನ ನೀಡಬೇಕು ಎಂದು ಶ್ರೀರಾಮ ಸೇನೆ ಆಗ್ರಹಿಸಿದೆ.
ಈ ಕುರಿತು ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ಅವರಿಗೆ ಮನವಿ ಅರ್ಪಿಸಿದರು. ಶ್ರೀರಾಮ ಸೇನಾ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ, ಸುರೇಶ ಹಾದಿಮನಿ, ಮುತ್ತು ಭಾವಿಮನಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಹುಸಂಖ್ಯಾತ ಹಿಂದೂಗಳ ಹಿತವನ್ನು ಬದಿಗೊತ್ತಿದೆ. ಇದನ್ನು ಸಂಘಟನೆ ಪರವಾಗಿ ಖಂಡಿಸುತ್ತೇವೆ ಎಂದರು. ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ಮನವಿ ಸ್ವೀಕರಿಸಿ ಮಾತನಾಡಿ, ಕೂಡಲೇ ತಮ್ಮ ಬೇಡಿಕೆಯ ಮನವಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿ ಕೊಡುವುದಾಗಿ ತಿಳಿಸಿದರು.
ಗುರುಸ್ವಾಮಿ ಕಾಳಪ್ಪ ನರಹರಿ, ಮಲ್ಲು ಕುದರಿ, ಮಂಜುನಾಥ ಕಲಾಲ, ಬಸವರಾಜ ತೋಟದ, ಫಕ್ಕೀರೇಶ ಲೋಹಾರ, ಶ್ರೀನಿವಾಸ ಬಾರಬಾರ, ಸುರೇಶ ಕೋಳಿ, ಹನುಮಂತಗೌಡ ಪಾಟೀಲ, ಗುರು ಸಾವಜಿ, ಮುತ್ತು ಕರಿಗಾರ, ದೇವಪ್ಪ ಕುಳಗೇರಿ, ಬಸವರಾಜ ದಿವಟರ, ಸಣ್ಣದುರಗಪ್ಪ ವರವಿ, ವಿನೋದ ಹುಯಿಲಗೋಳ ಅಯ್ಯಪ್ಪಸ್ವಾಮಿ ಭಕ್ತರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.