ಗದಗ

ಶರೀರ ಉಪಯೋಗದ ಕುರಿತು ತಿಳಿದಿರಲಿ

Published On :

ಕನ್ನಡಪ್ರಭ ವಾರ್ತೆ, ಮುಳಗುಂದ, ಡಿ. 24
ಮನುಷ್ಯ ತನ್ನ ಶರೀರವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ತಿಳಿದಿರಬೇಕು ಎಂದು ಮುಳಗುಂದ ಗವಿಮಠ ಹಾಗೂ ಧಾರವಾಡ ಮುರುಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಶ್ರೀಗಳು ಹೇಳಿದರು. ಅವರು ಈಚೆಗೆ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ 651ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.
ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ದುಸ್ಸಾಹಸ ಮಾಡಬೇಡಿ. ಮುಖ ಎನ್ನುವುದು ಅವರ ಮನಸ್ಸಿನ ಕನ್ನಡಿಯಿದ್ದಂತೆ. ಮುಖವೇ ಅವರ ಚರಿತ್ರೆ ಹೇಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಮದ್ಯ ಸೇವನೆಯಿಂದ ಹೇಯ ಕೃತ್ಯಗಳು ನಡೆಯುತ್ತಿವೆ. ಇಂತಹ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಎಷ್ಟು ನಡೆದರೂ ಕಡಿಮೆಯೇ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶಿಭಿರಾರ್ಥಿಗಳ ಸಮಸ್ಯೆಗೆ ಸ್ಪಂದಿಸಲಾಗುವುದು. ಇಂತಹ ಶಿಬಿರಗಳಿಂದ ಬಡತನದಲ್ಲಿರುವ ಕುಟುಂಬಗಳನ್ನು ಮೇಲೆತ್ತಲು ಸಾಧ್ಯವಿದೆ ಎಂದರು.
ಗ್ರಾಮಾಭಿವೃದ್ಧಿ ಸಂಘದ ರಾಜ್ಯ ನಿರ್ದೇಶಕ ವಿವೇಕ ವಿನ್ಸೆಂಟ್ ಪೈಸ್ ಮಾತನಾಡಿದರು. ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಉಪಾಧ್ಯಕ್ಷೆ ದಾಕ್ಷಾಯಣಿ ಜಯಕುಮಾರ, ಗ್ರಾಮಾಭಿವೃದ್ಧಿ ಸಂಘಗಳ ಪ್ರಾದೇಶಿಕ ನಿರ್ದೇಶಕ ಬೂದಪ್ಪಗೌಡ್ರ, ಗದಗ ಜಿಲ್ಲಾ ನಿರ್ದೇಶಕ ಜಯಂತ ಪೂಜಾರಿ, ಭಾರತ ನೂಲಿನ ಗಿರಣಿಗಳ ಮಹಾಮಂಡಳಗಳ ಅಧ್ಯಕ್ಷ ಆರ್.ಎನ್. ದೇಶಪಾಂಡೆ, ಪಿಎಸ್ಐ ಪರಮೇಶ್ವರ ಕವಟಗಿ, ಯೋಗ ಶಿಕ್ಷಕ ಸಂಗಪ್ಪಶೆಟ್ರ, ಶಿಬಿರದ ಅಧ್ಯಕ್ಷ ವಿ.ಡಿ. ಕಣವಿ, ಉಪಾಧ್ಯಕ್ಷ ಎಂ.ಎಂ. ಜಮಾಲಸಾಬನವರ, ಶಿಬಿರಾಧಿಕಾರಿ ಪ್ರದೀಪ,  ಆರೋಗ್ಯ ಸಹಾಯಕಿ ಪ್ರಭಾ ಮುಂತಾದವರು ಉಪಸ್ಥಿತರಿದ್ದರು. ಯೋಗ ಶಿಕ್ಷಕ ಪ್ರಕಾಶ ಮದ್ದೀನ ಸ್ವಾಗತಿಸಿದರು. ಮೇಲ್ವಿಚಾರಕ ಆರ್. ಮಂಜುನಾಥ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.