ಗದಗ

ಗ್ರಾಮೀಣ ಪರಿವರ್ತನೆಗೆ ಮಾಧ್ಯಮ ಆದ್ಯತೆ ನೀಡಲಿ

Published On :

ಗದಗ: ತಾತ್ಪರ್ಯದ ಬರಹಗಳ ಮೂಲಕ ಗ್ರಾಮೀಣ ಜನರ ಬದುಕಿನಲ್ಲಿ ಪರಿವರ್ತನೆ ತರಲು ಮಾಧ್ಯಮ ಕ್ಷೇತ್ರ ಹೆಚ್ಚಿನ ಪ್ರಾಮುಖ್ಯ ನೀಡಬೇಕಿದೆ ಎಂದು ಜಿಪಂ ಸಿಇಒ ವೀರಣ್ಣ ತುರಮರಿ ಹೇಳಿದರು.
ಅವರು ಭಾನುವಾರ ಗದಗ ನಗರದ ವೀರಶೈವ ಲೈಬ್ರರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಅನಂತ ಲೇಖನಿ ಪಾಕ್ಷಿಕ ಪತ್ರಿಕೆಯ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಸರ್ಕಾರ ಮಹತ್ತರ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಜನಾರೋಗ್ಯ ಹಾಗೂ ಸಾಮಾಜಿಕ ನೆಮ್ಮದಿ ಕಾಪಾಡುವ ಕಾರ್ಯ ಜರುಗಬೇಕಿದೆ. ನಿಸ್ಫಕ್ಷಪಾತ ವರದಿಗಳು ಮತ್ತು ಲೇಖನಗಳಿಂದ ಪರಿವರ್ತನೆ ಸಾಧ್ಯವಾಗಲಿದ್ದು, ಬದಲಾವಣೆಗೆ ಪೂರಕವಾದ ಸತ್ಯಾಂಶಉಳ್ಳ ವರದಿಗಳಿಗೆ ಪ್ರಾಮುಖ್ಯ ನೀಡಿ, ಜಿಲ್ಲೆ, ರಾಜ್ಯದ ಅಭಿವೃದ್ಧಿಗೆ ಮಾಧ್ಯಮದ ಮಾರ್ಗದರ್ಶನ ಅಗತ್ಯವೆಂದರು.
ಅಧ್ಯಕ್ಷತೆ ವಹಿಸಿದ್ದ ಬಸವಯ್ಯ ಶಾಸ್ತ್ರಿಗಳು ಮಾತನಾಡಿ, ಆಧುನಿಕ ತಂತ್ರಜ್ಞಾನದ ಬಳಕೆಯ ಮಧ್ಯದಲ್ಲಿಯೂ ಪತ್ರಿಕಾ ರಂಗ ಇಂದು ಸಾಕಷ್ಟು ಕಷ್ಟಕರ ಹಾದಿಯಲ್ಲಿ ಸಾಗಿದೆ. ಉತ್ತಮ ವ್ಯಕ್ತಿತ್ವ ಹೊಂದಿದ, ಸಂಪಾದಕೀಯ ಮಂಡಳಿಯ ಸೇವೆಗೆ ನಾಗರಿಕ ಸಮಾಜ ಸದಾ ಪ್ರೋತ್ಸಾಹ ನೀಡಬೇಕು ಎಂದರು. ಸಾನ್ನಿಧ್ಯವಹಿಸಿದ್ದ ಸೊರಟೂರ ಫಕ್ಕೀರೇಶ್ವರ ಶ್ರೀಗಳು ಮಾತನಾಡಿ, ಪತ್ರಿಕೆಗಳು ಸಮಾಜ ತಿದ್ದುವ ಜ್ಞಾನ ದರ್ಪಣದ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಮೃತ್ಯುಂಜಯ ಸಂಕೇಶ್ವರ, ಮಂಜುನಾಥ ಅಬ್ಬಿಗೇರಿ, ಅಜೀತ ಹೊಂಬಾಳಿ, ರವಿ ಗುಂಜೀಕರ, ಸುನೀಲ ತೆಂಬದಮನಿ, ಬಿ.ಎಂ. ದಾಯಮ್ಮನವರ ಅತಿಥಿಗಳಾಗಿದ್ದರು. ಸಂಪಾದಕ ಅನಂತ ಕಾರ್ಕಳ ಪ್ರಾಸ್ತಾವಿಕಮಾತನಾಡಿದರು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ಪ್ರಕಾಶ ಮಂಗಳೂರ ನಿರೂಪಿಸಿದರು. ಸಹದೇವ ಗಣಾಚಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.