ಶಾರದಾ ಮಾತೆ ಬದುಕು ಪ್ರತಿಯೊಬ್ಬರಿಗೂ ಆದರ್ಶ
ಕನ್ನಡಪ್ರಭ ವಾರ್ತೆ, ಗದಗ, ಡಿ. 25
ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಮಸ್ತ ನಾರಿಕುಲಕ್ಕೆ ಮಾರ್ಗದರ್ಶಕರಾದ ಶಾರದಾ ಮಾತೆಯ ಬದುಕೇ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ ಎಂದು ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು. ಅವರು ಮಂಗಳವಾರ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜರುಗಿದ ಶಾರದಾದೇವಿಯವರ 161 ನೇ ಜನ್ಮದಿನೋತ್ಸವ ಹಾಗೂ ಜೀವಂತ ಶಾರದೆಯರ ಪೂಜಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ರಾಮಕೃಷ್ಣ ಪರಮಹಂಸರು ತೋರಿಸಿದ ಮಾರ್ಗದಲ್ಲಿ ಸಾಗಿ ಪ್ರತಿಯೊಬ್ಬರೂ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಮಾತ್ಮನನ್ನು ಕಾಣಬೇಕೆಂಬುದೇ ಶಾರದಾ ಮಾತೆಯ ಸಂದೇಶವಾಗಿದೆ. ಇಂದು ಭೌತಿಕವಾದವೆಂಬ ಬೌದ್ಧಿಕ ದಾರಿದ್ರ್ಯನಮ್ಮನ್ನಾವರಿಸಿದೆ. ವ್ಯಕ್ತಿಯಲ್ಲಿರುವ ನಿಜವಾದ ಪರಮಾತ್ಮನನ್ನು ಗುರುತಿಸಿ ದೀನ ದರಿದ್ರ ಬಡವರ ಸೇವೆ ಮಾಡುವುದೇ ನಿಜವಾದ ಆಧ್ಯಾತ್ಮಿಕ ಜೀವನವೆಂದು ಶಾರದಾ ಮಾತೆ ಹೇಳುತ್ತಾರೆ. ಅದರಂತೆ ಪ್ರತಿಯೊಬ್ಬರೂ ಸಮರ್ಪಣಾಭಾವದಿಂದ ಸ್ವಲ್ಪ ಸಮಯವಾದರೂ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ ನಂದಾ ಕುಲಕರ್ಣಿ ಮಾತನಾಡಿ, ಮಾತೆ ಶಾರದಾ ದೇವಿಯವರು ಅಂತಃಕರಣ ಮತ್ತು ಮಾತೃತ್ವದ ಸಂಕೇತವಾಗಿದ್ದು, ಸಮಸ್ತ ಮನುಕುಲ ಸೇವೆ ಮತ್ತು ಪ್ರೀತಿಯ ಮೌಲ್ಯಗಳಿಗಾಗಿ ಆದರ್ಶಪ್ರಾಯರಾಗಿದ್ದಾರೆ ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಜೆ.ಕೆ. ಜಮಾದಾರ, ಆರ್.ಕೆ. ಜಮಾದಾರ, ರಾಮಚಂದ್ರ ಕುಲಕರ್ಣಿ, ಎಸ್.ಎಚ್. ಶಿರಸಿ, ವಸಂತ ಸವದಿ, ಹಿರೇಗೌಡರ, ದತ್ತಪ್ರಸನ್ನ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು. ಎಸ್.ಎಚ್. ದೇಶಪ್ಪನವರ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

