ಸಾಮೂಹಿಕ ವಿವಾಹಕ್ಕೆ ಒತ್ತು ನೀಡಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 26
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸೌಹಾರ್ದ ಭಾವನೆ ಗಟ್ಟಿಗೊಳಿಸಿ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತವೆ. ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಿ ಸಾಮೂಹಿಕ ಮದುವೆಗಳಿಗೆ ಒತ್ತು ನೀಡುವುದು ಅವಶ್ಯ ಎಂದು ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಅವರು ಬುಧವಾರ ಸಮೀಪದ ಜಿಗೇರಿ ಗ್ರಾಮದ ಗುರುಸಿದ್ಧೇಶ್ವರ ಮಠದಲ್ಲಿ ಲಿಂ. ಗುರುಸಿದ್ಧೇಶ್ವರ ಶ್ರೀಗಳ 28ನೇ ಪುಣ್ಯಸ್ಮರಣೆ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೂತನ ವಧು-ವರರಿಗೆ ಆಶೀರ್ವದಿಸಿ ಮಾತನಾಡಿದರು. ಸಾಮೂಹಿಕ ವಿವಾಹ ಬಡ ಜನರನ್ನು ಸಾಲದಿಂದ ಮುಕ್ತಿ ಮಾಡಲಿವೆ. ಶ್ರೀಮಂತರು ತಾವು ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸತ್ಕಾರ್ಯಕ್ಕೆ ಬಳಸಬೇಕು. ಅಂದಾಗ ಮಾತ್ರ ಪುಣ್ಯ ಪ್ರಾಪ್ತವಾಗುತ್ತದೆ. ಇಂತಹ ಸಾಮಾಜಿಕ ಕಳಕಳಿಯಿಂದ ಶ್ರೀಮಠದಲ್ಲಿ ಕೈಗೊಂಡ ಮಂಗಲ ಕಾರ್ಯ ಶ್ಲಾಘನೀಯ ಎಂದರು.
ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು, ಅಭಿನವ ಗುರುಸಿದ್ಧೇಶ್ವರ ಶ್ರೀಗಳು, ಕಾಗಿನೆಲೆ ಪೀಠದ ಬಾದಿಮನಾಳ ಶಾಖಾ ಮಠದ ಶಿವಸಿದ್ಧೇಶ್ವರ ಶ್ರೀಗಳು, ಯಲಬುರ್ಗಾದ ಬಸವಲಿಂಗ ಶಿವಾಚಾರ್ಯರು, ಕಾಲಕಾಲೇಶ್ವರ ದೇಗುಲ ಅರ್ಚಕ ರಾಜೇಂದ್ರಭಟ್ ಪೂಜಾರ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 10 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ನ್ಯಾಯವಾದಿ ವಿ.ಆರ್. ಗುಡಿಸಾಗರ, ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಕುಂಟೋಜಿ ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾಳೋತ್ತರ, ಗ್ರಾಪಂ ಸದಸ್ಯ ಮುತ್ತಣ್ಣ ಕೊಪ್ಪಳ, ಬಸಣ್ಣ ಕರಡಿ, ಎಸ್.ಎಸ್. ಪಾಟೀಲ, ಶೇಖಪ್ಪ ಮಾಳೋತ್ತರ, ನೀಲಕಂಠ ಅಸೂಟಿ, ನಾಗರಾಜ ಗುರಿಕಾರ, ಮಲ್ಲಿಕಾರ್ಜುನ ಅಣ್ಣಿಗೇರಿ, ಕಳಕಪ್ಪ ಡೊಳ್ಳಿನ, ಸಕ್ರಪ್ಪ ಮ್ಯಾಗೇರಿ, ಮುದಿಯಪ್ಪ ಕರಡಿ, ಎಸ್.ಎಸ್. ಹೂಗಾರ, ಕುಮಾರ ರಾಠೋಡ, ಅರ್ಜುನ ರಾಠೋಡ, ಶರಣಪ್ಪ ಡೊಣ್ಣೆಗುಡ್ಡ, ಶಶಿಧರ ಹೊಟ್ಟಿನ, ಹನಮಂತಪ್ಪ ಹೊರಪೇಟಿ, ಮಲ್ಲಣ್ಣ ಅವಾರಿ, ಪರಶುರಾಮ ಮೇಟಿ, ರಾಮನಗೌಡ ಗೌಡ್ರ, ಅಂದಾನಗೌಡ ಗೌಡ್ರ, ಮಲ್ಲಿಕಾರ್ಜುನ ಅವಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

