ಸೈನಿಕ, ರೈತರನ್ನು ಗೌರವಿಸಿ: ಸೋಮಣ್ಣ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಡಿ. 26
ಸೈನಿಕ ಹಾಗೂ ರೈತರನ್ನು ಜಾತ್ಯತೀತವಾಗಿ, ಪಕ್ಷಾತೀತವಾಗಿ ಗೌರವಿಸುವುದು ಅಗತ್ಯ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಪಟ್ಟಣದ ವಿರಕ್ತಮಠದ ಸಭಾಭವನದಲ್ಲಿ ಕೃಷಿ ಪಂಪ್ಸೆಟ್ ಬಳಕೆದಾರರ ಸಂಘದ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸೈನಿಕ ವೈರಿಗಳಿಂದ ದೇಶ ಕಾಪಾಡುತ್ತಾನೆ. ರೈತ ದೇಶದ ಜನರಿಗೆ ಅನ್ನ ನೀಡುತ್ತಾನೆ. ಅವರ ನೋವುಗಳಿಗೆ ನಾವು ಸ್ಪಂದಿಸಬೇಕು. ಐದು ಜಿಲ್ಲೆಗಳ ರೈತರು ಈ ಬಾರಿ 90 ಸಾವಿರ ಹೆಕ್ಟೇರ್ನಲ್ಲಿ ಬಿತ್ತಿರುವ ಕನಕ ಬಿಟಿ ಹತ್ತಿ ಬೀಜ ಕಳಪೆಯಾಗಿ, ಅನ್ಯಾಯವಾಗಿದೆ. ಅವರಿಗೆ ಪರಿಹಾರ ಒದಗಿಸಬೇಕು. ಕಳಪೆ ಬೀಜ, ಗೊಬ್ಬರ, ಕ್ರಿಮಿನಾಶಕಗಳು ಮಾರುಕಟ್ಟೆಗೆ ಬಿಡುಗಡೆ ಆಗದಂತೆ ನಿಯಂತ್ರಣ ಕಾಯ್ದೆ ಜಾರಿಗೆ ತಂದು, ಕಠಿಣ ಕ್ರಮ ಜರುಗಿಸಬೇಕೆಂದರು.
ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂದು ಆಗ್ರಹಿಸಿದರು.
ರೈತ ಮುಖಂಡ ಎಫ್.ಸಿ. ಪಾಟೀಲ ಮಾತನಾಡಿ, ತಾಲೂಕಿನ ಮಡ್ಲಿ ಕ್ರಾಸ್ನಲ್ಲಿ ಗುಜರಾತ್ನ ಅಂಬುಜಾ ಫ್ಯಾಕ್ಟರಿ ಆರಂಭವಾಗಿದೆ. ಕಂಪನಿಗೆ ಭೂಮಿ ನೀಡಿದ ರೈತರು ಈಗ ಅದರಲ್ಲಿ ಮಣ್ಣು ಹೊರುವ ಕೆಲಸ ಮಾಡುತ್ತಿದ್ದಾರೆ. ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಕೊಡಬೇಕು. ಬೇರೆ ರಾಜ್ಯದಿಂದ ಕೆಲಸಗಾರರನ್ನು ತಂದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿರಕ್ತ ಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕೃಷಿ ಪಂಪ್ಸೆಟ್ ಬಳಕೆದಾರ ರೈತರ ಸಂಘದ ಅಧ್ಯಕ್ಷ ಡಾ ಬಿ.ಎಚ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಪಂಡಿತ ಪ್ರಶಸ್ತಿ ಪಡೆದ ಜಯದೇವ ಅಗಡಿ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯ ಸಿಎಸ್. ಪಾಟೀಲ, ತಾಪಂ ಉಪಾಧ್ಯಕ್ಷ ನಿಂಗಣ್ಣ ಹರಿಜನ, ಜಿಪಂ ಮಾಜಿ ಸದಸ್ಯರಾದ ಎನ್.ಸಿ. ಪಾಟೀಲ, ಗುಡ್ಡಪ್ಪ ಜಲದಿ, ಕೃಷಿಕ ಸಮಾಜದ ಅಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಾರುದ್ರಪ್ಪ ವಡವಟ್ಟಿ, ನಿಂಗಣ್ಣ ಜವಳಿ, ಎಫ್. ಗುರನಗೌಡ್ರ ಪಾಟೀಲ, ಚೋಟಪ್ಪನವರ ಗುರುಗಳು, ನಾಗಪ್ಪ ತಿಪ್ಪಕ್ಕನವರ, ನಾಗರಾಜ ಹಾವೇರಿ, ಸಿ.ಡಿ. ಪಾಟೀಲ, ಗದಗಯ್ಯ ಹಿರೇಮಠ, ರಾಯಣ್ಣವರ, ಬಸವರಾಜ ಬಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

