ಗದಗ

ಇಂದು ಕಾನೂನು ಅರಿವು ಕಾರ್ಯಕ್ರಮ

Published On :

ಗದಗ:  ಸ್ನಾತಕೋತ್ತರ ಸಮಾಜಕಾರ್ಯ ಕೇಂದ್ರ (ಎಂ.ಎಸ್.ಡಬ್ಲ್ಯೂ) ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಗದಗ ಇದರ ಆಶ್ರಯದಲ್ಲಿ ಡಿ. 28ರಂದು ತಾಲೂಕಿನ ಎಚ್.ಎಸ್. ವೆಂಕಟಾಪುರ ಗ್ರಾಮದ ಕೆ.ಎಚ್.ಪಾಟೀಲ ರಂಗಮಂಟಪದಲ್ಲಿ ಸ್ವಸಹಾಯ ಸಂಘಗಳ ಮಹತ್ವ ಮತ್ತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಹೊಡ ಗ್ರಾಪಂ ಸದಸ್ಯ ನೀಲಕಂಠಪ್ಪ ಹಕ್ಕರಕಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಯಲ್ಲಪ್ಪ ಕಾಟನ್ನವರ, ಬಿ.ಎನ್. ಸಂಶಿ, ಬೆಳಹೊಡ ಗ್ರಾಪಂ ಮಾಜಿ ಸದಸ್ಯ ಭೀಮಪ್ಪ ಬಸಾಪುರ, ಗಂಗಯ್ಯ ಹಿರೇಮಠ, ಸಿದ್ಧನಗೌಡ ಗೌಡರ, ಎಂ.ಆರ್. ಪಾಟೀಲ, ಜಿ.ಸಿ. ಕಿರೇಸೂರ, ಸಿದ್ದು ಪೂಜಾರ, ಶಿವಾನಂದ ಜಾಡರ, ಶೇಖರಯ್ಯ ಹೊಸಮಠ ಮುಂತಾದವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಜಗದೀಶ ಎಚ್.ಆರ್. ಉಪನ್ಯಾಸಕರಾಗಿ ಪಾಲ್ಗೊಳ್ಳುವರು ಎಂದು ಶಿಬಿರಾಧ್ಯಕ್ಷ ಸಿ.ಎಸ್. ಬೊಮ್ಮನಹಳ್ಳಿ, ಸಂಯೋಜಕ ಡಾ. ಅಂಬರೀಶ ಕಂಪ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಎಸ್‌ಸಿ ಮೋರ್ಚಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ
ನೀರು ಪೂರೈಕೆ ಮಾಹಿತಿ
ಗದಗ: ನಗರದ ತಿಳಕ್ ಪಾರ್ಕ್, ಜುಮ್ಮಾ ಮಸೀದಿ, ಕರುಗಲ್ ಲೈನ್, ಶಿವಳ್ಳಿ ಲೈನ್, ಇಂಗಳಳ್ಳಿ ಲೈನ್, ಹನುಮಾನ ಗರಡಿ, ಕರೆದೇವರ ಗುಡಿ 1, 2, ಲೈನ್, ಗಣಪತಿ ಗುಡಿ ಲೈನ್, ಹಿಡ್ಕಿಮಠ ಲೈನ್, ಜವಳಿ ಬಜಾರ್ ಲೈನ್, ಮುನ್ಸಿ ಪ್ರೆಸ್ಸ್ 1, 2, ಗುಂಜನ ಲೈನ್, ಹಾಳದಿಬ್ಬ ಓಣಿ, ಮಂದಾಳಿ ಲೈನ್, ಬಳ್ಳಾರಿ ಲೈನ್, ಹಾಳದಿಬ್ಬಾ ಹಳೇ ಲೈನ್, ಮದ್ಲಿ ಓಣಿ 1, 2, ಖಾಗದಗೇರಿ ಓಣಿ, ಕೋಟಿ ಲೈನ್, ಬಳೆಗಾರ ಲೈನ್, ರಾಚೋಟೇಶ್ವರ ನಗರದ 3 ಭಾಗಗಳು, ಚೌಡಿ ಲೈನ್, ತಾಜ ನಗರ, ಹನುಮಾನ ನಗರ, ವಕೀಲ ಮನೆಯವರ ಲೈನ್, ಮೇರವಾಡೆ ಲೈನ್, ಸರ್ವೋದಯ ಕಾಲೋನಿ ಲೈನ್, ಮಾನ್ವಿ ಲೈನ್, ಮಲ್ಲಾಡ ಲೈನ್, ಹುಡೆದ ಲೈನ್, ಗುಳಗುಂದಿ ಲೈನ್, ಚಿಮ್ಮಿ ಲೈನ್, ಅಕ್ಕಸಾಲಿಗ ಲೈನ್, ಬಾಣದ ಲೈನ್, ತುಪ್ಪದ ಲೈನ್, ಅಕ್ಕಿ ಲೈನ್, ಮುನ್ನವಳ್ಳಿ ಲೈನ್, ಗಾಂದಿ ಮಾರ್ಕೆಟ್, ಗೌರಿ ಶಂಕರ ಲಾಡ್ಜ್ ರೋಡ್, ಅಣ್ಣಿಗೇರಿ ಚಂದ್ರು ಲೈನ್, ಜವಳಗಲ್ಲಿ ಈ ಭಾಗಗಳಲ್ಲಿ ಶನಿವಾರ ತುಂಗಭದ್ರಾ ನದಿನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ನಾಳೆ ಪಂಚಮಸಾಲಿ ಸಮಾಜದ ಸಭೆ
ಗದಗ: ಬೆಟಗೇರಿಯ ಶರಣ ಬಸವೇಶ್ವರ ನಗರದ ಸಿ.ಎಂ. ಮಾರನಬಸರಿ ಮಳಿಗೆಯಲ್ಲಿರುವ ಜ್ಞಾನ ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪಂಚಮಸಾಲಿ ಸಮಾಜದ ಮಾಸಿಕ ಸಭೆಯ ಪೂರ್ವಭಾವಿ ಸಭೆಯನ್ನು ಡಿ. 29ರ ಸಂಜೆ 5.30ಕ್ಕೆ ಕರೆಯಲಾಗಿದೆ. ಎಸ್.ಆರ್. ಜಲ್ಲಿಯವರ ಅಧ್ಯಕ್ಷತೆ ವಹಿಸಲಿದ್ದು, ಈಟಿ, ಬಿ.ಎಸ್. ಬಾಣದ, ರಾಜಪ್ಪಗೌಡ ಗೌಡಪ್ಪಗೌಡ್ರ, ಈಶಪ್ಪ ಬಳ್ಳಾರಿ, ಐ.ಕೆ. ಮಣಕವಾಡ, ಬಸವಣ್ಣೆಪ್ಪ ಮಾವಿನಕಾಯಿ, ಮನೋಹರ ಹಳ್ಳಿಕೇರಿ, ಸಿ.ಎಂ. ಮಾರನಬಸರಿ, ಪಲ್ಲೇದ, ತಮ್ಮನಗೌಡ್ರ, ಶಿವಯೋಗಿ ಪಾಟೀಲ, ಕಲ್ಯಾಣಪ್ಪ ಹೋಳಿ ಮುಂತಾದವರು ಉಪಸ್ಥಿತರಿರುವರು. ಕಾರಣ ಸಮಾಜ ಬಾಂಧವರೆಲ್ಲರೂ ಹಾಜರಿರಲು ಕಾರ್ಯದರ್ಶಿ ಮಹೇಶ ಕರಬಿಷ್ಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ನುಡಿನಮನ
ಗಜೇಂದ್ರಗಡ:  ಸ್ಥಳೀಯ ಪುರ್ತಗೇರಿ ಕ್ರಾಸ್ ಬಳಿಯ ಅನ್ನದಾನೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಸಾಪ ವತಿಯಿಂದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಭಾವಗೀತೆ ಹಾಗೂ ಅವರ ಬದುಕು-ಬರಹಗಳ ಬಗ್ಗೆ ನುಡಿನಮನ ಕಾರ್ಯಕ್ರಮ ಡಿ. 28ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕರಾಗಿ ಎಂ.ಎಸ್. ಮಕಾನದಾರ, ಅತಿಥಿಗಳಾಗಿ ಎಸ್‌ಎಐ ಕಾಲೇಜ ಚೇರ್‌ಮನ್ ಸುಹಾಸ ಪಟ್ಟೇದ, ಎಸ್‌ಎಪಿಯು ಕಾಲೇಜ್ ಚೇರ್‌ಮನ್ ಮಹಾಂತೇಶ ಸೋಮನಕಟ್ಟಿ, ಪುರಸಭೆ ಸದಸ್ಯ ಶರಣಪ್ಪ ರೇವಡಿ, ಪ್ರಭು ಚವಡಿ, ಎಂ.ಎಸ್. ಹಡಪದ, ರೋಣ ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ, ರಾಜು ಕಮ್ಮಾರ, ವಿ.ಬಿ. ಸೋಮನಕಟ್ಟಿಮಠ, ಅಮರೇಶ ಗಾಣಿಗೇರ, ಬಸವರಾಜ ಚಿನಿವಾಲರ, ಹುಚ್ಚಪ್ಪ ಹಾವೇರಿ, ಆರ್.ಕೆ. ಬಾಗವಾನ್, ನಾಗರಾಜ ಬುಟ್ಟಾ, ಎಸ್.ಕೆ. ಪೂಜಾರ, ಗುರುರಾಜ, ಶರಣಪ್ಪ ಬೇವಿನಕಟ್ಟಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಇಂದು ಗ್ರಾಮಸಭೆ
ಮುಂಡರಗಿ:  ಸರ್ಕಾರದ ಆದೇಶದಂತೆ ಮುಂಡರಗಿ ಹೋಬಳಿಯ ರಾಮೇನಹಳ್ಳಿ ಗ್ರಾಮವನ್ನು ಮರುಭೂಮಾಪನ ಪ್ರಾಯೋಗಿಕ ಯೋಜನೆಯಡಿಯಲ್ಲಿ ಜಾರಿಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಡಿ. 28ರಂದು ಬೆಳಗ್ಗೆ 11 ಗಂಟೆಗೆ ರಾಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸಭೆಯನ್ನು ಕರೆಯಲಾಗಿದೆ. ಗ್ರಾಮ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಪ್ರಸ್ತುತ ಉಪಯೋಗದಲ್ಲಿರುವ ಭೂಮಾಪನಾ ನಕ್ಷೆಗಳು ಸುಮಾರು 150 ವರ್ಷಗಳಷ್ಟು ಹಳೆಯದಾಗಿದ್ದು, ಅವುಗಳ ಆಧಾರದ ಮೇಲೆ ಭೂಮಿಯ ಮಾರಾಟ, ವಿಭಾಗ, ಪೋಡಿ ಇತ್ಯರ್ಥ, ಗಡಿ ಸಮಸ್ಯೆಗಳ ಇತ್ಯರ್ಥ ಮಾಡಲಾಗುತ್ತಿದೆ. ಚಾಲ್ತಿಯಲ್ಲಿರುವ ಹಳೆ ದಾಖಲೆಗಳು ನಿರಂತರ ಉಪಯೋಗದಿಂದ ಶಿಥಿಲವಾಗಿವೆ. ಜಮೀನಿನಲ್ಲಿ ವಿಪರೀತ ವಿಭಾಗ ಮತ್ತು ಹಿಸ್ಸಾಗಳಾಗಿವೆ. ಕೃಷಿ ಮತ್ತು ಕೃಷಿಯೇತರ ಉದ್ದೇಶಕ್ಕಾಗಿ ಜಮೀನನ್ನು ಸಮತಟ್ಟುಗೊಳಿಸುವುದು, ಕಂದಾಯ ಭೂಮಿಗಳಲ್ಲಿ ಕಾಲಕಾಲಕ್ಕೆ ಜರುಗುವ ಬದಲಾವಣೆಗಳಿಂದ ಸರ್ವ ಗುರುತುಗಳು, ಕಲ್ಲುಗಳು ನಾಶವಾಗಿವೆ. ಆದ್ದರಿಂದ ಅಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಬಳಸಿಕೊಂಡು ಜಮೀನಿನ ಅಳತೆ ಮಾಡಿ, ಹೊಸ ನಕ್ಷೆ, ಭೂದಾಖಲೆಗಳನ್ನು ತಯಾರಿಸುವುದು ಇದರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ 4 ಜಿಲ್ಲೆಗಳನ್ನು ಆಯ್ಕೆಮಾಡಿದ್ದು, ಅದರಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ರಾಮೇನಹಳ್ಳಿ ಗ್ರಾಮವನ್ನು ಆಯ್ಕೆಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಪ್ರತಿಭಟನೆ
ಗದಗ:  ಡಾ. ಬಿ.ಆರ್. ಅಂಬೇಡ್ಕರ್ ಕೊಳಚೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಗದಗ ವತಿಯಿಂದ ಗದಗ-ಬೆಟಗೇರಿ ನಗರದ ಮೂಲ ಸೌಕರ್ಯಗಳಿಂದ ವಂಚಿತ ಕೊಳಚೆ ಪ್ರದೇಶಗಳ ಜನತೆಯ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 28ರ ಬೆಳಗ್ಗೆ 11ಕ್ಕೆ ನಗರದ ಕಿತ್ತೂರು ಚನ್ನಮ್ಮ ಪ್ರತಿಮೆ ಹತ್ತಿರವಿರುವ ಸಿಕ್ಕಲಗಾರ ಕಾಲೋನಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗದಗ-ಬೆಟಗೇರಿ ನಗರಸಭೆಯ ಪೌರಾಯಕ್ತರಿಗೆ ಮನವಿ ಸಲ್ಲಿಸಲಾಗುವುದು. ಕಾರಣ ಸರ್ವರೂ ಪಾಲ್ಗೊಳ್ಳುವಂತೆ ಅಧ್ಯಕ್ಷ ಶಿವಾಜಿ ಪವಾರ, ಉಪಾಧ್ಯಕ್ಷ ಧರ್ಮಣ್ಣ ಹೊಸಮನಿ, ಗೌರವಾಧ್ಯಕ್ಷ ದುರ್ಗಪ್ಪ ನವಲಗುಂದ ಮತ್ತಿತರರು ಕೋರಿದ್ದಾರೆ.
ನಾಳೆ ವಿದ್ಯುತ್ ವ್ಯತ್ಯಯ
ಗದಗ:  ಜಿಲ್ಲೆಯ ಮುಂಡರಗಿ, ಡಂಬಳ, ಸಿಂಗಟಾಲೂರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಡಿ. 29ರಂದು ತುರ್ತು ನಿರ್ವಹಣೆ ಕೆಲಸ ಕೈಗೆತ್ತಿಕೊಳ್ಳುತ್ತಿದ್ದು, ಅದಕ್ಕಾಗಿ ಡಿ. 29ರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದ ಎಲ್ಲಾ ಗ್ರಾಮ ಹಾಗೂ ಪಟ್ಟಣಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಇಲಾಖೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.