ಗದಗ

ಬಡ ಅಟೋರಿಕ್ಷಾ ಚಾಲಕರಿಗೆ ನಿವೇಶನ ನೀಡಿ

Published On :

ಗದಗ: ಗದಗ-ಬೆಟಗೇರಿಯಲ್ಲಿನ ಬಡ ಅಟೋ ರಿಕ್ಷಾಚಾಲಕರಿಗೆ ನಿವೇಶನ, ವಸತಿ ನಿರ್ಮಿಸಿಕೊಡುವಂತೆ ಆಗ್ರಹಿಸಿ ಈಚೆಗೆ ಜೈ ಭೀಮ್ ಅಟೋರಿಕ್ಷಾ ಮಾಲೀಕರ-ಚಾಲಕರ ಸಂಘದ ವತಿಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಇಂದಿನ ದುಬಾರಿ ಜೀವನದಲ್ಲಿ ಅಟೋ ಚಾಲನೆಯಿಂದ ಬರುವ ಆದಾಯ ಯಾತಕ್ಕೂ ಸಾಲದು. ಹೀಗಿದ್ದಾಗ ಎಷ್ಟೋ ಜನ ತನ್ನದೆಂಬ ಸ್ವಂತ ಮನೆಯಿಲ್ಲದೆ ಭಾಡಿಗೆ ಮುಂತಾದ ಮನೆಯಲ್ಲಿ ಜೀವಿಸುತ್ತಿದ್ದು, ದುಡಿದ ದುಡಿಮೆ ಭಾಡಿಗೆಗೆ ಖರ್ಚಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬದ ನಿರ್ವಹಣೆಗೆ ಕಷ್ಟಪಡುವ ಅಟೋರಿಕ್ಷಾ ಚಾಲಕರಿಗೆ ನಿವೇಶನ ನೀಡಿದಲ್ಲಿ ಅವರೂ ಉತ್ತಮ ಬದುಕು ಸಾಗಿಸುತ್ತಾರೆ. ಈ ಕುರಿತು ಸಚಿವರು ಸೂಕ್ತ ಕ್ರಮ ಕೈಗೊಂಡು ಅಟೋರಿಕ್ಷಾ ಚಾಲಕರಿಗೆ ವಸತಿ, ನಿವೇಶನ ನೀಡುವಂತೆ ಮನವಿಯಲ್ಲಿ ತಿಳಿಸಿದೆ. ಸಂಘದ ಅಧ್ಯಕ್ಷ ಪರಶುರಾಮ ಪೂಜಾರ, ಎಸ್.ಎನ್. ಬಳ್ಳಾರಿ, ವಿನಾಯಕ ಬಳ್ಳಾರಿ, ಬಸವರಾಜ ಕಡೇಮನಿ, ಸತೀಶ ಹೂಲಿ, ಯುವರಾಜ ಬಳ್ಳಾರಿ, ಲಕ್ಷ್ಮಣ ಕಟ್ಟಿಮನಿ, ಮುನ್ನಾ ಹಾನಗಲ್ಲ, ಬುಡ್ಡಾ ಕರ್ನಾಚಿ, ಬಸವರಾಜ ಮನಗುಂಡಿ, ಮಂಜು ಪೂಜಾರ, ಪ್ರತಾಪ ಹೊಸಮನಿ, ಬಸವರಾಜ ಚಲವಾದಿ, ಸುರೇಶ ಸಿಂಗಾಡಿ, ಅಕ್ಬರಸಾಬ್ ಕುಕನೂರ, ಸಂಗಪ್ಪ ಹೊಂಬಳ, ವಿನೋದ ಜಿಗಳೂರು, ರಬ್ಬಾನಿ ಶಿರಹಟ್ಟಿ, ಶೇಖಪ್ಪ ಅರಳಕಟ್ಟಿಮಠ, ಪ್ರಕಾಶ ನಾಮದೇವ, ದ್ಯಾಮಣ್ಣ ಗೌಡರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.