ಗದಗ

ಇಂದಿನ ವಿದ್ಯಾರ್ಥಿಗಳೇ ಭಾಗ್ಯವಂತರು

Published On :

ಗಜೇಂದ್ರಗಡ: ವಿದ್ಯಾರ್ಜನೆಗೆ ಬೇಕಾಗುವ ಸಕಲ ಸೌಕರ್ಯ ಪಡೆದಿರುವ ಈಗಿನ ವಿದ್ಯಾರ್ಥಿಗಳೇ ಭಾಗ್ಯವಂತರು. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿ ಜತೆಗೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಸರ್ಕಾರ ಅವಿರತ ಶ್ರಮಿಸುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ಸಂಜೆ ಸ್ಥಳೀಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಡಮಾಡಿದ ಉಚಿತ ಸೈಕಲ್ ವಿತರಿಸಿ ಮಾತನಾಡಿದರು.
 ರೋಣ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ಕೊಡಲಾಗಿದೆ. ಶಾಲೆಗೆ ಬೇಕಾದ ಎಲ್ಲ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ಅಭಿಯಾನ ಯೋಜನೆಯ ರು.  37 ಕೋಟಿ ಅನುದಾನ ವೆಚ್ಚದಿಂದ ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. 13 ಕಿ.ಮೀಗೆ ಒಂದು ಪಿಯುಸಿ ಕಾಲೇಜು ತೆರೆಯಲು ಸರ್ಕಾರ ಮುಂದಾಗಿದೆ. ಪ್ರಾಥಮಿಕ ಶಿಕ್ಷಣ ಜತೆಗೆ ಪ್ರೌಢ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಶೈಕ್ಷಣಿಕ ಪ್ರಗತಿ ಜತೆ ಅನಕ್ಷರಸ್ಥ ರಹಿತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಹೊಂದಲಾಗಿದೆ. ಮಕ್ಕಳು ಮನೆ ಬೆಳಗುವ ದೀಪವಾಗಬೇಕು. ಕಿತ್ತು ತಿನ್ನುವ ಬಡತನ ಮಕ್ಕಳ ಬಾಳಿಗೆ ಮಾರಕವಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ನೀಡಿದ ಸೌಲಭ್ಯ ಪಡೆದು ಮುಗ್ದ ಮನಸ್ಸಿನ ಮಕ್ಕಳ ಮನದಲ್ಲಿ ಅಕ್ಷರದ ದೀಪ ಹಚ್ಚುವ ಕಾರ್ಯ ಸರ್ಕಾರ ನಡೆಸಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸೂಂಡಿ ಮಾತನಾಡಿದರು. ಮರ್ತುಜಾ ಡಾಲಾಯತ್, ಬಸವರಾಜ ಚೆನ್ನಿ, ವಿ.ಆರ್. ಗುಡಿಸಾಗರ, ಚಂಬಣ್ಣ ಚವಡಿ, ಶಿವರಾಜ ಘೋರ್ಪಡೆ, ಡಾ. ಪಿ.ಬಿ. ರಾಜಿ, ಸುಭಾನಸಾಬ್ ಆರಗಿದ್ದಿ, ದಾದು ಹಣಗಿ, ಶ್ರೀಧರ ಗಂಜಿಗೌಡ್ರ, ಶಾರದಾ ರಾಠೋಡ, ಮಕ್ತುಂಬಿ ಹಣಗಿ, ತಾರಾಸಿಂಗ ರಾಠೋಡ್, ಎಚ್.ಎಫ್. ಜಾಲಿಹಾಳ, ವಿ.ಬಿ. ಸೋಮನಕಟ್ಟಿಮಠ, ಶಶಿಧರ ವಕ್ಕಲರ, ಬಸವರಾಜ ಹೂಗಾರ, ಮುದಿಯಪ್ಪ ಕರಡಿ, ರವಿ ಗಡೇದವರ, ಬಸಯ್ಯ ಕಲ್ಮಂಗಿಮಠ, ಕೊಟ್ರೇಶ ಚಿಲಕಾ, ಪಿ.ಟಿ. ದಾನಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.