ಗದಗ

ಅಹಂ ಬಿಟ್ಟರೆ ಭಗವಂತನ ಸಾಕ್ಷಾತ್ಕಾರ

Published On :

ಗಜೇಂದ್ರಗಡ: ದೇವರಿಗೆ ಎಲ್ಲರೂ ಸಮಾನರು. ಅಹಂ ಬಿಟ್ಟರೆ ಭಗವಂತನ ದಯೆ ಜತೆ ಸಾಕ್ಷಾತ್ಕಾರ ಪ್ರಾಪ್ತಿಯಾಗಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ದಾಸ ಸಾಹಿತ್ಯ ಪ್ರೊಜೆಕ್ಟನ ನಿವೃತ್ತ ಅಧಿಕಾರಿ ಕೆ.ಅಪ್ಪಣ್ಣಾಚಾರ್ಯ ಹೇಳಿದರು. ಸ್ಥಳೀಯ ಶ್ರೀ ಗುರುಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಲೋಕ ಕಲ್ಯಾಣಾರ್ಥ ಮೂರು ದಿನ ನಡೆಯುವ ಸುಂದರ ಕಾಂಡ, ಶ್ರೀನಿವಾಸ ಕಲ್ಯಾಣದ ಪ್ರವಚನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮನದಲ್ಲಿ ಭಗವಂತನನ್ನು ಸ್ಮರಿಸಿದರೆ ಸಾಕ್ಷಾತ್ಕಾರ ಆಗಲಿದೆ. ಭಗವಂತನನ್ನು ಭಕ್ತಿಯಿಂದ ಕಟ್ಟಿ ಹಾಕಬೇಕು. ಇದರಿಂದ ದೇವರ ಅನುಗ್ರಹಕ್ಕೆ ಭಕ್ತರು ಪಾತ್ರರಾಗುತ್ತಾರೆ. ಭಕ್ತರ ಇಷ್ಟಾರ್ಥ ಪೂರೈಸುವ ಭಾರತೀಯ ಸಂಸ್ಕೃತಿಗೆ ವಿಶ್ವದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗುವಲ್ಲಿ ಎಲ್ಲರ ಕರ್ತವ್ಯ ಮುಖ್ಯವಾಗಿದೆ ಎಂದರು.
 ವಿದ್ವಾನ್ ಸದಾನಂದ ಶಾಸ್ತ್ರಿಗಳು ಮಾತನಾಡಿ, ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಸತ್ಕಾರ್ಯಕ್ಕೆ ಬೆಲೆ ಇದೆ ಎಂಬುದು ಅರಿತುಕೊಳ್ಳಬೇಕು. ನೋಡಲು ಸುಂದರನಾದ ಮನುಜನ ಮನದಲ್ಲಿನ ರಾಕ್ಷಸಿ ಗುಣಕ್ಕೆ ತಿಲಾಂಜಲಿ ನೀಡಿದಾಗ ಆಂತರಿಕ ಸೌಂದರ್ಯ ಸದಾ ಉಳಿಯಲು ಸಾಧ್ಯ ಎಂದರು.
ಭೀಷ್ಮಾಸಾ ಬಾಕಳೆ ಮಾತನಾಡಿದರು. ಕೃಷ್ಣಾಚಾರ್ಯ ಇಟಗಿ, ವಿಶ್ವನಾಥಸಾ ಮೇಘರಾಜ, ಬಾಲಚಂದ್ರಸಾ ರಾಯಬಾಗಿ, ಮಾರುತೆಪ್ಪ ಕಲ್ಲೊಡ್ಡರ, ಹನುಮಂತ ಭಟ್ ತಾಸೀನ, ಮೋಹನ ಜೀರೆ, ರಾಮರಾವ್ ಗಾಡ್ಗೂಳಿ, ವೆಂಕಟೇಶ ಶೆಟ್ರು, ರಾಘವೇಂದ್ರ ಅಂಬೋರೆ, ರಾಜು ಹೊರಪೇಟೆ, ಶಂಕರ ಉರವಕೊಂಡ, ಹನುಮಂತ ಕೆಂಚಿ, ಶಾಮಣ್ಣಾ ವನ್ನಾಲ, ಆನಂದ ರಂಗ್ರೇಜಿ, ಕುಮಾರ ಯಂಕಚ್ಚಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.