ಏಡ್ಸ್: ಯುವಕರು ಜಾಗ್ರತರಾಗಬೇಕು
ಕನ್ನಡಪ್ರಭ ವಾರ್ತೆ, ಗದಗ, ಡಿ. 29
ಇಂದಿನ ದಿನಮಾನಗಳಲ್ಲಿ ಏಡ್ಸ್ ಮಹಾಮಾರಿ ರೋಗವಾಗಿ ಪರಿಣಮಿಸುತ್ತಿದ್ದು, ಈ ಕುರಿತು ಯುವಪೀಳಿಗೆ ಜಾಗೃತಿ ಹೊಂದಿ ಏಡ್ಸ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಬಿ. ಚನ್ನಶೆಟ್ಟಿಹೇಳಿದರು.
ಅವರು ಭಾನುವಾರ ಬೆಟಗೇರಿಯ ಎಚ್.ಸಿ.ಇ.ಎಸ್. ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ರಕ್ಷಣಾ ಒಕ್ಕೂಟ, ನವಚೇತನ ಪಾಸಿಟಿವ್ ನೆಟ್ ವರ್ಕ್ ಸಂಸ್ಥೆ, ಸೃಷ್ಟಿ ಸಂಕುಲ ಸಂಸ್ಥೆ, ಎನ್‌ಸಿಸಿ ಘಟಕ, ಎನ್ನೆಸ್ಸೆಸ್ ಘಟಕ, ಮದರ ಥೆರೆಸಾ ಹಾಗೂ ವೀರಜಿ ಪಾಲನ್ ಗಾಲಾ ನರ್ಸಿಂಗ್ ಕಾಲೇಜು, ಸುವರ್ಣ ಲೇಡಿಸ್ ಕ್ಲಬ್, ಸ್ವಯಂ ಉದ್ಯೋಗ ತರಬೇತಿ ಘಟಕ ಮತ್ತು ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ, ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜು, ಎಚ್.ಸಿ.ಇ.ಎಸ್. ಪಪೂ ಕಾಲೇಜು ಬೆಟಗೇರಿ ಸಂಯುಕ್ತವಾಗಿ ಗದಗ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜನಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಇಂದು ಏಡ್ಸ್ ರೋಗವು ಮಹಾಮಾರಿಯಾಗಿ ಬೆಳೆಯುತ್ತಿದೆ. ಒಬ್ಬ ವ್ಯಕ್ತಿಗೆ ಎಚ್.ಐ.ವಿ. ವೈರಸ್ ತಗುಲಿದಲ್ಲಿ ಅಂತಹ ವ್ಯಕ್ತಿಯಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕೊಲ್ಲುತ್ತಾ ಸಾಗುತ್ತದೆ. ಮನುಷ್ಯನಲ್ಲಿಯ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋದಂತೆ ಅಂತಹ ವ್ಯಕ್ತಿಗಳಲ್ಲಿ ಹಲವು ಮಾರಕ ರೋಗಗಳ ಲಕ್ಷಣ ಕಂಡುಬರಲಿವೆ. ಎಚ್‌ಐವಿ ಅಂತಿಮ ಕ್ಷಣವನ್ನು ಏಡ್ಸ್ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ವಿಫಲಗೊಂಡು ವ್ಯಕ್ತಿಯು ಹಲವು ಮಾರಕ ರೋಗಗಳಿಗೆ ತುತ್ತಾಗಿ ಮೃತನಾಗುವ ಸಂಭವವಿದೆ.
ಎಚ್‌ಐವಿ ಸೊಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷಿಸದ ರಕ್ತವನ್ನು ಪಡೆದುಕೊಳ್ಳುವುದರಿಂದ, ಸಂಸ್ಕರಿಸದ ಸೂಜಿ ಅಥವಾ ಸಿರಿಂಜ್ ಬಳಸುವುದರಿಂದ ಏಡ್ಸ್ ಹರಡಬಹುದಾಗಿದ್ದು, ಈ ಕುರಿತು ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಿ ರೋಗ ನಿಯಂತ್ರಣಕ್ಕೆ ಆದ್ಯತೆ ನೀಡಬೇಕಿದೆ. ಇಂದು ಹೆಚ್ಚಾಗಿ ಯುವಜನಾಂಗದವರು ಈ ರೋಗಕ್ಕೆ ತುತ್ತಾಗುತ್ತಿರುವುದು ನೋವಿನ ಸಂಗತಿ, ಯುವಕರು ಈ ಕುರಿತು ಜಾಗೃತಿ ಹೊಂದಿ ಇತರರಿಗೆ ಮಾರ್ಗದರ್ಶನ ಮಾಡಿದಲ್ಲಿ ಈ ರೋಗವನ್ನು ದೇಶದಿಂದ ಸಂಪೂರ್ಣವಾಗಿ ಹೊಡೆದೋಡಿಸುವಲ್ಲಿ ಸಹಕಾರಿಯಾಗುವುದು ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕಾಲೇಜಿನ ಅಧ್ಯಕ್ಷ ಜೆ.ಕೆ. ಜಮಾದಾರ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಕೆಳಗಡೆ, ಜಿಲ್ಲಾ ರೆಡ್‌ಕ್ರಾಸ್‌ನ ಗೌರವ ಕಾರ್ಯದರ್ಶಿ ಡಾ. ಆರ್.ಎನ್. ಗೋಡಬೋಲೆ, ಜಿ.ಆರ್. ತೊರವಿ, ಆರ್.ಎಸ್. ತುಕ್ಕಾ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜೈಭೀಮ ಕಲಾತಂಡದಿಂದ ಏಡ್ಸ್ ಜಾಗೃತಿ ಕುರಿತು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಲಕ್ಷ್ಮೀ ಕಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಆರ್.ವಿ. ಕುಪ್ಪಸ್ತ ನಿರೂಪಿಸಿದರು. ಬಸವರಾಜ ಲಾಲಗಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

