ನರೇಗಲ್ಲ ಅಭಿವೃದ್ಧಿ: ರಾಜಕೀಯ ಬೇಡ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಡಿ. 29
ಪಟ್ಟಣದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಂದಾಗಿ ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡೋಣ. ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ಥಳೀಯ ನರೇಗಲ್ಲ ಪಪಂನ ಸಭಾಭವನದಲ್ಲಿ ಶಾಸಕರ ಸಮ್ಮುಖದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬಂದ ವಿಷಯಗಳ ಮೇಲಿನ ಚರ್ಚೆಯಲ್ಲಿ ಸ್ಥಳೀಯ ಬಸ್ ನಿಲ್ದಾಣದ ತಡೆಗೋಡೆಗೆ ಹತ್ತಿಕೊಂಡು ಇಟ್ಟ 16 ಡಬ್ಬಾ ಅಂಗಡಿಗಳನ್ನು ತೆಗೆಸುವುದು ಹಾಗೂ ಈಗಾಗಲೇ ಕೆರೆಯ ದಂಡೆಯ ಹತ್ತಿರ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಅಂಗಡಿಗಳನ್ನು ತೆರವು ಮಾಡಿಸುವುದನ್ನು ಸಭೆಯು ಸರ್ವಾನುಮತದಿಂದ ಒಪ್ಪಿಕೊಂಡಿತು. ನಗರ ಹಾಗೂ ಮಜರೆ ಹಳ್ಳಿಗಳಲ್ಲಿರುವ 17 ಶೌಚಾಲಯಗಳು ತೆರೆದೆ ಇಲ್ಲ ಹಾಗೂ ಅಲ್ಲಿರುವ ಸಿಬ್ಬಂದಿಗೆ 9 ತಿಂಗಳಿನಿಂದ ವೇತನವನ್ನೇ ನೀಡಿಲ್ಲ.
ಅವುಗಳ ಬಗ್ಗೆ ವಿವರವಾದ ಮಾಹಿತಿ ಹಾಗೂ ಪರಿಹಾರದ ಬಗ್ಗೆ ತಿಳಿಸಿ ಎಂದು ಪ್ರಶ್ನೆ ಕೇಳಿದ ಯಲ್ಲಪ್ಪ ಮಣ್ಣಿದೊಡ್ಡರ ಹಾಗೂ ಅಂದಪ್ಪ ಮಡಿವಾಳರ ಅವರಿಗೆ ಮುಖ್ಯಾಧಿಕಾರಿ ಕಟಗಿ ಉತ್ತರಿಸಿ ಹಿಂದಿನ ದಿನಗಳಲ್ಲಿ ಶೌಚಾಲಯದ ಸಿಬ್ಬಂದಿಗೆ ವೇತನ ಸರಿಯಾಗಿ ಆಗಿಲ್ಲ. ಆದ್ದರಿಂದ ಅಂತಹ ಶೌಚಾಲಯಗಳು ಬಂದಾಗಿದ್ದವು. ಈಗಾಗಲೇ 2 ಶೌಚಾಲಯಗಳನ್ನು ಕಾರ್ಯಾರಂಭ ಮಾಡಿಸಲಾಗಿದೆ. ಇನ್ನೂ ಹಂತ ಹಂತವಾಗಿ ಎಲ್ಲ ಶೌಚಾಲಯಗಳನ್ನು ಆರಂಭಿಸಲಾಗುವುದು ಎಂದು ಸಭೆಗೆ ತಿಳಿಸಿದರು. ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ವಿಷಯಗಳು ಚರ್ಚೆಗೆ ಬಂದವು.
ಸಭೆಯಲ್ಲಿ ಅಧ್ಯಕ್ಷೆ ಬಸವ್ವ ಲಕ್ಕನಗೌಡ್ರ, ಉಪಾಧ್ಯಕ್ಷೆ ಅನ್ನಪೂರ್ಣಾ ಗಿಂಡಿ, ಸದಸ್ಯರಾದ ರಮೇಶ ಕಳಕೊಣ್ಣವರ, ಸುನೀಲ ಬಸವರಡ್ಡೇರ, ಶಶಿಧರ ಸಂಕನಗೌಡ, ಯಲ್ಲಪ್ಪ ಹಾಜರಿದ್ದರು. ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಹಾಗೂ ಅಭಿಯಂತರ ಕಾಟೇವಾಲ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

