ಭೂ ದಾಖಲೆಗಳ ಸಂರಕ್ಷಣೆಗೆ ಯೋಜನೆ: ನಾಗರಾಳ
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 29
ಸರ್ಕಾರ ನೂರಾರು ವರ್ಷಗಳ ಹಳೆಯ ಜಮೀನು ದಾಖಲೆಗಳು, ನಕ್ಷೆ ನಾಶವಾಗುವ ಸ್ಥಿತಿಯಲ್ಲಿವೆ. ಹಾಗೆ ಜಮೀನುಗಳ ಸ್ಥಿತಿಯಲ್ಲಿ ಬದಲಾವಣೆ ಕಂಡಿವೆ. ಅವುಗಳ ದಾಖಲೆಗಳನ್ನು ಆಧುನಿಕ ತಂತ್ರಜ್ಞಾನ ಮೂಲಕ ಸರ್ವೆ ಮಾಡಿ ಸುಸ್ಥಿತಿಯಲ್ಲಿಡಲು ಯೋಜನೆ ಜಾರಿಯಾಗಿದೆ ಎಂದು ಗದಗ ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕ ಎಸ್.ಎಚ್. ನಾಗರಾಳ ಹೇಳಿದರು.
ಅವರು ಶನಿವಾರ ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದಲ್ಲಿ ಮರು ಭೂಮಾಪನ ಪ್ರಾಯೋಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬ್ರಿಟಿಷರ ಕಾಲದಲ್ಲಿರುವ ದಾಖಲೆಗಳನ್ನು ಪ್ರತಿ ಮೂವತ್ತು ವರ್ಷಗಳಿಗೊಮ್ಮೆ ಮರುಭೂಮಾಪನ ಮಾಡಬೇಕು ಎಂಬ ನಿಯಮವಿದೆ. ಆದರೆ, ಕಳೆದ 150 ವರ್ಷಗಳಿಂದ ಈ ಕಾರ್ಯವಾಗಿಲ್ಲ. ಹೀಗಾಗಿ ಭೂಮಿ ಮಾರಾಟದ, ಪೋಡಿ, ಗಡಿ ಸಮಸ್ಯೆ ದಾಖಲೆಗಳು ಶಿಥಿಲಗೊಂಡಿವೆ. ಸರ್ಕಾರ ರಾಜ್ಯದ 13 ಜಿಲ್ಲೆಗಳಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಉಚಿತ ಸರ್ವೆ ಮಾಡುವ ಯೋಜನೆ ಹೊಂದಿ ಅವುಗಳ ರಕ್ಷಣೆ ಮತ್ತು ಹೊಸ ದಾಖಲೆಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಪ್ರತಿ ಹಿಡುವಳಿದಾರರಿಗೆ ಪ್ರತ್ಯೇತಕ ಸರ್ವೇ ನಂಬರು, ಹಿಸ್ಸಾ, ನಕ್ಷೆ, ಪಹಣಿ ಒದಗಿಸಲು ಜಿಲ್ಲೆಯ 2 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಭೂದಾಖಲೆಗಳ ಸಹಾಯಕ ನಿರ್ದೇಶಕ ಎಂ. ಸಂತೋಷ್ ಯೋಜನೆ ಉದ್ದೇಶ ವಿವರಿಸಿದರು. ಇಟಿಎಸ್ ಕಂಪನಿಯ ವಿಜಯಕುಮಾರ, ಗಣೇಶ ಇತರರು ಮಾತನಾಡಿದರು. ಪುರಸಭೆ ಮಾಜಿ ಉಪಾಧ್ಯಕ್ಷ ರಾಮು ಕಲಾಲ ಗ್ರಾಮಸ್ಥರ ಪರವಾಗಿ ಹಲವು ಸಲಹೆಗಳನ್ನು ಇಲಾಖೆ ಗಮನಕ್ಕೆ ತಂದರು. ಪುರಸಭೆ ಸದಸ್ಯೆ ಹೇಮಾವತಿ ಅಬ್ಬಿಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಎಸ್.ಆರ್. ಶಿರಕೋಳ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ವೀರೇಶ ಸಜ್ಜನರ, ಪಾಲಾಕ್ಷಿ ಗಣದಿನ್ನಿ ಇತರರು ಪಾಲ್ಗೊಂಡಿದ್ದರು.
ಸಿ.ಎಸ್. ಇಟಗಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಎಂ.ಎ.ನದಾಫ್ ನಿರೂಪಿಸಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

