ಹವ್ಯಾಸಗಳ ಬದುಕು ಕ್ರಿಯಾಶೀಲ
ಕನ್ನಡಪ್ರಭ ವಾರ್ತೆ, ಗದಗ, ಡಿ. 29
ಸಂಗೀತ-ಸಾಹಿತ್ಯ-ಸಾಂಸ್ಕೃತಿಕ ರಂಗದ ಅಭಿರುಚಿಯ ಸಾಧನೆಯ ಹವ್ಯಾಸಗಳು ಮಾನವನ ಯಾಂತ್ರಿಕ ಬದುಕನ್ನು ಕ್ರಿಯಾಶೀಲಗೊಳಿಸಿ ಸೃಜನಶೀಲತೆ ನೀಡುವವು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ 2151ನೇ ಶಿವಾನುಭವದಲ್ಲಿ ರಾಷ್ಟ್ರಕವಿ ಶಿವರುದ್ರಪ್ಪ ಅವರಿಗೆ ನುಡಿನಮನ ಹಾಗೂ ಗದುಗಿನ ರಾಜೇಶ್ವರಿ ಕಲಾ ಕುಟೀರದ 12ನೇ ವಾರ್ಷಿಕೋತ್ಸವ ನಿಮಿತ್ತ ನಡೆದ ಸಂಗೀತ ನೃತ್ಯೋಲ್ಲಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಯುವ ವಿದ್ಯಾರ್ಥಿ ಜನಾಂಗ ಬರಿ ಪಠ್ಯದಲ್ಲಿ ತಮ್ಮ ಪ್ರತಿಭೆ ತೋರದೆ ಭಾರತೀಯ ಸಂಸ್ಕೃತಿ ಬಿಂಬಿಸುವ ಶಾಸ್ತ್ರೀಯ ಸಂಗೀತ, ವಾದ್ಯವಾದನ, ನೃತ್ಯದಂತಹ ಸಾತ್ವಿಕ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಅದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಗದಗ ನಗರದಲ್ಲಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತ, ನೃತ್ಯ ಶಿಕ್ಷಣ ನೀಡಿಕೆಯಲ್ಲಿ ರಾಜೇಶ್ವರಿ ಕಲಾಕುಟೀರ ತನ್ನದೇ ಆದ ಸಾಧನೆ ಮಾಡಿದ್ದು ಅಭಿನಂದನೀಯ ಕಾರ್ಯ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನ ಕನ್ನಡ ನಾಡು-ನುಡಿ, ಸಂಸ್ಕೃತಿಗೆ ತುಂಬಲಾರದ ಹಾನಿ. ಅವರ ಜೀವನ ಸಾಧನೆಗಳು ಕನ್ನಡ ಸಾಧಕರಿಗೆ ಮಾದರಿ. ಹಿರಿಯ ಕವಿ ಜಿ.ಎಸ್.ಎಸ್. ಅಗಲಿಕೆಯಿಂದ ಕುವೆಂಪು ಅವರ ಅಗ್ರಗಣ್ಯ ಸಾಂಸ್ಕೃತಿಕ ವಾರಸುದಾರಿಕೆ ಪರಂಪರೆ ಬಡವಾದಂತಾಗಿದೆ ಎಂದು ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಿಜಿಎಂ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್.ಆರ್. ಜೋಶಿ ಮಾತನಾಡಿದರು. ರಾಜೇಶ್ವರಿ ಕಲಾ ಕುಟೀರದ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ ಕಾರ್ಯಕ್ರಮ ಜನರ ಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಹಿರಿಯ ದೊಡ್ಡಾಟ ಕಲಾವಿದ ಬಸಣ್ಣ ಸರಲಾ ಹಾಗೂ ಚೈತನ್ಯ ಸಂಗೀತ ಪಾಠಶಾಲೆ ಮುಖ್ಯಸ್ಥ ಆರ್.ಎಲ್. ಪುರಾಣಿಕ ಅವರನ್ನು ಸನ್ಮಾನಿಸಲಾಯಿತು. ಅರುಣಕುಮಾರ ಯರಾಶಿ, ಮಲ್ಲಿಕಾರ್ಜುನ ಯರಾಶಿ, ರಾಜು ವೆರ್ಣೇಕರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ, ಮುರಳೀಧರ ಹರಿದಾಸ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ದಿ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್.ಎನ್. ಆದಿ ಸ್ವಾಗತಿಸಿದರು. ಅಂದಾನೆಪ್ಪ ವಿಭೂತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

