ಗದಗ

ಜನರನ್ನು ರಂಜಿಸಿದ ಟಗರಿನ ಕಾಳಗ

Published On :

ಕನ್ನಡಪ್ರಭ ವಾರ್ತೆ, ಗದಗ, ಡಿ. 30
ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಗದುಗಿನ ಗಾಮಾ ಚಾಂಪಿಯನ್ ರಾಮಾ ಎಂಬ ಟಗರಿನ 5ನೇ ವರ್ಷದ ಪುಣ್ಯತಿಥಿ ಅಂಗವಾಗಿ ಜರುಗಿದ ರಾಷ್ಟ್ರ ಮಟ್ಟದ ಟಗರಿನ ಪಂದ್ಯಾವಳಿಯಲ್ಲಿ ಹಲವಾರು ಟಗರುಗಳು ಉತ್ತಮ ಪ್ರದರ್ಶನ ನೀಡಿ, ಜನರ ಮೆಚ್ಚುಗೆಗೆ ಪಾತ್ರವಾದವು.
ಗದಗ, ಬೆಟಗೇರಿ, ಹಾವೇರಿ, ರಾಣಿಬೆನ್ನೂರ, ಗುಮ್ಮಗೋಳ, ಹೂವಿನ ಹಡಗಲಿ, ದಾವಣಗೆರೆ ಸೇರಿದಂತೆ ಜಿಲ್ಲೆಯ ವಿವಿಧ ನಗರ ಹಾಗೂ ಗ್ರಾಮೀಣ ಭಾಗಗಳಿಂದ ನೂರಾರು ಟಗರುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಮನರಂಜನೆ ನೀಡಿದವು. ಹಾಲು ಹಲ್ಲು 42, ಎರಡು ಹಲ್ಲು 49, ನಾಲ್ಕು ಹಲ್ಲು 27, ಆರು ಹಲ್ಲು 22, ಎಂಟು ಹಲ್ಲು 13, ಐದು ವಿಭಾಗಗಳಲ್ಲಿ ಒಟ್ಟು 153 ಟಗರುಗಳು ಪಾಲ್ಗೊಂಡಿದ್ದವು.
ಫಲಿಂತಾಶ: ಹಾಲು ಹಲ್ಲು ಟಗರು ವಿಭಾಗದಲ್ಲಿ ಬಂಗಾರದ ಜಿಂಕೆ ಗುಮ್ಮಗೋಳ (ಪ್ರಥಮ), ಕ್ರಾಂತಿವೀರ ಗುಮ್ಮಗೋಳ, (ದ್ವಿತೀಯ), ಕನಕ ಪ್ರಸನ್ನ ರಾಣಿಬೆನ್ನೂರ (ತೃತೀಯ), ದೇವಪ್ಪ ಚವ್ಹಾಣ ಮುಳಗುಂದ (ಚತುರ್ಥ), 2 ಹಲ್ಲು ಟಗರು ವಿಭಾಗದಲ್ಲಿ ದಿಗಂಬರ ಬೀರೇಶ್ವರ ಹೂವಿನ ಹಡಗಲಿ (ಪ್ರಥಮ), ಜೈ ಭವಾನಿ ಎ ಬೆಟಗೇರಿ (ದ್ವಿತೀಯ), ಗದುಗಿನ ರಾಜಾ ಗದಗ (ತೃತೀಯ), ಮಲ್ಲಿಗೆ ಹೂವಿನ ಹಡಗಲಿ (ಚತುರ್ಥ) 4 ಹಲ್ಲು ಟಗರು ವಿಭಾಗದಲ್ಲಿ ಶೇರಖಾನ್ ರಾಣಿಬೆನ್ನೂರ (ಪ್ರಥಮ), ಬ್ರಹ್ಮಲಿಂಗ ನಲವಡಿ (ದ್ವಿತೀಯ), ಗುರು ಕೊಟ್ಟೂರೇಶ್ವರ ಹಡಗಲಿ (ತೃತೀಯ), ಬೀರಲಿಂಗೇಶ್ವರ ಹಾತಲಗೇರಿ (ಚತುರ್ಥ) 6 ಹಲ್ಲು ಟಗರು ವಿಭಾಗದಲ್ಲಿ ಕಳಸಾಪುರ ಈಶ ಕಳಸಾಪುರ (ಪ್ರಥಮ), ಬೀಬೀ ಪಾತೀಮಾ ಅಡವಿಸೋಮಾಪುರ (ದ್ವಿತೀಯ), ರಾಜ ಚಲುವ ಗದಗ (ತೃತೀಯ), ಲೂಸಿಫ್ ಮದರಂಗಿ ಗದಗ (ಚತುರ್ಥ)
8 ಹಲ್ಲು ಟಗರು ವಿಭಾಗದಲ್ಲಿ ಮೈಲಾರಲಿಂಗೇಶ್ವರ ಹಂಡಾ ಬಂಡಾ ಶಿವಮಣಿ ದಾವಣಗೇರಿ (ಪ್ರಥಮ), ಮೈಲಾರಲಿಂಗೇಶ್ವರ ಹಂಡಾ ಬಂಡಾ ಶಿವಮಣಿ ದಾವಣಗೇರಿ (ದ್ವಿತೀಯ), ಮೈಲಾರಲಿಂಗೇಶ್ವರ ಹಂಡಾ ಬಂಡಾ ಶಿವಮಣಿ ದಾವಣಗೆರೆ (ತೃತೀಯ), ಬೆಟಗೇರಿ ಕೆಂಚ ಬೇಟಗೇರಿ (ಚತುರ್ಥ) ಪ್ರಶಸ್ತಿಗಳನ್ನು ಪಡೆದವು.
ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ರಾಜ್ಯ ಉಪಾಧ್ಯಕ್ಷ ಅರುಣ ಅಣ್ಣಿಗೇರಿ, ಗಣೇಶ ಹಬೀಬ, ಶ್ರೀಕಾಂತ ಪವಾರ, ಮಹಾದೇವಪ್ಪ ಹೊಂಬಳ, ಚನ್ನಪ್ಪ ಖಾನಾಪುರ, ದ್ಯಾಮಣ್ಣ ಹೊಂಬಳ, ಪ್ರಕಾಶ ಕಣವಿ, ರಾಮಣ್ಣ ಪುರದ ಚಂದ್ರಪ್ಪ ಗದಗಿನ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.