ಜ. 4ರಂದು ಮಾರುತಿ ಕಾರ್ತಿಕೋತ್ಸವ
ಹೊಳೆಆಲೂರ: ಸ್ಥಳೀಯ ರೇಲ್ವೆ ಸ್ಟೇಶನ್ ಹತ್ತಿರ ಪೊಲೀಸ್ ಔಟ್ ಪೋಸ್ಟ್ ಎದುರಿಗಿರುವ ಮಾರುತಿ ದೇವರ 42ನೇ ಕಾರ್ತಿಕೋತ್ಸವವು ಜ. 4ರಂದು ನೆರವೇರಲಿದೆ. ಅಂದು ಬೆಳಗ್ಗೆ 6 ಗಂಟೆಯಿಂದ 10.30ರ ವರೆಗೆ ಬುತ್ತಿಪೂಜೆ ಮತ್ತು ಎಲಿಪೂಜೆ, 11 ರಿಂದ 12 ಗಂಟೆಯವರೆಗೆ ಶ್ರೀನಿವಾಸ ಆಚಾರ್ಯರಿಂದ ಪಂಚಾಮೃತ ಅಭಿಷೇಕ, ಸರ್ವಾಲಂಕಾರ ಪೂಜೆ ಜರುಗಲಿದೆ. ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯುವುದು. ಈ ಸಂದರ್ಭದಲ್ಲಿ ವೇಣುಗೋಪಾಲ, ಸೈಯದ್, ಸಿ. ಶಿಂತಲಕುಮಾರ್, ಎಂ. ಆನಂದ ನಾಯಕ, ಥಂಡಾಕೇಶವ, ಎಸ್.ಕೆ. ಬೆಹರಾ, ಪಿ.ಎಂ. ಜಾಧವ ಅವರು ಪಾಲ್ಗೊಳ್ಳುವರು. ಸಂಜೆ 6.30 ರಿಂದ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸರ್ವ ಭಕ್ತಾದಿಗಳು ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರ ಗಮನಕ್ಕೆ
ಗದಗ: ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ನೇಕಾರ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್ಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಮೂಲಕ ನೇಕಾರಿಕೆ ಮತ್ತು ನೇಕಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಾದ ಮಗ್ಗಗಳ ಸ್ಥಾಪನೆ, ಕಚ್ಚಾಮಾಲು ಖರೀದಿ, ಸಿದ್ಧ ವಸ್ತುಗಳ ಉತ್ಪಾದನೆ, ಮಗ್ಗ ಪೂರ್ವ ಚಟುವಟಿಕೆ ಮತ್ತು ಮಗ್ಗ ನಂತರ ಸಂಸ್ಕರಣೆ ಚಟುವಟಿಕೆ ಇತ್ಯಾದಿ ಉದ್ದೇಶಗಳಿಗೆ ಅಲ್ಪಾವಧಿ ಸಾಲ ರು. 3 ಲಕ್ಷ ಹಾಗೂ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ರು. 5 ಲಕ್ಷಗಳ ವರೆಗೆ ಮಿತಿಗೊಳಪಟ್ಟು ಶೇ. 3ರ ಬಡ್ಡಿ ದರದಲ್ಲಿ ಸಾಲಗಳನ್ನು ಇಲಾಖೆಯ ನಿಯಮ ಹಾಗೂ ಷರತ್ತುಗೊಳಪಟ್ಟು 2013-14ನೇ ಸಾಲಿನಲ್ಲಿ ಯೋಜನೆಗೆ ಮಂಜೂರಾತಿ ನೀಡಲಾಗಿರುತ್ತದೆ. ಈ ಯೋಜನೆಯು 1-4-2013 ರಿಂದ ಅನ್ವಯಿಸುತ್ತಿದ್ದು ನೇಕಾರ ಸಹಕಾರ ಸಂಘಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್ಗಳು (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗಳು, ಪಟ್ಟಣ ಸಹಕಾರ ಬ್ಯಾಂಕ್ಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳು ಹಾಗೂ ಇತರೆ ಸಹಕಾರ ಬ್ಯಾಂಕ್ಗಳು) ನೇಕಾರರಿಗೆ ನೀಡಿರುವ ಶೇ. 3ರ ಬಡ್ಡಿ ಸಾಲಗಳ ಮೇಲಿನ ಬಡ್ಡಿ ಸಹಾಯಧನದ ಕ್ಲೇಮುಗಳನ್ನು ಸಹಕಾರ ಸಂಘಗಳ ಉಪನಿಬಂಧಕರು ಗದಗ ಜಿಲ್ಲೆ, ಗದಗ ಇವರಿಗೆ ಕಳುಹಿಸಿಕೊಡಲು ಕೋರಿದೆ. ಕಾರಣ ಸದರಿ ನೇಕಾರರು ಮತ್ತು ಸಾಲ ನೀಡಿದ ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳು ಯೋಜನೆಯ ಉಪಯೋಗ ಪಡೆಯಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಪಂ. ಕೆ.ಎಚ್.ಟಿ.ಐ ಕಟ್ಟಡ ನರಸಾಪೂರ (ದೂ. 08372-218649) ಬೆಟಗೇರಿ-ಗದಗ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

