ನ್ಯಾಯಯುತ ಹೋರಾಟವೇ ಸಂಘಟನೆ ಉದ್ದೇಶ: ಲಕ್ಕುಂಡಿ
ಗದಗ: ನ್ಯಾಯ, ನೀತಿ, ಧರ್ಮದ ಧ್ವನಿ, ಯುವಜನಾಂಗದ ಶಕ್ತಿ ನ್ಯಾಯಯುತ ಹೋರಾಟ ನ್ಯೂ (ಇಂಡಿಯಾ) ಯುಥ್ ಅಸೋಸಿಯೇಶನ್ ಮೂಲ ಉದ್ದೇಶ ಎಂದು ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಲಕ್ಕುಂಡಿ ಹೇಳಿದರು.
ಅವರು ಭಾನುವಾರ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಇಲ್ಲಿಯವರೆಗೆ ಅನಿವಾರ್ಯ ಕಾರಣಗಳಿಂದ ಸಂಘಟನೆಯು ನೆನೆಗುದಿಗೆ ಬಿದ್ದಿದ್ದಕ್ಕೆ ಸಭೆಯ ಸರ್ವರನ್ನೂ ಕ್ಷಮೆಯಾಚಿಸಿ, ಇನ್ನು ಮುಂದೆ ಸಂಘಟನೆಗೆ ಯಾವುದೇ ಕಾರಣಕ್ಕೂ ಹಿಂದುಳಿಯದೆ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸಿಕೊಂಡು, ಸಂಘ ಶಕ್ತಿಯ ಬಲ ಹೆಚ್ಚಿಸಿ ಕಾರ್ಯನಿರ್ವಹಿಸುತ್ತದೆ ಹಾಗೂ ಹೆಚ್ಚು ಹೆಚ್ಚು ಪದಾಧಿಕಾರಿಗಳ್ನು ಆಯ್ಕೆ ಮಾಡಿ ಸಂಘದ ಅಭ್ಯುದಯಕ್ಕಾಗಿ ಶ್ರಮಿಸುತ್ತೇನೆ. ಸಂಘಟನೆಯ ಶಕ್ತಿ ಬೆಳೆಯಿಸಿಕೊಂಡು ಅನ್ಯಾಯವಾದಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಸಂಘ ಮೂಂಚೂಣಿಯಲ್ಲಿರುತ್ತದೆ ಹಾಗೂ ಅವಳಿ ನಗರದ ಎಲ್ಲ ವಾರ್ಡ್ಗಳಲ್ಲಿ ಚುನಾವಣೆ ಮುಗಿದು ಸುಮಾರು 9 ತಿಂಗಳ ಗತಿಸಿದರೂ ಅಭಿವೃದ್ಧಿ ಕಾರ್ಯ ಕಾಣದೇ ಕುಂಠಿತಗೊಂಡಿವೆ. ಇದರ ವಿರುದ್ಧ ಹೋರಾಟ ಮಾಡಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನೊಳಗೊಂಡು ಯಾವುದೇ ಸಾರ್ವಜನಿಕ ಕಾರ್ಯಗಳಿಗಾಗಿ ಜನಸ್ಪಂದಿಸಿದರೆ ಸಂಘಟನೆ ತಮ್ಮೊಂದಿಗೆ ಇರುವುದಾಗಿ ತಿಳಿಸಿದರು. ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಪೂಜಾ ಬೇವೂರ, ಜಿಲ್ಲಾಧ್ಯಕ್ಷ ಜಿ.ಎಸ್. ನಳೆಗಾಂಮಠ ಮಾತನಾಡಿದರು. ಸಭೆಯಲ್ಲಿ ಅಕ್ಬರ್ಅಲಿ ಬೇಗ, ಅಬ್ದುಲ್ಖಾದರ ಗಡಾದ, ಜೇಸುದಾಸ, ಮಂಜುನಾಥ ಪಾಟೀಲ, ಎಂ.ವಿ. ಕುಲಕರ್ಣಿ, ದಯಾನಂದಸಿಂಗ್ ತಾಳಿಕೋಟಿ, ಲಕ್ಷ್ಮಣ ಅಣ್ಣಿಗೇರಿ, ಬಾಗೇಶ ಲಕ್ಕುಂಡಿ, ರವಿ ರಾಯಲದೊಡ್ಡಿ, ಶ್ರೀನಿವಾಸ ಹರಿಜನ, ಬಾಬಾಜಾನ ಬಳಗಾನೂರ, ವೈ.ವೈ. ಕಾಂಬಳೆ, ದಾವಲಪ್ಪ ಲಕ್ಕುಂಡಿ, ಆನಂದ ಚಲವಾದಿ, ಯಲ್ಲಮ್ಮ ಹಲಗಿಯವರ ಮುಂತಾದವರು ಉಪಸ್ಥಿತರಿದ್ದರು. ಆರ್.ಎಲ್. ಮೇಳೆನವರ ಸ್ವಾಗತಿಸಿ, ನಿರೂಪಿಸಿದರು. ಬೂದಪ್ಪ ಹುಣಶಿಮರದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

