ಸಮಾಜ ಸೇವೆಯಲ್ಲಿ ತ್ಯಾಗ ಅವಶ್ಯ: ಬಸವೇಶ್ವರ ಶ್ರೀ
ಗದಗ: ಕ್ರೀಯಾಶೀಲವಾಗಿ ದುಡಿಯುವ ಮನಸ್ಸುಗಳು ಸೇರಿ ಕಟ್ಟಿದ ಸಂಘ ಸಂಸ್ಥೆಗಳು ಮಾದರಿಯಾಗಿ ಕೆಲಸ ನಿರ್ವಹಿಸಬಲ್ಲವು. ಸಮಾಜ ಸೇವೆ ಮಾಡುವಾಗ ಮನುಷ್ಯ ತ್ಯಾಗ ಮನೋಭಾವನೆ ಹೊಂದುವುದು ಅವಶ್ಯ ಎಂದು ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಹೇಳಿದರು.
ಈಚೆಗೆ ಅವರು ನಗರದ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ರಾಜ್ಯ ವೀರಶೈವ ಲಿಂಗವಂತ ನೌಕರರ ಕ್ಷೇಮಾಭಿವೃದ್ಧಿ ಸಂಘ ಗದಗ ಗ್ರಾಮೀಣ ಘಟಕದಿಂದ ನಡೆದ ದಿನದರ್ಶಿಕೆ ಬಿಡುಗಡೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಉದ್ಘಾಟನೆ ನೆರವೇರಿಸಿದ ಸಂಘದ ರಾಜ್ಯ ಗೌರವಾಧ್ಯಕ್ಷ ಸೋಮಯ್ಯ ಚಿಕ್ಕಮಠ ಮಾತನಾಡಿ, ಸಂಘ-ಸಂಸ್ಥೆಗಳು ಮಾದರಿಯಾಗಬೇಕಾದರೆ ಜನಪರ ಕೆಲಸ ಮಾಡಬೇಕು. ಸಂಘ ಸಂಸ್ಥೆಗಳು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನಾಡಿನ ಏಳ್ಗೆಗೆ ಶ್ರಮಿಸಬೇಕಾಗಿದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಬಸವಲಿಂಗಯ್ಯನವರು, ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎಂ. ಪಾಟೀಲ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜಶೇಖರ ಹಿರೇಮಠ, ತಹಸೀಲ್ದಾರ್ ಎಸ್.ಡಿ. ಗಣಾಚಾರಿ, ಡಿಎಚ್‌ಓ ಡಾ. ಡಿ.ಬಿ. ಚನ್ನಶೆಟ್ಟಿ, ಜಿಲ್ಲಾಸ್ಪತ್ರೆ ಶಸ್ತ್ರ ಚಕಿತ್ಸಕ ಡಾ. ಆರ್.ಎನ್. ಪಾಟೀಲ, ಡಿಎಸ್‌ಪಿ ವಿ.ಬಿ. ಕುಂಬಾರ, ಡಾ. ಬಸವರಾಜ ಧಾರವಾಡ, ಎಸ್.ಟಿ. ಬ್ಯಾಕೋಡ, ಎಸ್.ಎಂ. ಕೊಟಗಿ, ಎಸ್.ಎಸ್. ಗುಡ್ಲಾನೂರ, ವಿ.ಎಸ್. ಬಾಣದ, ಎ.ಎ. ಕಂಬಾಳಿಮಠ, ಡಿ.ಎಂ. ಮುದ್ದೇಬಿಹಾಳ, ಬಿ.ಎಸ್. ಹನುಮಂತಗೌಡ್ರ ಮುಂತಾದವರು ಉಪಸ್ಥಿತರಿದ್ದರು.
ವೀರಣ್ಣ ಅಂಗಡಿ ಹಾಗೂ ಎಸ್.ಡಿ. ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಅಕ್ಷತಾ ಅಡ್ನೂರ ಇವರಿಂದ ಭರತ ನಾಟ್ಯ ಜರುಗಿತು. ಎನ್.ಆರ್. ಕಾಳಗಿ ಪ್ರಾರ್ಥಿಸಿದರು. ಗಂಗಾಧರಗೌಡ ಗೌಡರ ಸ್ವಾಗತಿಸಿದರು. ಕವಿತಾ ದಂಡಿನ ಮತ್ತು ಪಿ.ಬಿ. ಮುಧೋಳಮಠ ನಿರೂಪಿಸಿದರು. ವೈ.ಎಚ್. ಹನುಮಂತಗೌಡ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

