ಹಳ್ಳಿಗುಡಿ: ಅಟಲ್ ಉತ್ತಮ ಆಡಳಿತ ದಿನ ಕಾರ್ಯಕ್ರಮ
ಮುಂಡರಗಿ: ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಒಂದು ತಿಂಗಳ ಪರ್ಯಂತ ಜಾರಿಯಲ್ಲಿರುವ ಅಟಲ್ ಉತ್ತಮ ಆಡಳಿತ ದಿನ ಕಾರ್ಯಕ್ರಮ ಪ್ರಥಮ ಹಂತದಲ್ಲಿ ಹಳ್ಳಿಗುಡಿ ಗ್ರಾಮದಲ್ಲಿ ಈಚೆಗೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ನೇತೃತ್ವದಲ್ಲಿ ಜರುಗಿತು. ಯಾವುದೇ ವಿಷಯಕ್ಕೆ ಸಂಕೋಚ ಪಡದೆ ಮುಕ್ತವಾಗಿ ಹೇಳಿಕೊಳ್ಳಿ. ಇಲಾಖೆಯಲ್ಲಿ ಸಮಸ್ಯೆಗಳಿದ್ದರೆ ಸಂಪರ್ಕಿಸಲು ತಾಪಂ ಕಾರ್ಯಾಲಯದಲ್ಲಿ ಎಲ್ಲ ಅಧಿಕಾರಿಗಳ ದೂರವಾಣಿ ಸಂಖ್ಯೆ ಲಭ್ಯ ಇರುತ್ತದೆ. ಪಾರದರ್ಶಕ ಮತ್ತು ತ್ವರಿತ ಸೇವೆ ಕೊಡಲು ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಗ್ರಾಪಂ ಸದಸ್ಯರಾದ ಕೊಟ್ರಪ್ಪ ನಾಲ್ಕುರಿ, ಶಶಿಧರ ಪುರದ, ದೊಡ್ಡಬಸಪ್ಪ ಚನ್ನಳ್ಳಿ, ಶಿವಾನಂದ ಸಜ್ಜನರ, ಶಿವಾನಂದ ಜೋಗಿನ, ಕಂದಾಯ ಸಿಬ್ಬಂದಿ, ಎಂ.ಎ. ನದಾಫ್, ಜಿ.ಆರ್. ಕುಲಕರ್ಣಿ, ಟೀಕಾನದಾರ ಪಾಲ್ಗೊಂಡಿದ್ದರು. ತಾಪಂ ಇಓ ಡಾ ಎಸ್.ವಿ. ತಿಗರಿಮಠ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರ 100 ದಿನದ ಬದಲಾಗಿ ವರ್ಷಕ್ಕೆ 150 ದಿನಗಳ ಕೆಲಸ ಕೊಡಲು ಆದೇಶಿಸಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. ತಹಸೀಲ್ದಾರ ಎ.ಟಿ. ನರೇಗಲ್ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

