ಅಸಮರ್ಪಕ ಕುಡಿವ ನೀರು ಪೂರೈಕೆ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 4
ಪಟ್ಟಣದ ಇಂದಿರಾ ನಗರದ ನಿವಾಸಿಗಳು 20 ದಿನಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು, ನಿರೀನ ಅವ್ಯವಸ್ಥೆ ಖಂಡಿಸಿ, ಮಹಿಳೆಯರು ಸೇರಿದಂತೆ ನೂರಾರು ಜನರು ಸೋಮವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನದಿಯಲ್ಲಿ ನೀರಿಲ್ಲದ ಕಾರಣ ಕುಡಿಯುವ ನೀರು ಬಂದಿಲ್ಲವೆಂದು ಪುರಸಭೆಯವರು ಕಾರಣ ಹೇಳುತ್ತಿದ್ದಾರೆ. ಆದರೆ, ನಮಗೆ ನೀರಿನ ತೊಂದರೆ ಹೆಚ್ಚುತ್ತಿದೆ. ಇಂದಿರಾ ನಗರದ ಸುತ್ತ-ಮುತ್ತ ಹಲವಾರು ಬೋರ್‌ಗಳಲ್ಲಿ ನೀರು ಇರುವುದರಿಂದ ಎಲ್ಲ ವಾರ್ಡಿನವರಿಗೂ ನೀರು ಪೂರೈಸುವಂತೆ ನಮಗೂ ಈ ಕೂಡಲೇ ಬೋರಿನ ನೀರು ಪೂರೈಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿದರು. ಪುರಸಭೆಯ ಅಧ್ಯಕ್ಷೆ ಜಯಕ್ಕ ಕಳ್ಳಿ ಹಾಗೂ ಪ್ರಭಾರಿ ಮುಖ್ಯಾಧಿಕಾರಿ ಪಿ.ಸಿ. ತುಪ್ಪದ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯಕ್ಕ ಕಳ್ಳಿ ಮಾತನಾಡಿ, ನದಿಯಲ್ಲಿನ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, ವಾರದೊಳಗೆ ಬರುವ ಮೈಲಾರ ಜಾತ್ರೆಗೆ ನದಿಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಡುವುದರಿಂದ ಲಕ್ಷ್ಮೇಶ್ವರಕ್ಕೆ ನೀರನ್ನು ಪೂರೈಸುತ್ತಿರುವ ಮೇವುಂಡಿ ಹತ್ತಿರದ ಜಾಕ್‌ವೆಲ್‌ನಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ತಕ್ಷಣವೇ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕ್ರಮಕೈಗೊಳ್ಳಲಾಗುವುದೆಂದರು. ನೀರನ್ನು ಮಿತವ್ಯಯವಾಗಿ ಬಳಸಲು ಸಾರ್ವಜನಿಕರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಇಂದಿರಾ ನಗರದ ಜೆ.ಪಿ. ಸಿಂದಳ್ಳಿಮಠ, ನಾಗೇಶ ಅಮರಾಪುರ, ನಾಗರಾಜ ನಾವ್ಹಿ, ನೀಲಕಂಠಪ್ಪ ಕ್ಷತ್ರಿ, ಅಬ್ದುಲ್‌ಖಾದರ ಜಮಾದಾರ, ನಾಗರತ್ನಾ ಗಬ್ಬೂರ, ನೀಲಪ್ಪ ಸುಣಗಾರ, ಮಾಳವ್ವ ಬಾರಕೇರ, ಶಬ್ಬೀರ ಹುಲಗೇರಿ, ದಾದಾಪೀರ ಸೌದೆಗಾರ, ಮವಾಲಸಾಬ ಮೇವುಂಡಿ, ಮಂಜುನಾಥ ಹಳ್ಳಿಕೇರಿ, ದಾವಲಬಿ ನಿಡಗುಂದಿ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

