ಗದಗ

ಅನ್ನ ನೀಡುವ ಕೈ, ಮನಸ್ಸು ಸ್ವಚ್ಛವಾಗಿರಲಿ: ವಡಗೇರಿ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 4
ಅನ್ನ ತಯಾರಿಸಿ ಮಕ್ಕಳಿಗೆ ಉಣಬಡಿಸುವ ಕಾರ್ಯ ಅತ್ಯಂತ ಪವಿತ್ರ. ಮಕ್ಕಳಿಗೆ ಅನ್ನ ನೀಡುವ ಕೈ ಹಾಗೂ ಮನಸ್ಸು ಸ್ವಚ್ಛವಾಗಿರಬೇಕು ಎಂದು ಗದಗ ಜಿಲ್ಲಾ ಬಿಸಿಯೂಟ ಯೋಜನೆಯ ಶಿಕ್ಷಣಾಧಿಕಾರಿ ಎ.ಎಂ. ವಡಗೇರಿ ಅಭಿಪ್ರಾಯಪಟ್ಟರು.
ಈಚೆಗೆ ಅವರು ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಿಸಿಯೂಟ ತಯಾರಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬಿಸಿಯೂಟ ತಯಾರಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು ಹಾಗೂ ಅಡುಗೆ ತಯಾರಕರ ಪಾತ್ರ ಮಹತ್ವದ್ದಾಗಿದೆ. ಅಲ್ಲದೇ ಅಡುಗೆ ತಯಾರಕರ ಆರೋಗ್ಯದ ಕಾಳಜಿಯು ಕೂಡಾ ಅಷ್ಟೇ ಮುಖ್ಯವಾಗಿದ್ದು, ನಿಮ್ಮ ಆರೋಗ್ಯದ ಕಾಳಜಿ ಜತೆಯಲ್ಲಿ ಮಕ್ಕಳ ಊಟದ ಕಡೆಗೂ ಗಮನ ಹರಿಸಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಪ್ರೇಮಕ್ಕ ಬಿಂಕದಕಟ್ಟಿ, ಅತಿಥಿಗಳಾಗಿ ಆಗಮಿಸಿದ್ದ ಬಿ.ಎಸ್. ಈಳಗೇರ, ಬಿ.ಎಸ್. ಹರ್ಲಾಪುರ ಹಾಗೂ ದಿಗಂಬರ ಪೂಜಾರ ಮಾತನಾಡಿದರು. ಡಳಿತಾಧಿಕಾರಿ ಎ.ಬಸವರಾಜಪ್ಪ, ಮುಖ್ಯೋಪಾಧ್ಯಾಯ ಪಿ.ಎಚ್. ಕೊಂಡಾಬಿಂಗಿ, ತಾಲೂಕಾ ಬಿಸಿಯೂಟ ತಯಾರಕರ ಸಂಘದ ಅಧ್ಯಕ್ಷೆ ಪುಷ್ಪಾ ಚವ್ಹಾಣ ಉಪಸ್ಥಿತರಿದ್ದರು.
ಶಿರಹಟ್ಟಿ ತಾಲೂಕಾ ಬಿಸಿಯೂಟ ಯೋಜನೆ ಅಧಿಕಾರಿ ಕೆ.ಎ. ಬಳಿಗೇರ ಸ್ವಾಗತಿಸಿದರು. ಅರುಣಕುಮಾರ ನಿರೂಪಿಸಿದರು. ಸಿಆರ್‌ಪಿ ಮಠದ ವಂದಿಸಿದರು. ಇದೇ ಸಂದರ್ಭದಲ್ಲಿ ಬಿಸಿಯೂಟ ತಯಾರಿಕಾ ಸಿಬ್ಬಂದಿಗಳಿಗೆ ಮೇಲುಡುಗೆಯನ್ನು ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.