ಹಾವೇರಿ: ಸ್ಥಳೀಯ ಸಂಸ್ಥೆಆಡಳಿತಾಧಿಕಾರಿಗಳು
ಹಾವೇರಿ: ಹಾವೇರಿ ನಗರಸಭೆಯ ಅವಧಿ ಫೆ. 13ಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಫೆ. 14ರಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಅವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಫೆ. 13ರಂದು ಅವಧಿ ಪೂರ್ಣಗೊಂಡ ಬ್ಯಾಡಗಿ, ಹಾನಗಲ್ಲ ಹಾಗೂ ಸವಣೂರು ಪುರಸಭೆಗಳಿಗೆ ಸಹ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಬ್ಯಾಡಗಿ ಪುರಸಭೆಗೆಗೆ ಹಾವೇರಿ ಉಪವಿಭಾಗಾಧಿಕಾರಿಗಳನ್ನು, ಹಾನಗಲ್ಲ ಹಾಗೂ ಸವಣೂರು ಪುರಸಭೆಗಳಿಗೆ ಸವಣೂರು ಉಪವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಫೆ. 11ರಂದು ರಾಣಿಬೆನ್ನೂರು ನಗರಸಭೆ ಅಧಿಕಾರಾವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಹಾವೇರಿ ಉಪವಿಭಾಗಾಧಿಕಾರಿಗಳನ್ನೇ ಆಡಳಿತಾಧಿಕಾರಿಗಳೆಂದು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
16ಕ್ಕೆ ನವೋದಯ ಪರೀಕ್ಷೆ
ಹಾವೇರಿ: ಜವಾಹರ ನವೋದಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ಸಿಬಿಎಸ್ಇ 9 ಮತ್ತು 11ನೇ ತರಗತಿಯವರಿಗೆ ಹೊಸದಾಗಿ ಪರಿಚಯಿಸಿರುವ ಪಿಎಸ್ಎ ಪರೀಕ್ಷೆ ನಿಗದಿತ ವೇಳಾಪಟ್ಟಿಯಂತೆ ಫೆ. 16ರಂದು ಬೆಳಗ್ಗೆ 10ರಿಂದ 12ರ ವರೆಗೆ ಜರುಗಲಿದೆ. ಹಾನಗಲ್ಲ ತಾಲೂಕು ಮಹಾರಾಜಪೇಟೆ ನವೋದಯ ವಿದ್ಯಾಲಯದ 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳ ಪಾಲಕರು ತಮ್ಮ ಮಕ್ಕಳನ್ನು ಬೆಳಗ್ಗೆ 9ಕ್ಕೆ ವಿದ್ಯಾಲಯಕ್ಕೆ ಕರೆತಂದು ಪರೀಕ್ಷೆಗೆ ಹಾಜರಪಡಿಸಿ, ಪರೀಕ್ಷೆ ಮುಗಿದ ಮೇಲೆ ಮನೆಗೆ ಕರೆದುಕೊಂಡು ಹೋಗಬೇಕೆಂದು ವಿದ್ಯಾಲಯದ ಪ್ರಾಚಾರ್ಯ ಜಿ. ವಲ್ಲಿಯಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಿದ್ಯುತ್ ಕಡಿತ
ಹಾವೇರಿ: ಹಾವೇರಿಯ 110 ಕೆವಿ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 11 ಕೆವಿ ಎಪಿಎಂಸಿ ಮಾರ್ಗದಲ್ಲಿ ರೇಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ತುರ್ತು ಕಾಮಗಾರಿ ಇರುವುದರಿಂದ ಫೆ. 14ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಈ ಫೀಡರ್ಗೆ ವಿದ್ಯುತ್ ವ್ಯತ್ಯಯವಾಗಲಿದೆ. ಈ ಮಾರ್ಗದಿಂದ ವಿದ್ಯುತ್ ಪಡೆಯುತ್ತಿರುವ ಉದಯನಗರ, ಎಪಿಎಂಸಿ ಹಾಗೂ ನಾಗೇಂದ್ರನಮಟ್ಟಿಯಲ್ಲಿ ವಿದ್ಯುತ್ ಪೂರೈಕೆ ಇರುವದಿಲ್ಲ. ಎಪಿಎಂಸಿ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರು ವಿನಂತಿಸಿದ್ದಾರೆ.
ತಡಸ ಪಂಚಕಲ್ಯಾಣ ಮಹೋತ್ಸವ ಇಂದು
ಶಿಗ್ಗಾಂವಿ: ತಾಲೂಕಿನ ತಡಸ ಬಸದಿ ಪಂಚಕಲ್ಯಾಣ ಮಹೋತ್ಸವ ಫೆ. 14ರ ಮಧ್ಯಾಹ್ನ 1ಕ್ಕೆ ಜರುಗಲಿದೆ. ಪುಣ್ಯಸಾಗರ ಮುನಿಶ್ರೀ ಸಾನ್ನಿಧ್ಯ, ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು. ವೀರಕುಮಾರ ಪಾಟೀಲ ಉದ್ಘಾಟಿಸುವರು. ಶ್ರೀನಿವಾಸ ಮಾನೆ, ಮಂಜುನಾಥ ಕುನ್ನೂರ, ಎಸ್.ಎ. ಖಾದ್ರಿ, ಎಂ.ಎಸ್. ಅಕ್ಕಿ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

