ತತ್ವ ಚಿಂತನೆಯಿಂದ ಯುವ ಜನತೆ ಆಕರ್ಷಿತ
ಕನ್ನಡಪ್ರಭ ವಾರ್ತೆ, ಗದಗ, ಫೆ. 16
ಇಂದಿನ ಯುವ ಜನತೆ ಬುದ್ಧ, ಬಸವಣ್ಣನವರ ತತ್ವ ಚಿಂತನೆಗಳಿಂದ ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬಿಜಾಪುರ ಜ್ಞಾನಯೋಗಾಶ್ರವುದ ಸಿದ್ಧೇಶ್ವರ ಶ್ರೀ ಹೇಳಿದರು.
ಅವರು ಶನಿವಾರ ತಾಲೂಕಿನ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ಪ್ರೊ. ಬುದ್ಧಣ್ಣ ಹಿಂಗಮೀರೆ ವೇದಿಕೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿರುವ 2ನೇ ದಿನದ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು.
ಬುದ್ಧನ ತತ್ವ, ಸಿದ್ಧಾಂತಗಳಲ್ಲಿ ಇರುವಂತಹ ಸರಳತೆ ಮತ್ತು ಸತ್ಯದ ಸೌಂದರ್ಯವನ್ನು ಅಧ್ಯಯನ ಮಾಡಿಯೇ ಅರ್ಥ ಮಾಡಿಕೊಳ್ಳಬೇಕು.
ಬುದ್ಧನ ಮುಂದುವರಿದ ಭಾಗವೇ ಬಸವಣ್ಣನವರಾಗಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬುದ್ಧ ಮತ್ತು ಬಸವ ಸಾಹಿತ್ಯದತ್ತ ಒಲವು ತೋರಬೇಕು. ಉತ್ತರ ಕರ್ನಾಟಕದಂತಹ ಹಿಂದುಳಿದ ಭಾಗದಲ್ಲಿ ದಲಿತ ಅಧ್ಯಯನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮೂಲ ನಿವಾಸಿಗಳೇ ನಿವೇಷ್ಟು ಬಲ್ಲಿರಿ, ನಿಮ್ಮ ಇತಿಹಾಸ ಗೋಷ್ಠಿಯ ಕುರಿತು ಮಾತನಾಡಿದ ಲೇಖಕ ಸಿ.ಎಚ್. ರಾಜಶೇಖರ, ಚಾತುರ್ವರ್ಣದ ತಳಹದಿಯಲ್ಲಿ ಬರುವ ಇತರೆ 3 ವರ್ಗದ ಬಹು ಸಂಖ್ಯಾತರೇ ಈ ದೇಶದ ಮೂಲ ನಿವಾಸಿಗಳಾಗಿದ್ದಾರೆ. ಅವರು ತಮ್ಮದೇ ಆದ ನಾಗರಿಕತೆ ಸಂಸ್ಕೃತಿ ಮತ್ತು ಇತಿಹಾಸ ಹೊಂದಿದ್ದಾರೆ.
ವೈದಿಕರು ಬಲವಂತವಾಗಿ ಮೂಲ ನಿವಾಸಿಗಳನ್ನು ಚಾತುರ್ವರ್ಣದ ಜಾತಿ ಪದ್ಧತಿಯಲ್ಲಿ ಬಂಧಿಸಿದ್ದಾರೆ. ಆದರೆ, ಮೂಲ ನಿವಾಸಿಗಳಲ್ಲಿ ಎಂದಿಗೂ ಜಾತಿ ಪದ್ಧತಿ ಇರಲಿಲ್ಲ. ಅವರ ಧರ್ಮ ಬೌದ್ಧ ಧರ್ಮವಾಗಿತ್ತು ಎಂದರು. ಚಿಂತಕ ಮಂಗ್ಳೂರು ವಿಜಯ ಬೌದ್ಧ ಧರ್ಮ ಯಾರಿಗೆ ಮತ್ತು ಏಕೆ ಎಂಬ ವಿಷಯವಾಗಿ ಮಾತನಾಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಡಿಎಸ್ಎಸ್ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಮಂಡ್ಯ ದಲಿತ ಮಹಿಳಾ ಒಕ್ಕೂಟದ ವೇದಾವತಿ, ಪ್ರೊ. ಡಿ.ಜಿ. ಜೋಗಣ್ಣನವರ, ಎಫ್.ಐ. ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು. ಜೀವನಹಳ್ಳಿ ಆರ್. ವೆಂಕಟೇಶ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

