ಗದಗ

ಶಿಕ್ಷಣಕ್ಕೆ ಜನಪ್ರತಿನಿಧಿಗಳು ಸ್ಪಂದಿಸಲಿ: ಅಮರಗೋಳ

Published On :

ಗದಗ: ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಣ ಆವಶ್ಯಕ. ಪ್ರತಿ ಶಾಲೆಯ ಅಭಿವೃದ್ಧಿ ಹಾಗೂ ಗುಣಾತ್ಮಕ ಶಿಕ್ಷಣದ ಕುರಿತು ಮಕ್ಕಳ ಪಾಲಕರೊಂದಿಗೆ ಜನಪ್ರತಿನಿಧಿಗಳು ಸ್ಪಂದಿಸಲಿ ಎಂದು ಮೇವುಂಡಿ ಗ್ರಾಪಂ ಅಧ್ಯಕ್ಷ ಹಾಲನಗೌಡ ಅಮರಗೋಳ ಹೇಳಿದರು. ಮುಂಡರಗಿ ತಾಲೂಕಿನ ಮೇವುಂಡಿಯಲ್ಲಿರುವ ಶಾಂತಾಬಾಯಿ ಕೋರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಮಹೇಶ ಹೊಳೆಯಾಚೆ, ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕೋರ್ಲಹಳ್ಳಿ, ಉಪಾಧ್ಯಕ್ಷ ನಿಂಗಪ್ಪ ನೋಟಗಾರ, ಗ್ರಾಪಂ ಸದಸ್ಯ ಕನಕವ್ವ ತಳವಾರ, ಶ್ರೀಶೈಲಪ್ಪ ಕೋರ್ಲಹಳ್ಳಿ, ಶಿವಪ್ಪ ಮುದಿಯಜ್ಜನವರ, ಕೊಟ್ರೇಶ ಸಿಂಧೋಗಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶರಣು ಗೋಗೇರಿ ಮಾತನಾಡಿದರು. ಎಸ್.ಡಿ. ಚಿಗರಿ, ವಿ.ಡಿ. ಶಿರಗುಂಪಿ, ಬಿ.ಎಂ. ನದಾಫ, ಪಿ.ಆರ್. ನಡುವಿನಹಳ್ಳಿ, ಈರಣ್ಣ ಮೆಟ್ಟೀನ ಉಪಸ್ಥಿತರಿದ್ದರು. ಗ್ರಾಪಂ ಅಧ್ಯಕ್ಷ ಹಾಲನಗೌಡ ಅಮರಗೋಳ ಹಾಗೂ ಉಪಾಧ್ಯಕ್ಷ ಮಹೇಶ ಹೊಳಿಯಾಚೆ ಅವರನ್ನು ಸನ್ಮಾನಿಸಲಾಯಿತು. ಅನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.