ಕಾರ್ಯಸಿದ್ಧಿಗೆ ಜ್ಞಾನದಭದ್ರ ಬುನಾದಿ ಅವಶ್ಯ
ಗದಗ: ಮನುಷ್ಯನು ತನ್ನ ಎಲ್ಲ ಕಾರ್ಯಗಳನ್ನು ಸುಗಮವಾಗಿಸಿಕೊಳ್ಳಬೇಕೆಂದರೆ ಅವನಿಗೆ ಜ್ಞಾನದ ಭದ್ರ ಬುನಾದಿ ಅವಶ್ಯ. ಆದ್ದರಿಂದ ಪ್ರತಿಯೊಬ್ಬರು ಧರ್ಮದಲ್ಲಿ ನಾನಾ ಕಾರ್ಯಗಳನ್ನು ಮಾಡುತ್ತ ತಾನು ಹಾಗೂ ತನ್ನ ಎಲ್ಲ ಪರಿಸರದ ಜನರನ್ನು ಜ್ಞಾನದ ಮುಖಾಂತರ ಸುಖಿಯಾಗಿಸಲು ಶ್ರಮಪಡಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಹೇಳಿದರು. ಈಚೆಗೆ ಅವರು ನಗರದ ಸಂಬಾಪುರ ರಸ್ತೆಯಲ್ಲಿರುವ ಜ. ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲೆಯಲ್ಲಿ ನಡೆದ 110ನೇ ಮಾಸಿಕ ಜ್ಞಾನಾಮೃತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯನು ಜನ್ಮ ಕೊಟ್ಟವರು, ಜ್ಞಾನ ನೀಡಿದವರು, ಅನ್ನ ನೀಡಿದವರನ್ನು ಎಂದಿಗೂ ಮರೆಯಬಾರದು. ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ನಡೆದು ನಮ್ಮ ಜೀವನದ ಎಲ್ಲ ಕಾರ್ಯಗಳಲ್ಲಿ ಒಳ್ಳೆಯದನ್ನೇ ಮಾಡಿ ತಾಯಿ ತಂದೆಗೆ, ಗುರುವಿಗೆ ನಮ್ಮ ಋಣವನ್ನು ತೀರಿಸಬೇಕು ಆಗಲೇ ಮನುಷ್ಯ ಸುಖಿಯಾಗಲು ಸಾಧ್ಯ. ಆದ್ದರಿಂದ ಇಂತಹ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಸರ್ವರನ್ನು ಧರ್ಮದ ಮಾರ್ಗದಲ್ಲಿ ಕೊಂಡೊಯ್ಯಲು ಶ್ರೀಕಾಶಿ ಮಠವು ಅವಿರತವಾಗಿ ಶ್ರಮಿಸುತ್ತಾ ಬಂದಿದೆ ಎಂದರು. ಸಾನ್ನಿಧ್ಯವನ್ನು ವಹಿಸಿದ್ದ ಅಡ್ನೂರಿನ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಎಂ.ಎಸ್. ಕರಿಗೌಡ್ರ, ಪ್ರಶಾಂತ ತಂಬ್ರಳ್ಳಿಮಠ ಹಾಗೂ ಸಂಗಯ್ಯ ಪಾಪಯ್ಯ ಹಿರೇಮಠ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜ ಪಟ್ಟಣಶೆಟ್ಟಿ, ವಿಜಯಕುಮಾರ ಹಿರೇಮಠ, ವೀರಣ್ಣ ಹಿರೇಮಠ, ಸಿದ್ಲಿಂಗಯ್ಯ ಹಿರೇಮಠ, ಬಸವರಾಜ ಹಿರೇಮಠ, ಎಸ್.ಎಸ್. ಮೇಟಿ, ಸಿ.ಜಿ. ಅಬ್ಬಿಗೇರಿಮಠ, ವಿ.ಎಸ್. ಶಿವಕಾಳಿಮಠ, ಉಪನ್ಯಾಸಕರಾಗಿ ಮಂಜುಳಾ ಕಾಡಪ್ಪನವರ ಉಪಸ್ಥಿತರಿದ್ದರು. ಗುರುಶಿದ್ದಯ್ಯ ಹಿರೇಮಠ ನಿರೂಪಿಸಿದರು. ಎಸ್.ಟಿ. ಜಕ್ಕನಗೌಡ್ರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

