ಯುವ ಜನತೆ ದುಶ್ಚಟ ದಾಸರಾಗಬಾರದು
ನರೇಗಲ್ಲ: ಇಂದಿನ ಯುವ ಜನತೆ ಕೆಲಸದ ಒತ್ತಡದಿಂದ ಮನಸ್ಸಿನ ನೆಮ್ಮದಿಗೆಂದು ದುಶ್ಚಟಗಳ ದಾಸರಾಗುತ್ತಿದ್ದಾರೆಂದು ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ 2 ದಿನಗಳ ಕಾಲ ರಸಾಯನ ಶಾಸ್ತ್ರ ವಿಭಾಗದಿಂದ ನಡೆದ 21ನೇ ಶತಮಾನದ ಸವಾಲುಗಳು ಶೀರ್ಷಿಕೆಯಡಿಯಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣದ 2ನೇ ದಿನದ ಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರ ಸಂಪೂರ್ಣ ಮದ್ಯಪಾನದಂತದ ಅಂಗಡಿಗಳನ್ನು ನಿಷೇಧಿಸಬೇಕು. ಯುವಜನತೆ ದುಶ್ಚಟಕ್ಕೆ ಅಂಟಿಕೊಂಡಿರುವುದು ವಿಷಾದನೀಯ ಸಂಗತಿ. ದುಶ್ಚಟ ಅಭ್ಯಾಸ ಮಾಡಿಕೊಂಡು ಪಾಶ್ಚಿಮಾತ್ಯ ಸಂಪ್ರದಾಯದತ್ತ ಮುಖ ಮಾಡಿ ಭಾರತೀಯ ಸಂಪ್ರದಾಯ ಮರೆಯುತ್ತಿದ್ದಾರೆ. ಇದನ್ನು ಶಿಕ್ಷಕರು ಗಮನಿಸಿ ನಿವಾರಣೆ ಮಾಡಲು ಮುಂದಾಗಬೇಕಿದೆ ಎಂದರು.
ಮಂಜುನಾಥ ಬೊಮ್ಮನಕಟ್ಟಿ ಮಾತನಾಡಿದರು. ಪ್ರಾ. ಡಾ. ಅರವಿಂದ ಸಜ್ಜನ ಅಧ್ಯಕ್ಷತೆ ವಹಿಸಿದ್ದರು.
ಡಾ. ಕೆ.ಬಿ. ದನ್ನೂರ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಬಸವರಾಜ ವೀರಾಪುರ, ಡಾ. ಎ.ಕೆ. ನಾಶಿ, ಉಪನ್ಯಾಸಕ ಎಸ್.ಎಸ್. ಕಂಠಿ, ಸಿ.ಜಿ. ಹುಡೇದಗಡ್ಡಿ, ಆರ್.ಎಸ್. ನೀಲಗುಂದ, ಎಂ.ಎಸ್. ಕುಲಕರ್ಣಿ, ಆರ್.ಬಿ. ಜಡಿಯಪ್ಪಗೌಡರ, ಶಿವರಾಂ, ಎಲ್.ಸಿ. ಹಿರೇಮಠ, ಎಸ್.ಎ. ನಾಶಿ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಜಿ. ಕೇಶಣ್ಣವರ ಸ್ವಾಗತಿಸಿ, ನಿರೂಪಿಸಿದರು. ಎ.ಜೆ. ಹಂಡಿ ಅವರು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

