ಗದಗ

ಗ್ರಾಮೀಣರ ಒಡಲು ಜನಪದ ಕಡಲು: ಅರ್ಜುನ ಗೊಳಸಂಗಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 15
ಗ್ರಾಮೀಣರ ಬದುಕು ಜನಪದದ ಸೊಗಡಿನಿಂದ ಕೂಡಿದೆ. ಗ್ರಾಮೀಣರ ಒಡಲಾಳದಲ್ಲಿ ಜನಪದ ಹಾಡುಗಳ ಕಡಲು ಇದೆ ಎಂದು ಜನಪದ ವಿದ್ವಾಂಸ, ಸಾಹಿತಿ ಹುಲಕೋಟಿಯ ಸರ್ಕಾರಿ ಪಪೂ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಅರ್ಜುನ ಗೊಳಸಂಗಿ ಹೇಳಿದರು.
ಅವರು ಭಾನುವಾರ ತಾಲೂಕಿನ ಹಾತಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಜನಪದ ವೈವಿಧ್ಯ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯ ಹಾಗೂ ಸಂಸ್ಕೃತಿ ವಿಷಯವಾಗಿ ಉಪನ್ಯಾಸ ನೀಡಿದರು. ಜನಪದ ಸಾಹಿತ್ಯವು ಕ್ರಿಯಾಮೂಲ ಸಾಹಿತ್ಯವಾಗಿದ್ದು, ಗ್ರಾಮೀಣರು ತಮ್ಮ ವಿಶಾಲ ಮತ್ತು ಸಾಂಸ್ಕೃತಿಕ ಮನೋಭಾವದೊಂದಿಗೆ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ ಎಂದರು.
ಆಧುನಿಕತೆಯ ಭರಾಟೆಯಲ್ಲಿ ಯಾಂತ್ರಿಕ ಜೀವನ ನಡೆಸುವ ಜನತೆಯ ಮನಕ್ಕೆ ಮುದ ನೀಡಬಲ್ಲ, ನೀತಿಯುಕ್ತ ಜನಪದ ಹಾಡುಗಳು ಮತ್ತು ಅದರ ಪ್ರಕಾರಗಳು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು. ಅತಿಥಿಗಳಾಗಿ ಸುನಂದಾ ಮಾಳೆಕೊಪ್ಪಮಠ ಹಾಗೂ ಗ್ರಾಮದ ಹಿರಿಯ ಸತ್ಯಪ್ಪ ಮೇಲ್ಮನಿ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಯೋಜಕ ಮಲ್ಲಿಕಾರ್ಜುನ ಪೂಜಾರ ಮಾತನಾಡಿದರು. ಈ ಸಂದರ್ಭದಲ್ಲಿ ಯೋಗೇಶ ಬೇಲೇರಿ, ಶರಣಪ್ಪ ನಾವಳ್ಳಿ, ಅಶೋಕ ಕುರಿ, ಮಾನಪ್ಪ ಬಡಿಗೇರ, ಈರಪ್ಪ ಮದರನಾಳ, ಮುದಕಪ್ಪ ಡೊಳ್ಳಿನ, ಸಿದ್ದಪ್ಪ ಅಬ್ಬಿಗೇರಿ, ರುದ್ರಪ್ಪ ಗದಗ, ಕರಿಯಪ್ಪ ಕೊಟೇಪ್ಪಣ್ಣವರ, ಮಲ್ಲಪ್ಪ ಸೋಮನಕಟ್ಟಿ, ರವಿ ಪಾಟೀಲ, ಮಂಜು ಕುರುಬರ, ನಾಗಮ್ಮ ಹಡಗಲಿ, ಕೊಂಡೆಪ್ಪ ಗದಗ, ಸತ್ಯಪ್ಪ ಕೊಪ್ಪಳ, ಆನಂದ ಹಡಪದ ಉಪಸ್ಥಿತರಿದ್ದರು. ಸತ್ಯಪ್ಪ ಹೊಂಬಳ ಪ್ರಾರ್ಥಿಸಿದರು. ಗದಗ ತಾಲೂಕು ಕಸಾಪ ಅಧ್ಯಕ್ಷ ಕಿಶೋರ ನಾಗರಕಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಕವಿತಾ ದಂಡಿನ ನಿರೂಪಿಸಿದರು. ಅ.ದ. ಕಟ್ಟಿಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.