ಗದಗ

ತೋಂಟದಶ್ರೀ ಅಭಿನವ ವಿವೇಕಾನಂದರಿದ್ದಂತೆ

Published On :

ಗದಗ: ಗದುಗಿನ ಜ. ತೋಂಟದ ಸಿದ್ಧಲಿಂಗ ಶ್ರೀಗಳು ನಮಗೆಲ್ಲ ಅಭಿನವ ಸ್ವಾಮಿ ವಿವೇಕಾನಂದರಂತೆ ಎಂದು ದೆಹಲಿಯ ಜಾಟವಾ ಸಮಾಜದ ಕಾರ್ಯದರ್ಶಿ ಮನೋಜ ಭಾರತಿ ಹೇಳಿದರು.
ಈಚೆಗೆ ಅವರು ದೆಹಲಿಯ ಜಾಟವಾ ಜನಾಂಗದ ಸದ್ಭಕ್ತರ ನಿಯೋಗವು ಸ್ಥಳೀಯ ಜ. ತೋಂಟದಾರ್ಯ ಮಠಕ್ಕೆ ಆಗಮಿಸಿ ಜ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ತಾವು ತಂದಿದ್ದ ಗಂಗಾ-ಯಮುನಾ ಹಾಗೂ ಕನ್ಯಾಕುಮಾರಿಯ ಸಾಗರದ ತ್ರಿವೇಣಿ ಸಂಗಮದ ನೀರಿನಿಂದ ಪಾದಪೂಜೆ ನಡೆಸಿ, ಗುರುವಂದನೆ ಸಲ್ಲಿಸಿ ಮಾತನಾಡಿದರು.  ಪೂಜ್ಯರಿಂದ 10 ವರ್ಷದ ಹಿಂದೆ ಲಿಂಗಧೀಕ್ಷೆ ಪಡೆದು ಬಸವಾದಿಶರಣ ಪ್ರಣೀತ ಲಿಂಗಾಯತ ಧರ್ಮ ಸ್ವೀಕರಿಸಿದ ನಂತರ ಪೂಜ್ಯರು ಜಾತ್ಯತೀತವಾಗಿ ತಮ್ಮ ಸಮುದಾಯದ ಸಾಮಾಜಿಕ, ಧಾರ್ಮಿಕ ಬೆಳವಣಿಗೆಯಲ್ಲಿ ದೆಹಲಿ ಕರೋಲ್ ಭಾಗದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆಲ್ಲ ಕಂಪ್ಯೂಟರ ಶಿಕ್ಷಣ ನೀಡುವ ಕೇಂದ್ರವೊಂದನ್ನು ತೆರೆದು ಪ್ರತಿನಿತ್ಯ ಸತ್ಸಂಗ, ವಚನತತ್ವ ಚರ್ಚೆ, ಪ್ರವಚನ ಮೂಲಕ ತಮ್ಮ ಬದುಕನ್ನು ಪಾವನವಾಗಿಸಿದ್ದಾರೆ.  ದೆಹಲಿಯ ಶ್ರೀಮಹಾಂತ ದೇವರು ಮಾತನಾಡಿ, ತಾವು  ತೋಂಟದ ಶ್ರೀಗಳ ಅಪ್ಪಣೆ ಮೇರೆಗೆ 5 ವರ್ಷಗಳ ಕಾಲ ದೆಹಲಿಯ ಜಾಟವಾ ಜನಾಂಗದೊಂದಿಗೆ ಕಳೆದ ದಿನಗಳನ್ನು ಸ್ಮರಿಸಿಕೊಂಡರು. ವಿಶ್ವದ ಎಲ್ಲ ಮಾನವರನ್ನು ಸಮಾನ ಪ್ರೀತಿ ವಿಶ್ವಾಸದಿಂದ ಕಾಣುವ ನಿಟ್ಟಿನಲ್ಲಿ ಬಸವತತ್ವಾಚರಣೆಗೆ ಜಾತ್ಯತೀತವಾದಕ್ಕೆ, ಮಾನವೀಯ ಕಳಕಳಿಗೆ ಗದಗ ತೋಂಟದ ಶ್ರೀಗಳು, ಇಳಕಲ್ಲನ ಮಹಾಂತ ಶ್ರೀಗಳು ಹೆಸರುವಾಸಿಯಾಗಿದ್ದಾರೆ ಎಂದರು. ದೆಹಲಿಯ ಜಾಟವಾ ಸಮಾಜದ ಅಧ್ಯಕ್ಷ ಲೇಖರಾಜ ಪ್ರಧಾನ್, ಪ್ರೇಮವತಿ ತಿತ್ತಲ್ ಮಾತನಾಡಿದರು. ಸಾನ್ನಿಧ್ಯವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, ಬಸವತತ್ವ ಅನುಯಾಯಿಗಳಾಗಿ ದೆಹಲಿಯಿಂದ ಕನ್ಯಾಕುಮಾರಿಗೆ ತೆರಳಿ ಅಲ್ಲಿಂದ ನೇರವಾಗಿ ಗದಗ ಶ್ರೀಮಠಕ್ಕೆ ಪವಿತ್ರ ಭಕ್ತಿ-ಶ್ರದ್ಧೆ ಗೌರವದೊಂದಿಗೆ ಆಗಮಿಸಿರುವ ದೆಹಲಿಯ ಜಾಟವಾ ಜನಾಂಗದ ಸಹೋದರ ಸಹೋದರಿಯರೆಲ್ಲ ನಮಗೆ ಜಂಗಮಸ್ವರೂಪಿಗಳೇ ಆಗಿದ್ದಾರೆ ಎಂದರು. ಪ್ರೊ. ಶಿವಾನಂದ ಪಟ್ಟಣಶೆಟ್ಟಿ, ಎಸ್.ಎಸ್. ಪಟ್ಟಣಶೆಟ್ಟಿ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.